ಬೈಟುಕಾಫಿ

ಮಹಾಗುಣಗಳಿಂದ ಮಹಿಮಾ ವ್ಯಕ್ತಿತ್ವ

Published On :

ಪಂಚೇಂದ್ರಿಯಗಳು ಜಗತ್ತನ್ನು ಗ್ರಹಿಸಿ ನಮ್ಮೊಳಗೆ ಭಾವನೆಗಳನ್ನು ರೂಪಿಸುತ್ತವೆ. ನೋಟ, ಮಾತು, ವರ್ತನೆ, ಕಾರ್ಯಗಳು ನಮ್ಮ ಭಾವಗಳ ವಾಹಕಗಳಾಗುತ್ತವೆ. ಇಂತಹ ಅನಂತ ಭಾವಗಳ ಸಮಗ್ರತೆಯು ವ್ಯಕ್ತಿತ್ವವೆನಿಸುತ್ತದೆ. ಹೀಗೆ ಸಚ್ಚಿಂತನೆ, ಸದ್ಭಾವನೆಗಳಿಂದ ಉತ್ತಮ ವ್ಯಕ್ತಿತ್ವವನ್ನು ನಾವೇ ರೂಪಿಸಿಕೊಳ್ಳಬಹುದು.
'ಹೃದಯದಲ್ಲಿ  ಅಪರಿಮಿತ ಅನುಕಂಪೆ, ಭಾವನೆಯನ್ನು ಕಾರ್ಯಗತಗೊಳಿಸುವ ದಕ್ಷತೆ ಹಾಗೂ ಹಿಡಿದ ಕಾರ್ಯವನ್ನು ಬಿಡದೆ ಸಾಧಿಸಬಲ್ಲ ಎದೆಗಾರಿಕೆ ಈ ಮೂರು ಮಹಾಗುಣಗಳು ನಿಮ್ಮಲ್ಲಿದ್ದರೆ ನೀವು ಅದ್ಭುತ ಪವಾಡವನ್ನೇ ಸಾಧಿಸಬಲ್ಲಿರಿ. ಈ ಮೂರು ಗುಣಗಳಿದ್ದರೆ ನಿಮ್ಮ ಮುಖದ ತೇಜಸ್ಸೇ ಅದನ್ನು ಪ್ರತಿಬಿಂಬಿಸುತ್ತದೆ. ನಿಮ್ಮ ಆಲೋಚನೆ-ಭಾವನೆಗಳು ಶಿಲೆಯ ಗೋಡೆಗಳನ್ನೂ ತೂರಿಕೊಂಡು ಹೋಗಿ ಜಗತ್ತಿನಾದ್ಯಂತ ತರಂಗಗಳಾಗಿ ಹರಡಿ ನೂರಾರು ವರ್ಷಗಳವರೆಗೆ ಸ್ಪಂದಿಸುತ್ತಿರುತ್ತವೆ. ಅವು ಯಾರೋ ಕೆಲವರ ಮೆದುಳನ್ನು ಹೊಕ್ಕು ಕಾರ್ಯಾರಂಭ ಮಾಡುವವರೆಗೂ ಹಾಗೆಯೇ ಸ್ಪಂದಿಸುತ್ತಿರಬಲ್ಲವು. ಶುದ್ಧ ಭಾವನೆಗಳ, ಪ್ರಾಮಾಣಿಕತೆಯ, ಶುದ್ಧ ಉದ್ದೇಶಗಳ ಶಕ್ತಿ ಅಂಥದು.'
'ನಿಮ್ಮ ಹಿಂದಿನ ಜೀವನವನ್ನು ಒಮ್ಮೆ ಪರಿಶೀಲಿಸಿ ನೋಡಿ. ನಿಮ್ಮ ಇಂದಿನ ಸ್ಥಿತಿಯು ಉತ್ತಮವಾಗಿರುವುದಾದರೆ, ಅದು ಸಾಧ್ಯವಾಗಿರುವುದು ನಿಮ್ಮ ಎಲ್ಲ ತಪ್ಪುಗಳಿಂದ ಹಾಗೂ ಯಶಸ್ಸುಗಳಿಂದ ಎಂದು ಕಂಡುಕೊಳ್ಳುತ್ತೀರಿ. ಹಿಂದೆ ಆಗಿಹೋದದ್ದನ್ನೇ ಚಿಂತಿಸುತ್ತಾ ಕುಳಿತಿರಬೇಡಿ. ಮುನ್ನಡೆಯಿರಿ!'
- ಆನಂದ ಎಸ್.ಎನ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.