ಬೈಟುಕಾಫಿ

ಆಕಾಶ ನಡಿಗೆ ಮಾಡಿ!

Published On :

ಪಾದಚಾರಿಗಳಿಗೆ ಸಾಕಷ್ಟು ರಸ್ತೆ ನಡಾವಳಿಗಳಿವೆ. ಅಂತಹ ನಡಾವಳಿಗಳನ್ನು ಪಾಲಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಅಂತಹ ಕೆಲ ನಡಾವಳಿಗಳು ಇಲ್ಲಿವೆ.
- ಹೆಚ್ಚಿನ ಮಂದಿ ನಿಂತಿರುವ ವಾಹನದ ಹಿಂಭಾಗದಿಂದ ರಸ್ತೆ ದಾಟುತ್ತಾರೆ, ಹಾಗೆ ಮಾಡಬೇಡಿ. ಅದು ಹಿಂದಕ್ಕೆ ಚಲಿಸಿದರೆ ಕಷ್ಟ. ಹಿಂಬದಿ ಇರುವ ಜನ ಚಾಲಕನಿಗೆ ಕಾಣುವುದಿಲ್ಲ.
- ರಸ್ತೆಯ ಮೂಲೆ/ತಿರುವುಗಳಲ್ಲಿ ನಿಲ್ಲುವುದು ಬೇಡ ಹಾಗೂ ಆ ಸ್ಥಳಗಳಲ್ಲಿ ರಸ್ತೆ ದಾಟುವುದು ಕಡಿಮೆ ಮಾಡಿ. ವಾಹನಗಳ ಮಧ್ಯೆ ನುಗ್ಗಬೇಡಿ. ಯಾಕೆಂದರೆ ಕೆಲವು ತಿರುವುಗಳಲ್ಲಿ ವಾಹನಗಳಿಗೆ ಮುಂದಿನಿಂದ ಬರುವ ವಾಹನಗಳು ಕಾಣುವುದಿಲ್ಲ. ಆಗ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಿದೆ.
- ರಸ್ತೆಗಳ ನಡುವಿನಲ್ಲಿ ಅಡ್ಡಲಾಗಿ ಹಾಕಿರುವ ವಿಭಜಕಗಳನ್ನು ಹತ್ತಿ ರಸ್ತೆ ದಾಟುವುದು, ವಿಭಜಕದ ಪಕ್ಕ ನಿಲ್ಲುವುದು ಮಾಡಬಾರದು. ಸುರಂಗ ಮಾರ್ಗ, ಸ್ಕೈವಾಕ್, ಪಾದಚಾರಿ ರಸ್ತೆ, ಅಡ್ಡಪಟ್ಟಿಗಳನ್ನು ಬಳಸಿ.
ಹಿರಿಯರು ನಡಾವಳಿಗಳನ್ನು ಅನುಸರಿಸುವುದರ ಜತೆಗೆ ಮನೆಯಲ್ಲಿ ಮಕ್ಕಳಿಗೆ ರಸ್ತೆ ನಡಾವಳಿಗಳ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ಮಕ್ಕಳು ಹೇಗೆ ರಸ್ತೆ ದಾಟಬೇಕು. ಆಟ ಆಡುವ ಸ್ಥಳ ಯಾವುದು, ರಸ್ತೆಯಲ್ಲಿ ಆಟವಾಡಬಾರದು ಎಂಬಿತ್ಯಾದಿ ಬಗ್ಗೆ ಅವರಿಗೆ ಮಾಹಿತಿ ನೀಡಬೇಕಿದೆ.
ಈ ನಿಟ್ಟಿನಲ್ಲಿ ಪೊಲೀಸರು ಶಾಲಾ ಮಕ್ಕಳಿಗೆ ಆಗಾಗ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಮೊಳಕೆಯಲ್ಲೇ ಅವರನ್ನು ತಿದ್ದುವ ಕೆಲಸ ಆಗುತ್ತಿದೆ.
ಆದರೆ, ಹಿರಿಯರಿಗೆ ಯಾವುದೇ ರೀತಿಯ ತರಬೇತಿ ಇರುವುದಿಲ್ಲ. ಆದರೂ ಅವರು ತಪ್ಪು ಮಾಡುತ್ತಾರೆ ಎಂದು ಪೊಲೀಸರು ಬೇಸರ ವ್ಯಕ್ತಪಡಿಸುತ್ತಾರೆ.

(ಮುಂದುವರಿಯುವುದು)

- ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.