ಬೇಲದ ಹಣ್ಣು

ರೂಟೇಸಿ ಕುಟುಂಬಕ್ಕೆ ಸೇರಿದ ಬೇಲದ ವೈಜ್ಞಾನಿಕ ಹೆಸರು ಫೆರೋನಿಯ. ಇದಕ್ಕೆ ಕಪಿತ್ಥ, ದಂತಶಠ ಅಂತಲೂ ಕರೆಯುತ್ತಾರೆ. ಕರ್ನಾಟಕದ ಎಲ್ಲ ಭಾಗಗಳಲ್ಲೂ ಇದನ್ನು ಬೆಳೆಯುತ್ತಾರೆ.
ಇದರ ಮೂಲ ರೋಮ್. ಮಹಾಗಣಪತಿಗೆ ಪ್ರಿಯವಾದ ಹಣ್ಣು. ಕಾಡಿನಲ್ಲಿ ಬೆಳೆಯುವ ಬೇಲದ(ಕಪಿತ್ಥ) ಹಣ್ಣುಗಳಲ್ಲಿ ಮನುಷ್ಯನ ಆರೋಗ್ಯಕ್ಕೆ ಬೇಕಾದ ವಿಟಮಿನ್ಗಳು ಸಿಗುತ್ತವೆ.
ಹಣ್ಣಿನ ತಿರುಳು ಹುಳಿಮಿಶ್ರಿತ ಸಿಹಿಯಾಗಿದ್ದು, ಪಾನಕ ಮಾಡಿ ಕುಡಿಯಲು ಯೋಗ್ಯವಾಗಿದೆ. ಬಿಸಿಲಿನ ತಾಪಕ್ಕೆ ಇದು ತಂಪನ್ನೀಯುತ್ತದೆ. ಮರದ ಅಂಟನ್ನು ಬಣ್ಣಗಳ ತಯಾರಿಕೆಯಲ್ಲಿ ಬಳಸುತ್ತಾರೆ.
ಬೇಲದ ಹಣ್ಣಿನ ತಿರುಳಿಗೆ ಬೇಧಿ, ಆಮಶಂಕೆ ಮತ್ತಿತರ ಕಾಯಿಲೆಗಳಿಗೆ, ಒಸಡನ್ನು ಗಟ್ಟಿಗೊಳಿಸಲು, ಗಂಟಲು ಹುಣ್ಣಿನ ಉಪಶಮನಕ್ಕೆ, ಸಿಪ್ಪೆಯ ಕಷಾಯ ಜ್ವರ ನಿವಾರಣೆಗೂ ಇದು ರಾಮಬಾಣ.
ಒಂದು ಬೇಲದಹಣ್ಣು ಸಾಮಾನ್ಯವಾಗಿ 400 ಗ್ರಾಂ.ನಿಂದ 1000 ಗ್ರಾಂ ವರೆಗೂ ತೂಗುತ್ತವೆ. ಇಂತಹ ಒಂದು ಹಣ್ಣಿನಿಂದ 25 ಜನರಿಗೆ ಜ್ಯೂಸ್ ತಯಾರಿಸಹುದು!
ಬೇಲದ ಮರ ಕಾಡು ಜಾತಿಯ ಮರವಾದ್ದರಿಂದ ಅತಿ ಎತ್ತರಕ್ಕೆ ಬೆಳೆಯಬಲ್ಲದು. ಸಾಮಾನ್ಯವಾಗಿ 10-12 ಮೀಟರ್ ಎತ್ತರಕ್ಕೆ ಬೆಳೆಯಬಲ್ಲದು. ಹಣ್ಣು 10-25 ಸೆಂ.ಮೀ. ಸುತ್ತಳತೆ ಹೊಂದಿರುತ್ತದೆ.
ಮರದ ಕಾಂಡದ ಮೇಲೆ 1.2 ಸೆಂ.ಮೀ.ಯಿಂದ 3.7 ಸೆಂ.ಮೀ. ಉದ್ದದ ಮುಳ್ಳುಗಳಿರುತ್ತವೆ. ಎಲೆಗಳು ಅಂಡಾಕಾರದಲ್ಲಿರುತ್ತವೆ. 2-7 ಸೆಂ.ಮೀ. ವ್ಯಾಸದ ಕೆಂಪು ಬಣ್ಣದ ಚಿಕ್ಕ ಹೂವುಗಳನ್ನು ಹೊಂದಿರುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


