ರತ್ನ ಇಲ್ಲದ ವಿದೇಹ

ರಾಜರತ್ನಂ ಹೆಸರು ಗೊತ್ತಿಲ್ಲದವರಿಗೂ 'ನಾಯಿಮರಿ' ಪದ್ಯ ಗೊತ್ತು. 'ಬ್ರಹ್ಮ ನಿಂಗೆ ಜೋಡುಸ್ತೀನಿ ಹೆಂಡ ಮುಟ್ಟಿದ್ ಕೈನ' ಎಂಬ ರತ್ನನ ಪದಗಳನ್ನು ಗುನುಗುತ್ತಾರೆ. ರತ್ನನ ಪದಗಳು, ನಾಗನ ಪದಗಳು, ಅಪಾರವಾದ ಮಕ್ಕಳ ಸಾಹಿತ್ಯ, ಅನುವಾದಗಳ ಮೂಲಕ ಕನ್ನಡ ಸಾಹಿತ್ಯ ವಲಯದಲ್ಲಿ ಅಗ್ರಗಣ್ಯರೆನಿಸಿದವರು. ಅವರಿದ್ದ ಮನೆಯೀಗ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಮೌನವಾಗಿ ಹಳೆಯ ಕತೆಗಳನ್ನು ಉಸಿರುತ್ತಿದೆ.
ರಾಜರತ್ನಂ ಹುಟ್ಟಿದ್ದು ಈಗಿನ ರಾಮನಗರದ ಕ್ಲೋಸ್ಪೇಟೆಯಲ್ಲಿ, 1908ರಲ್ಲಿ. ಜಿ.ಪಿ.ಗೋಪಾಲಕೃಷ್ಣ ಅಯ್ಯಂಗಾರ್ ಇವರ ತಂದೆ. 'ಗುಂಡ್ಲುಪಂಡಿತ'ರೆಂದೇ ಹೆಸರಾದ ಮೈಸೂರು ಕಡೆಯ ಪ್ರಸಿದ್ಧ ಪಂಡಿತ ಮನೆತನ. ನಂತರದ ದಿನಗಳಲ್ಲಿ ಕೊಳ್ಳೇಗಾಲದಲ್ಲಿ ವಿದ್ಯಾಭ್ಯಾಸ. ಅಲ್ಲಿಂದ ಬೆಂಗಳೂರಿಗೆ ಸ್ಥಳಾಂತರ. ಬೆಳೆದದ್ದು, ಸಾಹಿತ್ಯ ಚಟುವಟಿಕೆಗಳೆಲ್ಲಾ ಇಲ್ಲೇ. ಮಲ್ಲೇಶ್ವರದ ಗಾಂಧಿ ಸಾಹಿತ್ಯ ಸಂಘ ಇವರ ಎಲ್ಲ ಕೆಲಸಗಳಿಗೂ ನೆಲೆ.
ಇವರ ಮನೆ ಮಲ್ಲೇಶ್ವರಂನ 17ನೇ ಕ್ರಾಸ್ನಲ್ಲಿದೆ. 'ವಿದೇಹ' ಮನೆಯ ಹೆಸರು. ರಾಜರತ್ನಂ ಅವರ ಧರ್ಮಪತ್ನಿಯ ಹೆಸರು ಸೀತಾ. ಸೀತೆಯ ಇನ್ನೊಂದು ಹೆಸರು ವೈದೇಹಿ- ವಿದೇಹದ ರಾಜನ ಮಗಳು. ಇಲ್ಲಿ ಹಳೆಯ ಮನೆಯನ್ನು ಒಡೆದು ಹೊಸ ಮನೆ ಕಟ್ಟಲಾಗಿತ್ತು. ರಾಜರತ್ನಂ ಕಾಲವಾದ ನಂತರ ಇವರ ಮಗ ಶ್ರೀಧರ್ ಹಾಗೂ ಪ್ನಿ ಶೈಲಾ ವಾಸಿಸುತ್ತಿದ್ದರು. ಈಗ ಮನೆಗೆ ಬೀಗ ಬಿದ್ದಿದೆ. ಅದರ ಪಕ್ಕದ ಮನೆಯಲ್ಲಿ ಮಗಳು ಶ್ರೀಮತಿ ರಾಜರತ್ನಂ ವಾಸಿಸುತ್ತಿದ್ದಾರೆ.ಟಿ
ನಾವೆಲ್ಲ ನಮ್ಮ ತಂದೆಯ ಜತೆಯಲ್ಲಿ ಬೆಳೆದಿದ್ದೇವೆ. ಅವರು ಪ್ರತಿದಿನ ನಮ್ಮಿಂದ ಹಾಡು ಹಾಡಿಸುತ್ತಿದ್ದರು, ಕತೆಗಳನ್ನು ಹೇಳುತ್ತಿದ್ದರು. ಇಂತಹ ವ್ಯಕ್ತಿಯನ್ನು ನನ್ನ ತಂದೆಯಾಗಿ ಪಡೆದದ್ದು ನನ್ನ ಸುದೈವ. ನನ್ನ ಬದುಕಿನ ಹೆಚ್ಚಿನ ಕ್ಷಣ ಇವರ ಜತೆ ಕಳೆದಿದ್ದೇನೆ ಎಂದು ಹೇಳಿಕೊಳ್ಳಲು ಹೆಮ್ಮೆ. ಅವರಿಲ್ಲ ಎಂಬ ನೋವು ಕಾಡುತ್ತಿದೆ. ಅವರ ಪುಸ್ತಕಗಳ ಹಕ್ಕನ್ನು ಸ್ವಪ್ನ ಬುಕ್ ಹೌಸ್ಗೆ ನೀಡಿದ್ದೇವೆ. ಅವರೇ ಪ್ರಕಟಿಸುತ್ತಾರೆ.
- ಶ್ರೀಮತಿ ರಾಜರತ್ನಂ, ಮಗಳು
- ಬಳಕೂರು ವಿ.ಎಸ್.ನಾಯಕ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


