ಚಪಲೆಯ ವ್ಯಾಪಾರ
ಅವಳೋ ಶ್ರೀಮಂತರ ಮನೆಯವಳು. ತೆಳ್ಳನೆ ಬೆಳ್ಳನೆ ಬಳುಕುವ ದೇಹ. ದಾರಿಯ ಬದಿಯಲ್ಲೇ ಮನೆ. ಕಿಟಕಿ ಪಕ್ಕದಲ್ಲೇ ಕುಳಿತು ....

ಅವಳೋ ಶ್ರೀಮಂತರ ಮನೆಯವಳು. ತೆಳ್ಳನೆ ಬೆಳ್ಳನೆ ಬಳುಕುವ ದೇಹ. ದಾರಿಯ ಬದಿಯಲ್ಲೇ ಮನೆ. ಕಿಟಕಿ ಪಕ್ಕದಲ್ಲೇ ಕುಳಿತು ದಾರಿಯಲ್ಲಿ ಹೋಗಿ ಬರುವವರನ್ನು ನೋಡುತ್ತ ನಗುತ್ತಾಳೆ. ತನ್ನ ಕಣ್ಣಿನ ಬಾಣಗಳು ಅವರಿಗೆ ಎಂಥ ಆಘಾತ ಮಾಡಬಹುದು ಎಂಬ ಅರಿವು ಅವಳಿಗೆ ಇಲ್ಲದಿಲ್ಲ. ಹಾಗಂತ ಅವರ ಕೈಗಾದರೂ ಸಿಗುತ್ತಾಳೆಯೆ? ಅದೂ ಇಲ್ಲ. ಇಲಿಗೆ ಪ್ರಾಣಸಂಕಟ ತಂದೊಡ್ಡುವ ಬೆಕ್ಕಿನ ಚಿನ್ನಾಟ ಅವಳದು.
ಹಾಗೆ ಹೋಗಿ ಬರುವವರಲ್ಲಿ ಒಬ್ಬ ತರುಣ ಕವಿ. ಆತನೂ ಈಕೆಯನ್ನು ನೋಡಿದ. ಈಕೆಯ ಚೇಷ್ಟೆಗಳನ್ನು ಗಮನಿಸಿದ. ಅವನಿಂದ ಸುಮ್ಮನಿರಲಾಗಲಿಲ್ಲ. ಹೇಳಿಯೇಬಿಟ್ಟ:
ಅಂಗಾನಿ ದತ್ತ್ವಾ ಹೇಮಾಂಗಿ ಪ್ರಾಣಾನ್ ಕ್ರೀಣಾಸಿ ಚೇನ್ನೈಣಾಮ್
ಯುಕ್ತಮೇತನ್ನತು ಪುನಃ ಕೋಣಂ ನಯನಪದ್ಮಯೋಃ
ಏ ಹುಡುಗಿ! ಸುವರ್ಣದ ಮೈಬಣ್ಣದ ಚೆಲುವೆ! ಬರೀ ಕಡೆಗಣ್ಣ ನೋಟವನ್ನು ಮಾತ್ರ ಪುರುಷರಿಗೆ ಕೊಟ್ಟು, ಅವರ ಪ್ರಾಣಗಳನ್ನೇ ಕೊಂಡುಕೊಳ್ಳುತ್ತಿದ್ದೀಯಲ್ಲ- ಇದೆಂಥ ವ್ಯಾಪಾರ ನಿನ್ನದು? ನಿನ್ನ ಅಂಗಾಂಗಗಳನ್ನೇ ಅವರಿಗೆ ಕೊಟ್ಟು, ಅವರ ಪ್ರಾಣಗಳನ್ನು ಕೊಂಡರೆ ಆಗ ಅದು ಸರಿಯಾದ ವ್ಯಾಪಾರವೆನಿಸೀತು!
ಅಂಗಾಂಗಗಳನ್ನು ಕೊಡುವುದೆಂದರೆ ಆಲಿಂಗನವನ್ನು ಕೊಡುವುದೆಂದರ್ಥ. ಆಲಿಂಗನದಿಂದ ಮುಂದಿನದೆಲ್ಲ ತನ್ನಿಂತಾನೇ ಈಡೇರುವುದು. ತರುಣಿಯ ಚಪಲತ್ವವನ್ನು ಖಂಡಿಸಿದ ಹಾಗೂ ಆಯಿತು, ಪರೋಕ್ಷ ಆಹ್ವಾನವನ್ನು ನೀಡಿದ ಹಾಗೂ ಆಯಿತು.
ಹರೆಯದ ಹುಡುಗಿಯರು ಸೃಷ್ಟಿಸುವ ದೊಡ್ಡ ಸಮಸ್ಯೆ ಇದು. ನಿಜವಾಗಿ, ತಾವು ಈ ಸಮಸ್ಯೆಯ ಸೃಷ್ಟಿಕರ್ತರು ಎಂಬ ಅರಿವೂ ಅವರಿಗೆ ಇಲ್ಲ. ಹಾಗಾಗಿ ಅವರನ್ನು ದೂಷಿಸುವುದೂ ಯುಕ್ತವಲ್ಲ ಎನ್ನಿ.
- ಹರಿಹರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


