ಬಿಗ್ ಲಾಸ್

ಬಿಗ್ ಲಾಸ್
Updated on: 

ಹಿಂದಿಯಿಂದ ಕನ್ನಡೀಕರಣಗೊಳ್ಳುತ್ತಿರುವ ಹೊಸ ರಿಯಾಲಿಟಿ ಶೋಗೆ ಆರಂಭದಲ್ಲೇ 'ಬಿಗ್‌' ಲಾಸ್!

ಕನ್ನಡದ ವಾಹಿನಿಯಲ್ಲಿ ಪ್ರಸಾರವಾಗಲಿರುವ 'ಬಿಗ್ ಬಾಸ್‌' ರಿಯಾಲಿಟಿ ಶೋನಲ್ಲಿ ಇಂತಿಥವರು ಭಾಗವಹಿಸಲಿದ್ದಾರೆ ಎಂದು ಅನಧಿಕೃತವಾದ ಪಟ್ಟಿಯೊಂದು ಹೊರಗೆ ಬಂತು. ರಾಜಕಾರಣಿ ಸಿದ್ದರಾಮಯ್ಯ, ಕ್ರಿಕೆಟಿಗ ರಾಬಿನ್ ಉತ್ತಪ್ಪ, ನಟಿಯರಾದ ಪ್ರಿಯಾಮಣಿ, ರಾಧಿಕಾ ಪಂಡಿತ್, ನಟ ಶ್ರೀಮುರಳಿ ಈ ಪಟ್ಟಿಯಲ್ಲಿದ್ದ ಪ್ರಮುಖರು. ಸಾಕಷ್ಟು ನಿರೀಕ್ಷೆ ಮೂಡಿಸುತ್ತಿರುವ ಈ ರಿಯಾಲಿಟಿ ಶೋಗೆ ಇಬ್ಬರು ಸ್ಟಾರ್ ನಟಿಯರು 'ನಾವು ಈ ಬಿಗ್ ಬಾಸ್ ರಿಯಾಲಿಟಿ ಶೋಗೆ ಬರಲ್ಲ' ಎಂದು ಖಡಕ್ ಆಗಿಯೇ ಹೇಳಿದ್ದಾರೆ.
ಆ ಮೂಲಕ ಶೋ ನಿರೂಪಣೆ ಜವಾಬ್ದಾರಿ ಹೊತ್ತಿರುವ ನಟ ಸುದೀಪ್‌ಗೆ ಆರಂಭದಲ್ಲೇ ವಿಘ್ನ ಎದುರಾಗಿದ್ದು, ಗ್ಲಾಮರ್ ಡಾಲ್‌ಗಳಿಲ್ಲದೇ ವಾಹಿನಿಗೂ ಬಿಗ್ 'ಲಾಸ್‌' ಆಗಿದೆ ಎಂಬುದು ಕಿಚ್ಚನ ಅಂಗಳದಿಂದ ಕೇಳಿಬರುತ್ತಿರುವ ಹೊಸ ಸುದ್ದಿ.
ನಟಿ ಪ್ರಿಯಾಮಣಿ ಕನ್ನಡತಿಯೇ ಆಗಿದ್ದರೂ ತೆಲುಗು, ತಮಿಳು ಚಿತ್ರರಂಗದಲ್ಲೇ ಹೆಚ್ಚಾಗಿ ಮಿಂಚಿದವರು. 'ರಾಮ್‌' ಚಿತ್ರದ ಮೂಲಕ ಮತ್ತೆ ಕನ್ನಡಕ್ಕೆ ಬಂದ ಈಕೆ, ನಟ ಶಿವರಾಜ್‌ಕುಮಾರ್ ಅವರೊಂದಿಗೆ 'ಲಕ್ಷ್ಮಿ' ಚಿತ್ರಕ್ಕೂ ನಾಯಕಿಯಾದಳು. ಇದರ ನಡುವೆ ನಟ ಗಣೇಶ್ ಅಭಿನಯದ 'ಏನೋ ಒಂಥರಾ' ಚಿತ್ರಕ್ಕೂ ನಾಯಕಿಯಾದರು. ದ್ವಾರಕೀಶ್ ನಿರ್ಮಾಣದ 'ಚಾರುಲತಾ' ಚಿತ್ರದಲ್ಲೂ ಡ್ಯೂಯಲ್ ಪಾತ್ರದಲ್ಲಿ ಪ್ರೇಕ್ಷಕರ ಗಮನ ಸೆಳೆದರು. ಪರಭಾಷೆಯ ಆಸ್ತಿಯಾಗಿರುವ ಕನ್ನಡದ ಪ್ರಿಯಾಮಣಿ ಈಗ ತಾನು ಬಿಗ್ ಬಾಸ್ ರಿಯಾಲಿಟಿ ಶೋಗೆ ಬರುವುದಿಲ್ಲ ಎನ್ನುವ ಮೂಲಕ ಕಿಚ್ಚನ ಶೋಗೆ ಬಿಗ್ ಶಾಕ್ ಕೊಟ್ಟಿದ್ದಾಳೆ.
 ಇನ್ನು ಕಿರುತೆರೆಯಿಂದ ಬೆಳ್ಳಿತೆರೆಗೆ ಕಾಲಿಟ್ಟು ಬಹು ಬೇಡಿಕೆಯ ನಟಿ ಎನ್ನಿಸಿಕೊಂಡಿರುವ ರಾಧಿಕಾ ಪಂಡಿತ್ ಕೂಡಾ ತಾನು ಬಿಗ್ ಬಾಸ್ ಶೋಗೆ ಒಲ್ಲೆ ಎಂದಿದ್ದಾಳೆ. ಕನ್ನಡದಲ್ಲಿ ಸ್ಟಾರ್ ನಂ.1 ಪಟ್ಟ ಉಳಿಸಿಕೊಂಡಿರುವ ರಾಧಿಕಾ, ಬಿಗ್ ಬಾಸ್ ಶೋನಲ್ಲಿ ಭಾಗವಹಿಸುತ್ತಾರೆಂಬ ಕಿರುತೆರೆ ಪ್ರೇಕ್ಷಕರ ಆಸೆಗೆ ತಣ್ಣೀರು ಸುರಿದ್ದಾಳೆ. ಒಟ್ಟಿನಲ್ಲಿ ಇಬ್ಬರು ಗ್ಲಾಮರ್ ಬೆಡಗಿಯರು ಬಿಗ್ ಬಾಸ್‌ಗೆ ಆರಂಭದಲ್ಲೇ ಬಿಗ್ ಲಾಸ್ ಮಾಡಿದ್ದಾರೆ ಎಂಬುದು ಕಿರುತೆರೆ ಗುಸುಗುಸು! <

-ಆರ್.ಕೇಶವಮೂರ್ತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com