ಬೈಟುಕಾಫಿ

ಅಧ್ಯಾತ್ಮಿಕ ಶಕ್ತಿಯ ಸ್ಪರ್ಶಪ್ರಯೋಗ

Published On :

ಶ್ರೀ ರಾಮಕೃಷ್ಣರ ಮಾರ್ಗದರ್ಶನದಂತೆ ನರೇಂದ್ರ ಗಾಢ ಧ್ಯಾನದಲ್ಲಿ ಮುಳುಗಿಬಿಟ್ಟ. ದಿನದಿಂದ ದಿನಕ್ಕೆ ತನ್ನಲ್ಲಿ ಅಧ್ಯಾತ್ಮಿಕ ಶಕ್ತಿಯೆಂಬುದು ಇತರರನ್ನೂ ಪರಿವರ್ತಿಸಬಲ್ಲ ಒಂದು ಪ್ರಬಲ ಶಕ್ತಿಯಾಗಿತ್ತು. ಈ ಶಕ್ತಿಯನ್ನು ಒಮ್ಮೆ ಪ್ರಯೋಗಿಸಿಯೂಬಿಟ್ಟ.
1886ರ ಶಿವರಾತ್ರಿಯ ದಿನ. ಉದ್ಯಾನಗೃಹದ ಒಂದು ಕೋಣೆಯಲ್ಲಿ ನರೇಂದ್ರನು ಧ್ಯಾನಕ್ಕೆ ಕುಳಿತಿದ್ದಾನೆ. ಪಕ್ಕದಲ್ಲಿ ಕಾಳೀಪ್ರಸಾದನನ್ನು ಬಿಟ್ಟರೆ ಅಲ್ಲಿ ಬೇರೆ ಯಾರೂ ಇಲ್ಲ. ಆಗ ಧ್ಯಾನಕ್ಕೆ ಕುಳಿತ ಸ್ವಲ್ಪ ಹೊತ್ತಲ್ಲೇ ನರೇಂದ್ರ ತನ್ನಲ್ಲೇನೋ ಶಕ್ತಿಯ ಆವಿರ್ಭಾವವಾಗುತ್ತಿರುವಂತೆ ಅನುಭವಿಸಿ, ತನ್ನ ಬಳಿಯಲ್ಲಿದ್ದ ಕಾಳೀಪ್ರಸಾದನಿಗೆ 'ನೋಡು, ಇನ್ನು ಸ್ವಲ್ಪ ಹೊತ್ತಿನಲ್ಲಿ ನನ್ನನ್ನು ಸ್ಪರ್ಶಿಸು' ಎಂದು ಹೇಳಿ ಧ್ಯಾನಮಗ್ನನಾದ. ಸ್ವಲ್ಪ ಹೊತ್ತಿನ ಮೇಲೆ ಗಾಢ ಧ್ಯಾನಲೀನನಾಗಿ ಸ್ಥಿರವಾಗಿ ಕುಳಿತಿದ್ದ ನರೇಂದ್ರನ ಬಲ ಮೊಳಕಾಲನ್ನು ಕಾಳೀಪ್ರಸಾದ ತನ್ನ ಬಲಗೈಯಿಂದ ಸ್ಪರ್ಶಿಸುತ್ತ ಕಣ್ಮುಚ್ಚಿ ಕುಳಿತ. ಒಂದೆರಡು ನಿಮಿಷಗಳಾದ ಮೇಲೆ ನರೇಂದ್ರ ಕಣ್ತೆರೆದು, 'ಸಾಕು ಬಿಡು. ನಿನಗೆ ಹೇಗನ್ನಿಸಿತು?' ಎಂದು ಕೇಳಿದ. ಆಗ ಕಾಳೀಪ್ರಸಾದ, 'ನನಗೆ ವಿದ್ಯುತ್ ಆಘಾತವಾಗುತ್ತಿದ್ದ ಹಾಗಿತ್ತು! ನನ್ನ ಕೈ ಒಂದೇಸಮನೆ ನಡುಗುತ್ತಿತ್ತು. ಕೈಯನ್ನು ಸ್ಥಿರವಾಗಿಟ್ಟುಕೊಳ್ಳಲು ಎಷ್ಟೇ ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ' ಎಂದ.
ರಾತ್ರಿ ಕಾಳೀಪ್ರಸಾದ ಗಾಢವಾದ ಧ್ಯಾನದಲ್ಲಿ ತಲ್ಲೀನನಾಗಿಬಿಟ್ಟ. ಅವನ ಇಡೀ ಶರೀರ ಸ್ಥಿರವಾಗಿತ್ತು. ಬಾಹ್ಯಪ್ರಜ್ಞೆ ಇರುವಂತೆ ಕಾಣುತ್ತಿರಲಿಲ್ಲ. ಇಲ್ಲಿಯವರೆಗೆ ಅವನು ಅಂತಹ ಗಾಢ ಧ್ಯಾನವನ್ನು ಅನುಭವಿಸಿದವನೇ ಅಲ್ಲ. ನರೇಂದ್ರನನ್ನು ಸ್ಪರ್ಶಿಸಿದ್ದೇ ಇದಕ್ಕೆ ಕಾರಣವಾಗಿತ್ತು.

-ಆನಂದ ಎಸ್.ಎನ್.
anandsn193@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.