ಬೈಟುಕಾಫಿ

ಕೇಳಿಸಿಕೊಳ್ಳೋಣ

ಕೇಳಿಸಿಕೊಳ್ಳೋಣ
Published On :

ಒಮ್ಮೊಮ್ಮೆ ಹಾಗಾಗುವುದು ಇದೆ. ನಾವು ಅದೆಷ್ಟೇ ಸರಿಯಾಗಿ ಕೇಳಿಸಿಕೊಂಡರೂ ಸರಿಯಾಗಿ ಕೇಳುವುದೇ ಇಲ್ಲ. ಹಾಗೆಂದು ಅದು ಶ್ರವಣ ದೋಷವೆಂದೇನೂ ಅಲ್ಲ. ಕಿವಿಯ ಎಲ್ಲ ಭಾಗಗಳೂ ಸರಿಯಾಗಿಯೇ ಕೆಲಸ ಮಾಡುತ್ತಿರುತ್ತವೆ. ಬಹುಶಃ ಸುತ್ತ ಮುತ್ತಲ ಗದ್ದಲ ಹೆಚ್ಚಾಗಿರಬೇಕು ಎಂಬ ಊಹೆಯೂ ತಪ್ಪಾಗಿರುತ್ತದೆ. ಅತ್ಯಂತ ನೀರವದಲ್ಲಿದ್ದರೂ ಎದುರಿರುವ ವ್ಯಕ್ತಿ ಹೇಳಿದ್ದು ನಮಗೆ ಕೇಳಿಸದೇ ಹೋಗುತ್ತದೆ. ಇದೆಂಥಾ ವಿಚಿತ್ರ ಎಂದು ಕೇಳಬಹುದು. ಆದರೆ ಅದು ಸತ್ಯ.

ಇಲ್ಲಿ ಸಮಸ್ಯೆ ಇರುವುದು ನಾವು ಕೇಳಿಸಿಕೊಳ್ಳುವುದರಲ್ಲಿ. ಎಲ್ಲ ಸರಿಯಾಗಿದ್ದರೂ, ಯಾವುದೇ ಅಡ್ಡಿ ಆತಂಕಗಳಿಲ್ಲದಿದ್ದರೂ ನಮಗೆ ಕೆಲವೊಂದು ವಿಷಯ ಸೂಕ್ತವಾಗಿ ಕೇಳುವುದಿಲ್ಲ ಅಂದರೆ ಅದರ ಅರ್ಥ ಕೇಳಿಸಿಕೊಳ್ಳುವವನ ಕ್ರಿಯೆಯಲ್ಲಿನ ದೋಷವೇ ಹೊರತೂ ಬೇರೇನೂ ಆಗಿರುವುದಿಲ್ಲ. ಇದಕ್ಕೆ ಮೂಲ ಕಾರಣ ನಮ್ಮ ಮನಸ್ಸು. ಕೆಲವೊಂದು ವಿಷಯದಲ್ಲಿ ನಾವು ಅತ್ಯಂತ ಪೂರ್ವಗ್ರಹಪೀಡಿತರಾಗಿ ಯೋಚಿಸುತ್ತಿರುತ್ತೇವೆ. ಅಂಥ ಸಂದರ್ಭದಲ್ಲಿ ಅದು ಎಷ್ಟೇ ಸ್ಪಷ್ಟವಾಗಿ ಹೇಳಲ್ಪಟ್ಟಿದ್ದರೂ, ಗಟ್ಟಿಯಾಗಿ ಕಿರುಚಿಕೊಂಡಿದ್ದರೂ ಅದನ್ನು ನಾವು ಸ್ವೀಕರಿಸುವ ರೀತಿಯೇ ಬೇರೆಯಾಗಿರುತ್ತದೆ. ಹೀಗಾಗಿ ನಾವು ಉತ್ತಮ ಕೇಳುಗರಾಗುವುದೇ ಇಲ್ಲ.

ಇಲ್ಲಿ  ಕೇಳಿಸಿಕೊಳ್ಳುವುದು ಎಂಬುದು ಕೇವಲ ಭೌತಿಕ ಪ್ರಕ್ರಿಯೆಯಲ್ಲ. ಅದು ಆಂತರಂಗಿಕ. ಬೇಕಿದ್ದರೆ ನೋಡಿ, ನಮಗೆ ತೀರಾ ಹತ್ತಿರವಿದ್ದವರು, ತೀರಾ ಪ್ರೀತಿ ಪಾತ್ರರು ಬಾಯಿಬಿಟ್ಟು ಏನನ್ನೂ ಹೇಳದಿದ್ದರೂ ಅವರಿಗೆ ಬೇಕಾದುದನ್ನು ನಾವು ಮಾಡಿಬಿಟ್ಟಿರುತ್ತೇವೆ. ಅಂದರೆ ನಮಗೆ ಅಂತರಂಗಕ್ಕೆ ಕಿವಿಯಾಗುವ ಶಕ್ತಿ ಇದೆಯೆಂದಾಯಿತು. ಆದರೆ ಬಹುತೇಕ ಸಂದರ್ಭದಲ್ಲಿ ನಾವದನ್ನು ಬಳಸುವುದೇ ಇಲ್ಲ. ಅಥವಾ ಋಣಾತ್ಮಕ ನಿಟ್ಟಿನಲ್ಲಿ ಬಳಸುತ್ತೇವೆ. ಅದರಿಂದಲೇ ನಾವು ಉತ್ತಮ ಕೇಳುಗರಾಗಲು ಸಾಧ್ಯವೇ ಆಗುವುದಿಲ್ಲ.

- ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.