ತಿಳ್ಕೊಳೊ ವಿಷ್ಯ
ಮೂಳೆ ಎಂದಾಕ್ಷಣ ನೆನಪಿಗೆ ಬರುವುದು ಮಾಂಸ. ಅದು ಮಾಂಸಹಾರಿಗಳಿಗೆ. ಆದರೆ, ಕೆಲವೊಮ್ಮೆ ಈ ಮೂಳೆಯಿಂದಲೇ ಮೃತದೇಹ ಯಾರದ್ದು ಎಂಬುದನ್ನು ಪತ್ತೆ ಮಾಡಬಹುದು. ಹಾಗಾಗಿ ಎಲ್ಲಾದರೂ ಮೂಳೆ, ಮೂಳೆಗಳ ರಾಶಿ, ತಲೆಬುರುಡೆ, ಅಸ್ತಿಪಂಜರ ಸಿಕ್ಕಿದಲ್ಲಿ ಎಂದು ಅದನ್ನು ತಿಪ್ಪೆಗೆಸೆಯುವಂತಿಲ್ಲ.
ಸಾಕಷ್ಟು ಪ್ರಕಣಗಳಲ್ಲಿ ಮೂಳೆಯಿಂದ ಅಪರಾಧ ಬೇಧಿಸಿ ಆರೋಪಿ ಪತ್ತೆ ಮಾಡಿರುವ ಉದಾಹರಣೆಗಳುಂಟು.
ನಿರ್ಜನ ಪ್ರದೇಶಗಳಲ್ಲಿ ಹತ್ಯೆ ಮಾಡಿ ಎಸೆದುಬಂದಿರುವ ಪ್ರಕರಣಗಳಲ್ಲಿ ತಿಂಗಳು, ವರ್ಷಗಳು ಕಳೆದ ನಂತರ ಯಾರಿಂದಲೂ ಪೊಲೀಸರ ಕೈಗೆ ಆ ಮೂಳೆ ಸಿಕ್ಕಿ, ಮೃತರನ್ನು ಗುರುತಿಸಿರುವ ಸಂಗತಿಗಳಿವೆ. ಹಾಗಾಗಿ ಮೂಳೆ ಎಂದರೆ ಮೂಗು ಮುರಿದು ದೂರ ಎಸೆಯುವಂತಿಲ್ಲ. ಮೂಳೆ ಸಿಕ್ಕದ ನಂತರ ಪೊಲೀಸರು ಅದನ್ನು ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡುತ್ತಾರೆ. ಆ ಮೂಳೆ ಪ್ರಾಣಿಯದ್ದೋ ಅಥವಾ ಮನುಷ್ಯನದ್ದೋ ಎಂಬುದನ್ನು ಅಲ್ಲಿನ ಸಿಬ್ಬಂದಿ ಪತ್ತೆ ಮಾಡುತ್ತಾರೆ. ಮನುಷ್ಯನದ್ದಾದರೆ ಮಹಿಳೆ ಅಥವಾ ಪುರುಷರದ್ದೋ, ಮಗು, ವಯೋವೃದ್ಧರ ಮೂಳೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ. ಪ್ರಾಣಿಯದ್ದಾಗಿದ್ದರೆ ಯಾವ ಪ್ರಾಣಿ ಎಂದು ಪತ್ತೆ ಮಾಡಲಾಗುತ್ತದೆ.
ಆದರೆ, ಒಂದೆರಡು ಮೂಳೆಯ ತುಂಡುಗಳು ಸಿಕ್ಕಿದರೆ ಅದು ಯಾರದ್ದು ಎಂಬುದನ್ನು ಪತ್ತೆ ಮಾಡಬಹುದು, ಅವರ ಅಸ್ತಿತ್ವ, ಸಂಪೂರ್ಣ ವಿವರ ಹುಡುಕುವುದು ಕಷ್ಟ. ಇಡೀ ಅಸ್ತಿಪಂಜರ ಸಿಕ್ಕಿದರೆ ಸುಲಭವಾಗಿ ಪತ್ತೆ ಮಾಡಬಹುದು. ಬಣ್ಣ ಹಾಗೂ ಗಾತ್ರಗಳಿಂದ ಅದನ್ನು ಪತ್ತೆ ಮಾಡಿ, ನಂತರ ಸಹಜ ಸಾವೇ ಅಥವಾ ಕೊಲೆಯೇ ಎಂಬುದನ್ನೂ ತಿಳಿಯಬಹುದು.
ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಕೊಡುವ ಮಾಹಿತಿ ಆಧರಿಸಿ ಪೊಲೀಸರು ನಾಪತ್ತೆಯಾಗಿರುವ ಪ್ರಕರಣದ ಜಾಡು ಹಿಡಿದು ತನಿಖೆ ನಡೆಸುತ್ತಾರೆ.
- ಶಾಂತ ತಮ್ಮಯ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

