ಪ್ರಯಾಣಿಕರ ಸಮಯ ಹಾಳು
ಯಾವುದೇ ವಾಹನದ ಚಾಲಕ ಅಜಾಗರೂಕತೆಯಿಂದ ವರ್ತಿಸಿದ್ದಲ್ಲಿ ಅಪಘಾತ ಆಗುವುದರಲ್ಲಿ ಎರಡು ಮಾತಿಲ್ಲ. ಈ ವಿಚಾರದಲ್ಲಿ ಹೆಚ್ಚಾಗಿ ಖಾಸಗಿ ಬಸ್ಗಳ ಅಪಘಾತವೇ ಹೆಚ್ಚು. ಸರಕಾರಿ ಬಸ್ಗಳಲ್ಲಿ ಅಪಘಾತವಾಗುವುದಿಲ್ಲವೆಂದಲ್ಲ. ಅದರ ಸಂಖ್ಯೆ ಕಡಿಮೆ ಕಾರಣ ವೇಗಮಿತಿಯಿದೆ. ಸಮಯ ಪ್ರಜ್ಞೆಯಿದೆ. ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಹಳ್ಳಿಗಾಡಿನ ಖಾಸಗಿ ಬಸ್ಗಳಲ್ಲಿ ಚಲಿಸುವುದೆಂದರೆ ನರಕಯಾತನೆ. ಬಸ್ಸ್ಟಾಪ್ನಿಂದ ಹೇಳಿದ ಸಮಯಕ್ಕೆ ಬಸ್ ಹೊರಡುವುದಿಲ್ಲ. ಕಾರಣ ಬಸ್ಸಿನ ಒಳಗೆ, ಹೊರಗೆ, ಮೇಲೆ ನಿಲ್ಲಲು ಜಾಗವಿರಬಾರದು ಆ ಮಟ್ಟಿಗೆ ಜನರನ್ನು ತುಂಬಿಸುತ್ತಾರೆ. ಆ ಬಸ್ ನಿಧಾನವಾಗಿ ಚಲಿಸುತ್ತಾ ಒಂದು ಕಡೆ ವಾಲಿರುತ್ತದೆ. ತುಂಬಾ ಕಡೆ ನಿಲ್ಲಿಸುತ್ತಾ ಪ್ರಯಾಣಿಕರ ಸಮಯ ಹಾಳು ಮಾಡುತ್ತಾರೆ. ಆದರೆ, ಸರ್ಕಾರಿ ಬಸ್ಗಳು ಹಾಗಲ್ಲ ಸಮಯಪಾಲನೆಯಿದ್ದು ಅದರ ಮೇಲೆ ಸರ್ಕಾರದ ಲಗಾಮು ಇರುತ್ತದೆ. ಖಾಸಗಿಯವರಿಗೆ ಇಂತಹ ಯಾವುದೇ ಲಗಾಮು ಇರುವುದಿಲ್ಲ.
-ಅನಿಲ್ ಕುಮಾರ್.ಸಿ., ನಾಯಕನಹಟ್ಟಿ, ಚಳ್ಳಕೆರೆ
ಅವಘಡ ಸಾಮಾನ್ಯ ವೈಭವೀಕರಣ ಬೇಡ
ಖಾಸಗಿ ಬಸ್ಗಳ ದುರಂತವನ್ನು ಕೇವಲ ಚಾಲಕ ಹಾಗೂ ಮಾಲೀಕರ ಹೊಣೆ ಎಂಬಂತೆ ಹಲವು ಮಾಧ್ಯಮಗಳು ಬಿಂಬಿಸುತ್ತಿವೆ. ಆದರೆ, ದೇಹ ಎಂದ ಮೇಲೆ ಕಾಯಿಲೆ ಸಹಜ, ಹಾಗೆಯೇ ಬಸ್ ದುರಂತವು ಸಹಜ. ಅದನ್ನು ವೈಭವೀಕರಿಸುವುದು ತಪ್ಪು. ಪ್ರತಿದಿನ ಒಂದಲ್ಲ ಒಂದು ಸರ್ಕಾರಿ ಬಸ್ಸು ಅಪಘಾತವಾಗುವುದಿಲ್ಲವೇ ಅದನ್ನು ಏಕೆ ಮಾಧ್ಯಮಗಳು ವೈಭವೀಕರಿಸುವುದಿಲ್ಲ. ಸರ್ಕಾರದ ಬಸ್ಸುಗಳಿಗೆ ಹೋಲಿಕೆ ಮಾಡಿದರೆ ಸಮಯ ಪರಿಪಾಲನೆಯಲ್ಲಿ ಖಾಸಗಿ ಬಸ್ಸುಗಳೇ ಲೇಸು, ಟಿಕೆಟ್ ದರದಲ್ಲಿ ರಿಯಾಯಿತಿ, ಆರಾಮದಾಯಕ ಪ್ರಯಾಣವಾಗಿರುತ್ತದೆ. ಆದ್ದರಿಂದ ಪ್ರಸುತ್ತ ವೇಗದ ಬದುಕಿಗೆ ಸರ್ಕಾರಿ ಬಸ್ಸುಗಳ ವೇಗ ಹಾಗೂ ಸಮಯ ನಂಬಿ ಹೋಗುವುದು ಕಷ್ಟದ ಕೆಲಸ. ಸಮಾಜಕ್ಕೆ ಸರ್ಕಾರಿ ಸೌಲಭ್ಯದೊಂದಿಗೆ ಖಾಸಗಿಕರಣದ ಸೌಲಭ್ಯವೂ ಅಗತ್ಯ ಅಲ್ಲವೇ ದಯವಿಟ್ಟು ವೈಭವಿಕರಣ ಕೊನೆಯಾಗಿಸಿ, ಸಮಯ ಪರಿಪಾಲನೆ ತಿಳಿಸಿ.
-ನರೇಶ.ಎಸ್.ಬಿ., ಹೂವಿನ ಹಡಗಲಿ.
ಸರ್ಕಾರಿ ಬಸ್ಗಳಲ್ಲಿ ಸೌಕರ್ಯ ಕೊರತೆ
ಖಾಸಗಿ ಬಸ್ ಪ್ರಯಾಣ ಮತ್ತು ಸರಕಾರಿ ಬಸ್ ಪ್ರಯಾಣ ಎಂಬ ಜಿಜ್ಞಾಸೆಯ ಜೊತೆಯಲ್ಲಿ ಎಲ್ಲರೂ ಎಲ್ಲ ಕಡೆಗೆ ಪಯಣಿಸಬಹುದಾದ ಮಾರ್ಗದಲ್ಲಿ ಸರಕಾರಿ ಬಸ್ ಓಡುತ್ತಿಲ್ಲ ಎಂಬ ಸಂಗತಿ ನೆನಪಿಡಬೇಕು. ಎಷ್ಟೋ ಕಡೆಗಳಲ್ಲಿ ಖಾಸಗಿ ಬಸ್ ಹಾವಳಿ ಸಿಕ್ಕಾಪಟ್ಟೆ ಇದೆ. ಅಂಥ ಕಡೆಗಳಲ್ಲಿ ಬಸ್ಗಳಲ್ಲಿ ಜನರನ್ನು ತುಂಬುವ ರೀತಿ ನೋಡಿದರೆ, ಬಸ್ ಹತ್ತಲಿಕ್ಕೆ ಭಯವಾಗುತ್ತದೆ. ಇನ್ನು ಎಲ್ಲಾ ಖಾಸಗಿ ಬಸ್ಗಳೂ ಹಾಗಿಲ್ಲ. ಕೆಲವು ಕಂಪನಿಗಳವರು ತಮ್ಮ ಬಸ್ ಅಷ್ಟೇ ಅಲ್ಲ ಅಲ್ಲಿನ ವ್ಯವಸ್ಥೆಯ ಬಗ್ಗೆ ಅಭಿಮಾನ ಪಡುವಂತೆ ಬಸ್ ಗಳನ್ನಿಟ್ಟಿದ್ದಾರೆ. ಈ ಬಸ್ಗಳಲ್ಲಿನ ಪ್ರಯಾಣ ಉತ್ತಮ. ಸರಕಾರ ಮೊದಲು ಎಲ್ಲಾ ಗ್ರಾಮೀಣ ಸ್ಥಳಗಳಿಗೆ ಎಲ್ಲಾ ಕಡೆಗೂ ಬಸ್ ಬಿಡುವಂತಾಗಬೇಕು. ಜೊತೆಗೆ ಖಾಸಗಿಯವರ ಮೇಲೆ ನಿಯಂತ್ರಣ ಸಾಧಿಸಬೇಕು.
-ವೈ.ಬಿ.ಕಡಕೋಳ, ಮುನವಳ್ಳಿ
'ಜಗುಲಿ'ಯಲ್ಲಿ ಈ ಸಲದ ವಿಷಯ 'ಸಚಿನ್ ನಿವೃತ್ತಿ'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

