ಬೈಟುಕಾಫಿ

ಆತ್ಮಶಕ್ತಿ ಚೇತನರೂಪ ಧರಿಸಿತು.

Published On :

ತಮ್ಮ ಜೀವನದ ಕಡೆಯ ದಿನಗಳು ಸಮೀಪಿಸಿದಂತೆ ರಾಮಕೃಷ್ಣರು ಶಿಷ್ಯರಿಗೆ ಉತ್ಸಾಹದಿಂದ ಮಾರ್ಗದರ್ಶನ ನೀಡತೊಡಗಿದ್ದರು. ನರೇಂದ್ರನಿಗೆ ಇತರ ಶಿಷ್ಯನ್ನು ಮುಂದೆ ಹೇಗೆ ನೋಡಿಕೊಳ್ಳಬೇಕು, ತ್ಯಾಗಮಯ ಜೀವನವನ್ನು ನಡೆಸುವಂತೆ ಅವರಿಗೆ ಹೇಗೆ ತರಬೇತಿ ಕೊಡಬೇಕು ಎಂಬುದನ್ನು ವಿವರಿಸುತ್ತಿದ್ದರು.
ಒಂದು ದಿನ ಅವರು ನರೇಂದ್ರನನ್ನು ಬಿಟ್ಟು ಉಳಿದ ಶಿಷ್ಯರನ್ನು ಕರೆದು 'ಮುಂದೆ ನೀವು ಯಾವಾಗಲೂ ನರೇಂದ್ರನ ಕಡೆಗೆ ವಿಶೇಷ ಗಮನ ಕೊಡಬೇಕು. ಅವನ ಆರೋಗ್ಯಕ್ಕೆ, ಅನುಕೂಲತೆಗೆ ಏನೇನು ಮಾಡಲು ಸಾಧ್ಯವೋ ಅದೆಲ್ಲವನ್ನೂ ಮಾಡಿಕೊಡಬೇಕು' ಎಂದು ಆದೇಶಿಸಿದರು.
ನರೇಂದ್ರನನ್ನು ಜಗನ್ಮಾತೆಗೆ ಒಪ್ಪಿಸಿಕೊಟ್ಟ ಮೇಲೆ ಅವರು ತಮ್ಮ ಅಧ್ಯಾತ್ಮ ಸಂಪತ್ತನ್ನು ಅವನಿಗೆ ಧಾರೆಯೆರೆದು ಶರೀರತ್ಯಾಗ ಮಾಡಲು ಸಿದ್ಧರಾಗತೊಡಗಿದರು. ಮಹಾಸಮಾಧಿಗೆ ಇನ್ನು ಮೂರು ದಿನಗಳಿರುವಾಗ ನರೇಂದ್ರನನ್ನು ಕರೆದು ತನ್ನ ಎದುರಿಗೆ ಕುಳ್ಳಿರಿಸಿಕೊಂಡು ಅವನನ್ನೇ ನೆಟ್ಟನೋಟದಿಂದ ದಿಟ್ಟಿಸಲಾರಂಭಿಸಿದರು. ನೋಡನೋಡುತ್ತಲೇ ಗಾಢ ಸಮಾಧಿಸ್ಥರಾಗಿಬಿಟ್ಟರು. ಆಗ ನರೇಂದ್ರನಿಗೆ ವಿದ್ಯುತ್‌ಪ್ರವಾಹದಂತೆ ಏನೋ ಒಂದು ಸೂಕ್ಷ್ಮಶಕ್ತಿ ತನ್ನೊಳಗೆ ಪ್ರವೇಶ ಮಾಡುತ್ತಿರುವಂತೆ ಅನುಭವವಾಯಿತು. ಎಚ್ಚೆತ್ತ ಮೇಲೆ ರಾಮಕೃಷ್ಣರು 'ನರೇನ್, ಇಂದು ನಾನು ನಿನಗೆ ನನ್ನ ಸರ್ವಸ್ವವನ್ನೂ ಕೊಟ್ಟುಬಿಟ್ಟೆ. ಈಗ ನಾನು ಕೇವಲ ಫಕೀರನಾಗಿಬಿಟ್ಟೆ. ಮುಂದೆ ದೊಡ್ಡ ದೊಡ್ಡ ಕಾರ್ಯಗಳೆಲ್ಲ ನಿನ್ನಿಂದ ನಡೆಯುತ್ತವೆ. ನನ್ನ ಸಿದ್ಧಿಗಳೆಲ್ಲ ಮುಂದೆ ಸಕಾಲದಲ್ಲಿ ನಿನ್ನ ಮೂಲಕ ಪ್ರಕಟಗೊಳ್ಳುತ್ತವೆ!'

-ಆನಂದ ಎಸ್.ಎನ್.
anandsn193@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.