ನೃತ್ಯ ಚಿಕಿತ್ಸೆ
ನೃತ್ಯ ದೇಹ, ಮನಸ್ಸು ಮತ್ತು ಭಾವನೆಗಳ ಸಂಕೀರ್ಣತೆಯುಳ್ಳ ಕಲೆ. ಅದು ದೇಹ, ಮನಸ್ಸು ಮತ್ತು ಆಧ್ಯಾತ್ಮದ ಅಂತರ್ ಸಂಬಂಧವನ್ನು ಮೂಡಿಸುತ್ತದೆ. ಕೆಲವು ಬಗೆಯ ವ್ಯಾಯಾಮಗಳು ಎಲ್ಲ ಅಂಗಾಂಗಗಳನ್ನು ತಲುಪುವುದಿಲ್ಲ. ಆದರೆ ನೃತ್ಯವು ದೇಹದ ಅಡಿಯಿಂದ ಮುಡಿಯವರೆಗೆ ಮನೋಲ್ಲಾಸಕರ ಅನುಭವವನ್ನು ನೀಡುವುದರ ಜತೆಗೆ, ಇಡೀ ನರವ್ಯೂಹವನ್ನು ಚೇತೋಹಾರಿಯಾಗಿಸುತ್ತದೆ. ಆದ್ದರಿಂದ ನೃತ್ಯ ಹೆಚ್ಚು ಪ್ರಯೋಜನಕಾರಿ. ಅಷ್ಟೇ ಅಲ್ಲ ಸುಲಭ ಹೆರಿಗೆಗೆ, ಸುಖಿ ಲೈಂಗಿಕ ಜೀವನಕ್ಕೆ ಕೂಡ ನೃತ್ಯ ಚಿಕಿತ್ಸೆ ಪರಿಣಾಮಕಾರಿ ಎನ್ನುತ್ತಾರೆ ಬೆಂಗಳೂರಿನ ಸೃಷ್ಟಿ ರಾಷ್ಟ್ರೀಯ ಸಂಗೀತ ಮತ್ತು ನೃತ್ಯ ಕೇಂದ್ರದ ಸ್ಥಾಪಕ ಡಾ.ಎ.ವಿ. ಸತ್ಯನಾರಾಯಣ.
ನೃತ್ಯವು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ನೃತ್ಯ ದಿಂದ ಮೈ ಮನಸ್ಸುಗಳ ಆರೋಗ್ಯ ವೃದ್ಧಿಸುತ್ತದೆ, ದೇಹದಲ್ಲಿನ ಕೊಲೆಸ್ಟರಾಲ್, ಬೊಜ್ಜು ಕಡಿಮೆಯಾಗುತ್ತದೆ ಎನ್ನುಖಿವ ಅವರು, ಈ ಉದ್ದೇಶದಿಂದಲೇ ನೃತ್ಯ ಚಿಕಿತ್ಸಾ ಕೋರ್ಸನ್ನು ಪ್ರಾರಂಭಿಸಲು ಉದ್ದೇಶಿಸಿದ್ದಾರೆ. ಭಾರತದಲ್ಲೇ ಮೊದಲ ಬಾರಿಗೆ ಸೃಷ್ಟಿ ನೃತ್ಯ ಮತ್ತು ನೃತ್ಯ ಚಿಕಿತ್ಸೆ ಕೇಂದ್ರವು ಆರು ತಿಂಗಳ ಸರ್ಟಿಫಿಕೆಟ್ ಕೋರ್ಸನ್ನು ಪ್ರಾರಂಭಿಸುತ್ತಿದೆ. ಆರು ತಿಂಗಳ ಅವಧಿಯಲ್ಲಿ ಪ್ರಾಥಮಿಕ ನೃತ್ಯ, ಸಂಗೀತ, ಅನಾಟಮಿ ವಿಷಯಗಳ ಅಭ್ಯಾಸ, ನೃತ್ಯ ಚಿಕಿತ್ಸಾ ತರಗತಿ ಹಾಗೂ ತರಬೇತಿಗಳನ್ನು ನಡೆಸುತ್ತದೆ.
ವಿವರಗಳಿಗೆ- ಡಾ. ಎ.ವಿ. ಸತ್ಯನಾರಾಯಣ, 'ಸೃಷ್ಟಿ' ಕಲೆ ಮತ್ತು ನೃತ್ಯ ಚಿಕಿತ್ಸಾ ಕೇಂದ್ರ, 77/11, 5ನೇ ಅಡ್ಡರಸ್ತೆ, ಹನುಮಂತನಗರ, ಬೆಂಗಳೂರು-560 019, ದೂರವಾಣಿ: 080-26671853, 9845698089.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

