ಆಯಸ್ಸು ಹೆಚ್ಚಿಲ್ಲ
ಪ್ರತಿ ಅಪರಾಧ ನಡೆದ ಸ್ಥಳದಲ್ಲಿ ಬೆರಳಚ್ಚು ಪತ್ತೆಯಾಗುತ್ತದೆ. ಒಂದು ವೇಳೆ ಆರೋಪಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುವ ಉದ್ದೇಶದಿಂದ ತನ್ನ ಕೈಗೆ ಬಟ್ಟೆ ಸುತ್ತಿಕೊಂಡು ಅಪರಾಧ ಮಾಡಿದಲ್ಲಿ ಅಥವಾ ಘಟನೆ ನಂತರ ಬಟ್ಟೆಯಿಂದ ಆ ಸ್ಥಳವನ್ನು ಒರೆಸಿದಲ್ಲಿ, ನೀರು ಹಾಕಿದಲ್ಲಿ ಆರೋಪಿಯ ಬೆರಳಚ್ಚು ಪತ್ತೆ ಮಾಡುವುದು ಕಷ್ಟ.
ಅಷ್ಟೇ ಅಲ್ಲ, ಬೆರಳಚ್ಚು ಎಲ್ಲಾ ವಸ್ತುಗಳ ಮೇಲೆ ಬೀಳುವುದಿಲ್ಲ. ಹೆಚ್ಚಾಗಿ ಗಾಜು, ಮರದ ಹಲಗೆಗಳು, ನೀರಿನ ಲೋಟ, ಪಾತ್ರೆ, ಫೋನ್ನಂತಹ ಕೆಲವು ವಸ್ತುಗಳ ಮೇಲೆ ಬೆರಳಚ್ಚು ಚೆನ್ನಾಗಿ ಮೂಡುತ್ತದೆ.
ಇನ್ನು ಕೆಲವು ವಸ್ತುಗಳ ಮೇಲೆ ಬೆರಳಚ್ಚು ಮೂಡುವುದಿಲ್ಲ. ಹಾಗಾಗಿ ಅಪರಾಧ ಕೃತ್ಯ ನಡೆದ ಕೆಲವು ಸ್ಥಳಗಳಲ್ಲಿ ಹೆಚ್ಚು ಬೆರಳಚ್ಚು ಸಿಗುವುದಿಲ್ಲ.
ಒಂದು ಘಟನೆ ನಡೆದ ಸ್ಥಳದಲ್ಲಿ ಆರೋಪಿ/ಆರೋಪಿಗಳ ಎಲ್ಲಾ ಬೆರಳಚ್ಚು ಸಿಗುವುದು ಕಷ್ಟ. ಕೆಲವೊಮ್ಮೆ ಎಲ್ಲಾ ಬೆರಳಿನ ಅಥವಾ ಒಂದೆರಡು ಬೆರಳಿನ ಗುರುತುಗಳು ಮಾತ್ರ ಪತ್ತೆಯಾಗಬಹುದು.
ಅಪರಾಧ ಕೃತ್ಯ ನಡೆದು ಕಲ ದಿನಗಳ ನಂತರ ಘಟನೆ ಬೆಳಕಿಗೆ ಬಂದಲ್ಲಿ, ಅಂತಹ ಸಾಕಷ್ಟು ಪ್ರಕರಣಗಳಲ್ಲಿ ಬೆರಳಚ್ಚು ನಾಶವಾಗಿರುತ್ತದೆ. ಕಾರಣ ಅವುಗಳಿಗೆ ಹೆಚ್ಚು ಆಯಸ್ಸು ಇರುವುದಿಲ್ಲ. ಇಂತಹ ವಸ್ತುಗಳ ಮೇಲೆ ಇಂತಿಷ್ಟೇ ದಿನ ಎಂದಿರುತ್ತದೆ. ಅಷ್ಟು ದಿನ ಕಳೆದ ನಂತರ ಅವು ಗಾಳಿಗೆ ಹಾಗೂ ಅಲ್ಲಿನ ವಾತಾವರಣಕ್ಕೆ ಅಳಿಸಿಹೋಗುತ್ತವೆ.
ಗಾಜು, ಪ್ಲಾಸ್ಟಿಕ್, ಸ್ಟೀಲ್ನಂತಹ ವಸ್ತುಗಳ ಮೇಲೆ ಹೆಚ್ಚು ದಿನ ಇರುತ್ತವೆ. ಬಟ್ಟೆ ಮೇಲೆ ಬೆರಳಚ್ಚು ಸಿಗುವುದಿಲ್ಲ.
- ಶಾಂತ ತಮ್ಮಯ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

