ಮಹಿಳಾ ಪೇದೆ ಕಡ್ಡಾಯ
ಆಧುನಿಕ ಯುಗದಲ್ಲಿ ಮಹಿಳೆಯರು ಪ್ರತಿ ಕ್ಷೇತ್ರದಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ. ಅದಕ್ಕೆ ಪೊಲೀಸ್ ಇಲಾಖೆಯೂ ಹೊರತಲ್ಲ.
ಅದೇ ರೀತಿ ಪ್ರತಿ ಪೊಲೀಸ್ ಠಾಣೆಯಲ್ಲೂ ಮಹಿಳಾ ಸಿಬ್ಬಂದಿ ಇರುತ್ತಾರೆ. ಅವರು ಠಾಣೆಗಳಿಗೆ ಮಾತ್ರ ಸೀಮಿತವಾಗಿಲ್ಲ, ಪೊಲೀಸ್ ಪೇದೆ, ಮುಖ್ಯಪೇದೆಯಿಂದ ಐಜಿಪಿ ಹಾಗೂ ಡಿಜಿಪಿ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಹಿರಿಯ ಅಧಿಕಾರಿಗಳದ್ದು ಹೆಚ್ಚಿನ ಜವಾಬ್ದಾರಿಯಾಗಿರುತ್ತದೆ. ಠಾಣೆಗಳಲ್ಲಿ ಕೆಲಸ ನಿರ್ವಹಿಸುವ ಪೇದೆ, ಮುಖ್ಯಪೇದೆಗಳು ಇನ್ಸ್ಪೆಕ್ಟರ್ ಅವರ ಮಾರ್ಗದರ್ಶನದಲ್ಲಿ ಕೆಲಸ ನಿರ್ವಹಿಸುತ್ತಾರೆ.
ಠಾಣೆಗಳಲ್ಲಿರುವ 'ವಾಕಿ'ಗಳಲ್ಲಿ ಬರುವ ಸಂದೇಶ ಸ್ವೀಕರಿಸುವುದು, ಅಗತ್ಯಬಿದ್ದಲ್ಲಿ ಅದನ್ನು ತಮ್ಮ ಠಾಣೆ ವ್ಯಾಪ್ತಿಯ ಗಸ್ತಿನಲ್ಲಿರುವ ಪೊಲೀಸರಿಗೆ ತಿಳಿಸುವುದು, ಖಡತಗಳನ್ನು ನ್ಯಾಯಾಲಯಕ್ಕೆ ಸಾಗಿಸುವುದು, ಮಹಿಳಾ ಅರೋಪಿಗಳನ್ನು ಠಾಣೆಗೆ ಕರೆತರುವುದು, ಅವರನ್ನು ವಿಚಾರಣೆಗೊಳಪಡಿಸಿದಾಗ ಹಿರಿಯ ಅಧಿಕಾರಿಗಳಿಗೆ ಸಹಾಯ ಮಾಡುವುದು, ಮಹಿಳಾ ಆರೋಪಿಯನ್ನು ಮಹಿಳಾ ನಿಲಯಕ್ಕೆ ಕರೆದುಕೊಂಡು ಹೋಗಿ ವಾಪಸ್ ಕರೆದುಕೊಂಡು ಬರುವುದು ಸೇರಿದಂತೆ ಮಹಿಳಾ ಸಿಬ್ಬಂದಿ ಮಾಡುವ ಅಗತ್ಯ ಕೆಲಸಗಳನ್ನು ಮಾಡುತ್ತಾರೆ.
ಅವರೂ ಸಹ ವಾರಕ್ಕೊಮ್ಮೆ ರಾತ್ರಿಪಾಳಿಯಲ್ಲಿ ಕೆಲಸ ನಿರ್ವಹಿಸಬೇಕು ಎಂಬುದು ಕಡ್ಡಾಯ. ಒಂದು ದಿನ ರಾತ್ರಿ ಪಾಳಿ ಹೊರತುಪಡಿಸಿ ಗಸ್ತು ತಿರುಗಲು ಇವರನ್ನು ನೇಮಿಸುವುದಿಲ್ಲ.
-ಶಾಂತ ತಮ್ಮಯ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

