ಬೆರಳಚ್ಚು ಸಂಗ್ರಹದ ಹೊಸ ವಿಧಾನ
ಪೊಲೀಸರು ಆರೋಪಿಗಳ ಬೆರಳಚ್ಚು ತೆಗೆಯಲು ಹಿಂದೆ ಇದ್ದ ಹಳೆಯ ಪದ್ಧತಿ ಬಳಸುತ್ತಿದ್ದರು. ಆದರೆ, ಈಗ ಹೊಸ ಪದ್ಧತಿ ಬಂದಿದೆ. ಹಾಗಾಗಿ ಹಳೆ ಪದ್ಧತಿಯಂತೆ ಕಪ್ಪು ರಾಸಾಯನಿಕ ವಸ್ತು ತೆಗೆದುಕೊಂಡು ಅದನ್ನು ಗಾಜಿಗೆ ಉಜ್ಜಿ ನಂತರ ಆರೋಪಿಗಳ ಬೆರಳಚ್ಚು ಸಂಗ್ರಹಿಸುವಂತಿಲ್ಲ.
ರಾಜ್ಯದ ಪೊಲೀಸ್ ಠಾಣೆಗಳಿಗೆ ಹೊಸ ಯಂತ್ರಗಳನ್ನು ನೀಡಲಾಗಿದೆ. ಅವುಗಳನ್ನು ಬೆರಳಚ್ಚು ಸಂಗ್ರಹ ಯಂತ್ರ ಎನ್ನಲಾಗುತ್ತದೆ. ಈ ಯಂತ್ರದ ಸಹಾಯದಿಂದ ಬೆರಳೆಣಿಕೆಯಷ್ಟು ನಿಮಿಷದಲ್ಲಿ ಆರೋಪಿಗಳ ಎಲ್ಲಾ ಬೆರಳಚ್ಚನ್ನು ಸಂಗ್ರಹಿಸಬಹುದು.
ಈ ಯಂತ್ರಗಳು ರಾಜಧಾನಿ ಸೇರಿದಂತೆ ರಾಜ್ಯದ ಸುಮಾರು 180ಕ್ಕೂ ಹೆಚ್ಚು ಠಾಣೆಗಳಲ್ಲಿವೆ. ಉಳಿದ ಠಾಣೆಗಳಿಗೆ ಖರೀದಿಸಿರುವ ಯಂತ್ರಗಳ ಹರಾಜಿಗೆ ಟೆಂಡರ್ ಕರೆಯಲಾಗಿದೆ. ಟೆಂಡರ್ ಮುಕ್ತಾಯವಾದ ನಂತರ ಎಲ್ಲಾ ಠಾಣೆಗಳಿಗೂ ಈ ಯಂತ್ರ ನೀಡಲಾಗುತ್ತದೆ. ಆಗ ಪೊಲೀಸರಿಗೆ ಬೆರಳಚ್ಚು ಸಂಗ್ರಹದ ತೊಂದರೆ ಕಡಿಮೆಯಾಗುತ್ತದೆ.
ಆರೋಪಿಯನ್ನು ಬಂಧಿಸಿ ಕರೆತಂದ ನಂತರ ಆತನ ಬೆರಳುಗಳ ತುದಿಯನ್ನು ಯಂತ್ರದ ಮೇಲೆ ಇಟ್ಟರೆ ಸಾಕು ಬೆರಳ ತುದಿಯ ಫೋಟೊ ತನ್ನಷ್ಟಕ್ಕೆ ತಾನೇ ಕಂಪ್ಯೂಟರ್ನಲ್ಲಿ ಸೇವ್ ಆಗುತ್ತದೆ. ಅದನ್ನು ಯಾವ ಠಾಣೆಯ ಪೊಲೀಸ್ ಸಿಬ್ಬಂದಿ ಬೇಕಾದರೂ ಪಡೆಯಬಹುದು. ಅಂದರೆ, ಪ್ರತಿ ಠಾಣೆಯಲ್ಲೂ ಸಂಗ್ರಹಿಸುವ ಬೆರಳಚ್ಚನ್ನು ಬೆಂಗಳೂರು ಹಾಗೂ ದೆಹಲಿಯಲ್ಲಿರುವ ಬೆರಳಚ್ಚು ಘಟಕಕ್ಕೆ ಕಳುಹಿಸಿಕೊಡಲಾಗುತ್ತದೆ.
ಇದರಿಂದ ಆರೋಪಿ ಪತ್ತೆ ಮಾಡುವುದು ಸುಲಭವಾಗುತ್ತದೆ. ಅಪರಾಧ ನಡೆದ ಸ್ಧಳದಲ್ಲಿ ಬೆರಳಚ್ಚು ಪತ್ತೆಯಾದರೆ ಅದನ್ನು ಮೊದಲು ಆಯಾ ಠಾಣೆಯಲ್ಲಿ ಪರಿಶೀಲಿಸಲಾಗುತ್ತದೆ. ಅಲ್ಲಿ ಸಿಗದಿದ್ದರೆ ಬೇರೆ ಠಾಣೆ, ಇಲ್ಲವಾದಲ್ಲಿ ಬೆರಳಚ್ಚು ಘಟಕಕ್ಕೆ ಕಳುಹಿಸಿದರೆ ಅವರು ಅದನ್ನು ಬೇರೆಯವುಗಳ ಜತೆ ಹೋಲಿಸುತ್ತಾರೆ. ಅಲ್ಲಿಯೂ ಪತ್ತೆಯಾಗದಿದ್ದಲ್ಲಿ ದೆಹಲಿಗೆ ಕಳುಹಿಸಿಕೊಡುತ್ತಾರೆ. ಅದು ಹಳೆ ಆರೋಪಿಯ ಬೆರಳಚ್ಚಾಗಿದ್ದಲ್ಲಿ ಆತನ ಪತ್ತೆ ಸುಲಭ.
- ಶಾಂತ ತಮ್ಮಯ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

