ಬೈಟುಕಾಫಿ

ಖಾಸಗಿ ಬಸ್ಸು ಬೇಕು

Published On :

ಸರ್ಕಾರಿ ಬಸ್ಸುಗಳು ಪ್ರತಿದಿನ ಅಪಘಾತಗಳಿಗೆ ಸಿಕ್ಕಿಕೊಳ್ಳುತ್ತಿವೆ. ಕೆಂಪೇಗೌಡ ಬಸ್ ನಿಲ್ದಾಣದಲ್ಲಿರುವ ಗಣಪತಿಗೆ  ಪೂಜೆ ನಡೆಯುತ್ತಿಲ್ಲವಿರಬೇಕು.ಹೀಗಾಗಿ ದೋಷ ಉತ್ಪತ್ತಿಯಾಗಿ ಅಪಘಾತ ಘಟಿಸುತ್ತಿದೆಯೇನೊ?.  ಖಾಸಗಿ ಬಸ್ಸುಗಳಲ್ಲಿ ಸೌಲಭ್ಯ ಚೆನ್ನಾಗಿದೆ. ಟಿಕೆಟ್ ದರವೂ ಕಡಿಮೆ ಇರುತ್ತದೆ.   ಸರ್ಕಾರಿ ಬಸ್ಸುಗಳಲ್ಲಿ ಕಿಟಕಿ ಗಾಜು ಮುಚ್ಚಲು ತೆಗೆಯಲು ಸಾಧ್ಯ ಆಗದೆ ಪ್ರಯಾಣಿಕರು ಪರದಾಡುವಂತಾಗಿದೆ. ಕೆಲವೊಮ್ಮೆ ಜಗಳವೂ ನಡೆಯುತ್ತದೆ. ಖಾಸಗಿ ಬಸ್ಸುಗಳಲ್ಲಿ ಇಂತಹ ತೊಂದರೆಗಳಿಲ್ಲ. ಹಾಗೆಯೇ ನಮಗೆ ಅನುಕೂಲವಾಗುವ ಕಡೆ ನಿಲುಗಡೆ ಕೊಡುವುದರಿಂದ ಭಾರಿ ಅನುಕೂಲವಾಗುತ್ತದೆ. ಒಮ್ಮೊಮ್ಮೆ ಸರ್ಕಾರಿ ಬಸ್‌ಗಳಲ್ಲಿ ಸೀಟುಗಳು ಖಾಲಿ ಇದ್ದರೂ ನಿಲ್ದಾಣಗಳಲ್ಲಿ ನಿಲ್ಲಿಸದೆ  ಹೋಗುತ್ತಾರೆ. ಪಟ್ಟಿ ಮಾಡುತ್ತಾ ಹೋದರೆ ಮುಗಿಯುವುದಿಲ್ಲ. ಹಾಗೆಯೇ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಒಂದೇ ಸೂರಿನಲ್ಲಿದ್ದ ಸರ್ಕಾರಿ ಬಸ್ಸುಗಳನ್ನು ಬೇರೆ ಬೇರೆ ಪ್ರದೇಶ ವ್ಯಾಪ್ತಿಯಲ್ಲಿ ಹಾಕಿರುವುದು ಪ್ರಯಾಣಿಕರಿಗೆ ಕಿರಿಕಿರಿ ಆಗಿದೆ. ಒಂದೇ ಸ್ಥಳದಿಂದ ಬಸ್ಸುಗಳು ಚಾಲ್ತಿ ಆಗಬೇಕು.
- ಎಚ್ ಸಿ. ಸತ್ಯನಾರಾಯಣ ಉರಾಳ, ಯಶವಂತಪುರ.

ನಿರ್ಲಕ್ಷ್ಯಕ್ಕೆ ಕಠಿಣ ಶಿಕ್ಷೆಯಾಗಲಿ
ಖಾಸಗಿ ಬಸ್ ಪ್ರಯಾಣವಾಗಲಿ, ಸರ್ಕಾರಿ ಬಸ್ ಪ್ರಯಾಣವಾಗಲಿ ಯಾವುದು ಸುರಕ್ಷಿತ ಎನ್ನುವುದಕ್ಕಿಂತ ಚಾಲಕಯಾವ ಮಟ್ಟಿಗೆ ಕರ್ತವ್ಯ ನಿಭಾಯಿಸುತ್ತಿದ್ದಾನೆ ಎಂಬುದರ ಮೇಲೆ ನಿರ್ಧಾರಿತವಾಗುತ್ತದೆ. ಅಪಘಾತಗಳಿಗೆ ಕಾರಣ, ಹಣೆ ಬರಹಕೆ ಹೊಣೆ ಯಾರು ಎನ್ನದೆ ವಿಧಿಯಿಲ್ಲ. ದೂರ ಕ್ರಮಿಸುವ ಖಾಸಗಿ ಬಸ್‌ಗಳಿಗೆ ಒಬ್ಬನನ್ನೇ ಚಾಲಕನಾಗಿ ನೇಮಿಸಿರುತ್ತಾರೆ. ಇಂತಹ ಸಂದರ್ಭಗಳಲ್ಲಿ ಹೆಚ್ಚಾಗಿ ದುರ್ಘಟನೆ ಸಂಭವಿಸುತ್ತದೆ. ದೂರದ ಊರುಗಳಿಗೆ ಪ್ರಯಾಣಿಸುವಾಗ  ಬಸ್‌ಗಳಲ್ಲಿ ಕಡ್ಡಾಯವಾಗಿ ಇಬ್ಬರು ಚಾಲಕರನ್ನು ನೇಮಿಸಬೇಕು. ಅಪಘಾತ ಸಂದರ್ಭದಲ್ಲಿ ಪಾರಾಗಲು ಅನುಕೂಲವಾಗುವಂತ ಕಿಟಕಿ ಬಾಗಿಲುಗಳನ್ನು ಜೋಡಿಸಬೇಕು. ಈ ಬಗ್ಗೆ ಚಾಲಕರಿಗೂ ಸೂಕ್ತ ತರಬೇತಿ ನೀಡಿರಬೇಕು. ಇತ್ತೀಚೆಗೆ ಚಾಲನೆ ವೇಳೆ ಚಾಲಕರು ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಿರುತ್ತಾರೆ. ಇಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು.
- ಬರ್ಕಲಿ ರಮೇಶ್, ಮಂಡ್ಯ

ಅಪ್ರಮಾಣಿಕತೆ ದೂರವಾಗಬೇಕು
ಪ್ರಶ್ನೆಯಲ್ಲಿಯೇ ದ್ವಂದ್ವವಿದೆ. ಬದುಕು ಜಟಕಾಬಂಡಿ ವಿಧಿ ಅದರ ಸಾಹೇಬ ಎಂದು ಡಿವಿಜಿ ಹೇಳಿದ್ದಾರೆ. ನಮ್ಮ ಗ್ರಹಗತಿ ಸರಿ ಇದ್ದರೆ ಎರಡೂ ಒಂದೇ. ನಮ್ಮನ್ನು ನಾವೇ ನಂಬುವುದು ಕಷ್ಟ. ಇನ್ನೊಬ್ಬರನ್ನು ನಂಬಿ ಪ್ರಯಾಣಿಸುವುದು ಎಷ್ಟು ಸುರಕ್ಷಿತ? ಆದರೂ ಅನಿವಾರ್ಯ. ಪ್ರಾಯಾಣಿಸಬೇಕು.
ಖಾಸಗಿ ಬಸ್‌ನವರು ಸರ್ಕಾರಿ ಬಸ್‌ಗಳಿಗಿಂತ ಹೆಚ್ಚು ಮುತುವರ್ಜಿ ವಹಿಸುತ್ತಾರೆಂಬುದು ಭ್ರಮೆ. ಅವರಿಗೆ ದುಡ್ಡು ಮಾಡುವುದನ್ನು ಬಿಟ್ಟರೆ ಬೇರೆ ಕಡೆ ಗಮನವೇ ಇರುವುದಿಲ್ಲ. ಸಕಾಲದಲ್ಲಿ ದುರಸ್ಥಿ ಮಾಡದೆ ಓಡಿಸುವುದು, ಪರವಾನಗಿ ಇಲ್ಲದ ಚಾಲಕರ ನೇಮಕ, ಅಗತ್ಯಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಹಾಕುವುದು, ಬೇರೆ ಬಸ್‌ಗಳೊಂದಿಗೆ ಪೈಪೋಟಿ ಅಪಘಾತದ ದಾರಿಗಳಾಗಿವೆ. ಇವುಗಳಿಗೆ ಮೊದಲು ಕಡಿವಾಣ ಹಾಕಬೇಕು.
- ಎ. ಎಸ್. ಶಾಂತಾಬಾಯಿ, ಶಿವಮೊಗ್ಗ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.