ಬಿಸಿನೀರಿನ ಬುಗ್ಗೆ
ಭೂಮಿಯ ಅಂತರಾಳದಲ್ಲಿನ ಶಾಖಭರಿತವಾದ ನೀರು ಭೂ ಮಿಯ ಮೇಲ್ಪದರದಿಂದ ಹೊರ ಚಿಮ್ಮುವುದೇ ಬಿಸಿನೀರಿನ ಬುಗ್ಗೆ.
ಪೃಥ್ವಿಯ ಎಲ್ಲಾ ಭೂಖಂಡಗಳಲ್ಲಿ, ಸಾಗರ, ಸಮುದ್ರಗಳಲ್ಲಿ ಬಿಸಿನೀರಿನ ಬುಗ್ಗೆಗಳಿವೆ. ಸಾಮಾನ್ಯವಾಗಿ ಇಂತಹ ಬುಗ್ಗೆಗಳಲ್ಲಿ ನೀರಿನ ಉಷ್ಣತೆ 50 ಡಿಗ್ರೆ ಸೆಲ್ಶಿಯಸ್ಗಿಂತ ಹೆಚ್ಚಿರುತ್ತದೆ.
ಹಲವು ಬಿಸಿನೀರಿನ ಚಿಲುಮೆಗಳ ನೀರು ಗಂಧಕವನ್ನು ಹೆಚ್ಚಾಗಿ ಒಳಗೊಂಡಿರುತ್ತದೆ. ಗ್ರೀಸ್ ದೇಶದ ಇಕಾರಿಯಾ ಬಿಸಿನೀರಿನ ಚಿಲುಮೆಯು ವಿಕಿರಣಯುಕ್ತ ನೀರನ್ನು ಹೊಂದಿದೆ.
ಬಿಸಿನೀರಿನ ಬುಗ್ಗೆಯ ನೀರು ತನ್ನ ಶಾಖವನ್ನು ಭೂಗರ್ಭದಲ್ಲಿನ ಶಿಲೆಗಳಿಂದ ಪಡೆದುಕೊಳ್ಳುತ್ತದೆ. ಭೂಮಿಯ ಆಳಕ್ಕೆ ಹೋದಂತೆಲ್ಲ ಶಿಲೆಗಳ ತಾಪಮಾನವೂ ಹೆಚ್ಚುತ್ತದೆ.
ಜರ್ಮನಿಯ ಆಚೆನ್ ಬಿಸಿನೀರಿನ ಬುಗ್ಗೆ 74 ಡಿಗ್ರಿ ಸೆಂ. ಉಷ್ಣಾಂಶದ ನೀರನ್ನು ಹೊರಚಿಮ್ಮುತ್ತದೆ.
ಐಲ್ಯಾಂಡಿನಲ್ಲಿ ಬಿಸಿನೀರಿನ ಬುಗ್ಗೆಯ ನೀರನ್ನು ಕೊಳವೆ ಮೂಲಕ ಹಾಯಿಸಿ 100 ಕಿ.ಮೀ. ದೂರದ ಪಟ್ಟಣವನ್ನು ಬೆಚ್ಚಗಿಡುತ್ತಾರೆ.
1000 ಮಿ.ಲೀಟರ್(ಪ್ರತಿ ಸೆಕೆಂಡಿಗೆ) ಬಿಸಿನೀರನ್ನು ಚಿಮ್ಮುವ ಬುಗ್ಗೆಗಳು ಅತ್ಯಂತ ದೊಡ್ಡ ಬಿಸಿನೀರಿನ ಬುಗ್ಗೆಗಳು ಎಂದು ಪರಿಗಣಿಸಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

