ತಾನು ನೀರ ಮೇಲಿದ್ದಾಗ ತೇಲಿದರೆ, ಮುಳುಗಿದಾಗ ನಮ್ಮನ್ನು ತೇಲಿಸುತ್ತದೆ.
- ಮಧು ಮಾಲ್ವೆ, ಸಾಗರ
ಭೂಮಂಡಲವೇ ದೋಣಿ. ಅದರ ನಾವಿಕ ಹರಿ.
- ಗೋಪಾಲಾಚಾರ, ಕುಷ್ಟಗಿ
ದೋಣಿ- ಕುಡುಕ... ಇಬ್ಬರೂ ಒಂದೇ... ತೇಲುತ್ತಾರೆ!
- ಸುನೀಲ್ ಆರ್., ಮಂಡ್ಯ
ಒಂದು ದೋಣಿ ಮೇಲೆ ಕಾಲಿಟ್ಟರೆ ದಡ ಸೇರಿಸೀತು, ಎರಡು ದೋಣಿ ಮೇಲೆ ಕಾಲಿಟ್ಟರೆ ತಳ ಸೇರಿಸೀತು.
- ವಸುಂಧರಾ ಕೆ.ವಿ., ಸಾಗರ