ಲೋಕನಿಂದೆಗೆ ಸಮಾಧಾನಿಯಾಗಿರಬೇಕು!
ಒಂದು ಮಹಾಕಾರ್ಯವನ್ನು ಹೊಸದಾಗಿ ಕೈಗೊಂಡಾಗ ಅದನ್ನು ವಿರೋಧಿಸುವವರು ಇದ್ದೇ ಇರುತ್ತಾರೆ. ಅದಕ್ಕೆ ವಿವೇಕಾನಂದರೂ ಹೊರತಾಗಿರಲಿಲ್ಲ. ಸ್ವಾಮೀಜಿಯು ಭಾರತದಲ್ಲಿ ಕೆಲ ವ್ಯಕ್ತಿಗಳ, ಪತ್ರಿಕೆಗಳ ಕಟುಟೀಕೆಗೆ, ಅ್ಯಂತ ನಿರ್ದಯವಾದ ನೀಚಬುದ್ಧಿಪ್ರೇರಿತ ನಿಂದನೆ ಗಳಿಗೆ ಒಳಗಾಗಬೇಕಾಯಿತು. ಅದರಲ್ಲಿ ಕೋಲ್ಕತಾದ ಪ್ರಮುಖನಾದವನು ವಂಗವಾಸಿ ಪತ್ರಿಕೆ ಸಂಪಾದಕ. ಈತ ಸ್ವಾಮೀಜಿಯ ಬಾಲ್ಯಸ್ನೇಹಿತ. ತಮ್ಮ ಮಧ್ಯದಲ್ಲೇ ಬೆಳೆದವ ಜಗದ್ವಿಖ್ಯಾತನಾದುದು ಆತನಿಗೆ ನುಂಗಲಾರದ ತುತ್ತಾಯಿತು. ಸ್ವಾಮೀಜಿಯ ಪ್ರತಿ ನಡೆನುಡಿಯನ್ನೂ ವಿರೋಧಿಸುವ, ಅಲ್ಲಗಳೆಯುವ ಕೆಲಸದಲ್ಲಿ ಆತ ಮುಳುಗಿದ.
ಆದರೆ ಇವೆಲ್ಲಕ್ಕಿಂತ ತುಚ್ಛವಾದ, ಅಪಮಾನಕರವಾದ ವಿಷಯವನ್ನು ಪತ್ರಿಕೆ ಪ್ರಕಟಿಸಿತು. 'ವಿವೇಕಾನಂದರ ಪ್ರವೇಶ ದಿಂದಾಗಿ ಅಪವಿತ್ರಗೊಂಡಿದ್ದ ಕಾಳಿ ವಿಗ್ರಹವನ್ನು ಪುನಃ ಅಭಿಷೇಕ ಮಾಡಿ ತೊಳೆದು ಪರಿಶುದ್ಧಗೊಳಿಸಲಾಯಿತು.'
ಇಂತಹ ಅನೇಕ ವಿಚಾರಗಳಿಗೆ, ದುರಾಚಾರಗಳಿಗೆ ಸ್ವಾಮೀಜಿ ಪ್ರತಿಕ್ರಿಯೆ ಒಂದೇ, ಅದು ಸಂಪೂರ್ಣ ನಿರ್ಲಕ್ಷ್ಯ! ನಿರ್ಲಿಪ್ತತೆ! ಅಂಥವರ ಬಗ್ಗೆ ಸ್ವಾಮೀಜಿ ನಕ್ಕು ಸುಮ್ಮನಾಗುತ್ತಿದ್ದರು. ಶ್ರೀರಾಮಕೃಷ್ಣರು ತಮ್ಮನ್ನು ಸಮಗ್ರ ಭಾರತದ ಹಾಗೂ ವಿಶಾಲ ವಿಶ್ವದ ಹಿತಸಾಧನೆಯ ಸತ್ಪಥದಲ್ಲಿ ನಡೆಸಿದರೆ, ಇಲ್ಲವೆ? ಎಂಬುದನ್ನು ನಿಶ್ಚಯಿಸುವ ಹೊಣೆ ಮುಂದಿನ ಪೀಳಿಗೆಗೆ ಸೇರಿದ್ದು! ಸ್ವಾಮೀಜಿಯ ನಿಲುವಿನಂತೆ ಅವರ ಜೀವಿತಾವಧಿಯಲ್ಲೇ ಈ ವಿರೋಧವೆಲ್ಲ ನಿರ್ನಾಮವಾಯಿತು. ವಿಚಿತ್ರವೆಂದರೆ ಸ್ವಾಮೀಜಿಯ ನಿಧನದ ಕಾಲಕ್ಕೆ ವಂಗವಾಸಿ ಪತ್ರಿಕೆ ಸಂಪಾದಕ ಬದಲಾಗಿದ್ದ. ಪ್ರವಾಹಿನಿ ಎಂಬ ಪತ್ರಿಕೆಯಲ್ಲಿ ವಿವೇಕಾನಂದರ ಬಗ್ಗೆ ಬರೆದ ಸ್ಮೃತಿಚಿತ್ರಣವು ಬಂಗಾಳೀ ಸಾಹಿತ್ಯದಲ್ಲೇ ಅದ್ವಿತೀಯವಾದುದು.
- ಆನಂದ ಎಸ್.ಎನ್.
anandsn193@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

