ಬೈಟುಕಾಫಿ

ಮೂರ್ತಿ ಸೆಲೆ

ಮೂರ್ತಿ ಸೆಲೆ
Published On :

ಇವರು ನಿತ್ಯವೂ ಒಂದು ಮೂರ್ತಿ ಕೆತ್ತಿದ ಬಳಿಕವೇ ಪ್ರಸಾದ(ಊಟ) ಸ್ವೀಕರಿಸುತ್ತಾರೆ. ನಂಬಲು ಕಷ್ಟವೆ? ಇದು ದಿಟ.
ಕೊಪ್ಪಳದ ಪ್ರಕಾಶ ಶಿಲ್ಪಿ, ಕೋಟೆ ಪ್ರದೇಶದಲ್ಲಿರುವ ತಮ್ಮ ಮನೆಯಲ್ಲಿಯೇ ಕೆತ್ತನೆ ಕಾರ್ಯ ಮಾಡುತ್ತಾರೆ. ಪ್ರತಿನಿತ್ಯವೂ ಒಂದು ಮೂರ್ತಿಯನ್ನು ಕೆತ್ತಿ, ಅದೇ ಮೂರ್ತಿಗೆ ಪೂಜೆ ಮಾಡಿದ ಬಳಿಕವೇ ಇವರು ಮುಂದಿನ ಕಾರ್ಯಕ್ಕೆ ಅಣಿಯಾಗುತ್ತಾರೆ. ಒಂದಿಂಚಿನ ಮೂರ್ತಿಯಿಂದ ಹಿಡಿದು ನಾಲ್ಕಾರು ಅಡಿಯ ಮೂರ್ತಿಗಳನ್ನೂ ಇವರು ಕೆತ್ತಿದ್ದಾರೆ. ಒಂದೊಂದು ಸಾರಿ ಒಂದೆರಡು ಗಂಟೆಗಳಲ್ಲಿ ಮುಗಿದು ಹೋಗುತ್ತದೆ. ಒಮ್ಮೊಮ್ಮೆ ನಾಲ್ಕಾರು ಗಂಟೆ, ಇನ್ನೂ ಕೆಲವೊಮ್ಮೆ ದಿನವಿಡೀ ಕೆತ್ತನೆ ಮಾಡಬೇಕಾಗುತ್ತದೆ. ಎಷ್ಟೇ ಸಮಯ ತೆಗೆದುಕೊಳ್ಳಲಿ ಮೂರ್ತಿ ಕೆತ್ತನೆ ಬಳಿಕವೇ ಇವರು ಪ್ರಸಾದ ಸ್ವೀಕರಿಸುವುದು ವಿಶೇಷ.

ಆಂಜನೇಯನ ಭಕ್ತ
ಇವರು ಆಂಜನೇಯನ ಪರಮ ಭಕ್ತ. ಹೀಗಾಗಿ, ಪ್ರತಿನಿತ್ಯ ಕೆತ್ತುವ ಮೂರ್ತಿ ಆಂಜನೇಯನದ್ದೇ. ಇದಕ್ಕಾಗಿ ಕೊಪ್ಪಳ ಗವಿಮಠ ಬಳಿ ಸಹಸ್ರಾಂಜನೇಯ ದೇವಸ್ಥಾನ ಸ್ಥಾಪಿಸಿದ್ದಾರೆ. ಅಲ್ಲಿ ತಾವು ಕೆತ್ತಿರುವ ಆಂಜನೇಯ ಮೂರ್ತಿಗಳನ್ನು ಸ್ಥಾಪನೆ ಮಾಡುತ್ತಿದ್ದಾರೆ.
ಅವರ ತಂದೆ ಶೇಖರಪ್ಪ ಅಚಾರ್ ಕೂಡ ಆಂಜನೇಯನ ಭಕ್ತರಾಗಿದ್ದರು. ಅವರು ಮೂರು ದಶಕಗಳಿಂದ ಆಂಜನೇಯನ ಜನ್ಮದಿನಾಚರಣೆ ಮಾಡುತ್ತಾ ಬಂದಿದ್ದರು. ಅವರು ನಿಧನರಾದ ಕೆಲವೇ ದಿನಕ್ಕೆ ಮಾರುತಿಯ ಜನ್ಮದಿನಾಚರಣೆ ಬಂತು. ಅಂದಿನಿಂದಲೇ ಪ್ರತಿನಿತ್ಯ ದೇವರ ಮೂರ್ತಿ ಕೆತ್ತುವ ಪರಿಪಾಠ ಬೆಳಸಿಕೊಂಡರು. 2007 ಜನವರಿ 26ರಿಂದ ಇಲ್ಲಿವರೆಗೆ ನಿತ್ಯವೂ ಈ ಪರಿಪಾಠ ನಡೆದುಬಂದಿದೆ. ಜೂನ್ 10ಕ್ಕೆ 2333 ಮೂರ್ತಿಗಳಾಗಿವೆ!

ವೈವಿಧ್ಯ
ಇವರು ಶಿಲ್ಪಕಲೆಯಲ್ಲಿ ಸಿದ್ಧಹಸ್ತರು. ಮೂರ್ತಿ ಸೇರಿದಂತೆ ನಾನಾ ಬಗೆಯ ಕೆತ್ತನೆ ಅಳವಡಿಸಿಕೊಂಡಿರುವ ಇವರು ಕಲ್ಲಿನ ಕೊಳಲು, ಒಂದೇ ಕಲ್ಲಿನಲ್ಲಿ ಪಂಜರ ಗಿಳಿ, ಕಲ್ಲಿನ ಸರಪಳಿ, ಅಷ್ಟೇ ಯಾಕೆ ಬಾರಿಸುವ ಗಂಟೆಯನ್ನೂ ಕಲ್ಲಿನಲ್ಲಿಯೇ ಕೆತ್ತಿದ್ದಾರೆ.

- ಸೋಮರಡ್ಡಿ ಅಳವಂಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.