ಸೀತೆದಂಡೆ

ಮಳೆಗಾಲ ಆರಂಭವಾದೊಡನೆ ವಸುಂಧರೆಯ ಒಡಲಿನಲ್ಲಿ ಇರುವ ಬೀಜಗಳು ಚಿಗುರಲು ಪ್ರಾರಂಭವಾಗಿ ಇಳೆಯ ಹೃದಯವೆಲ್ಲಾ ಹಸಿರಾಗುತ್ತದೆ. ಈ ಕ್ರಿಯೆ ನಿರಂತರ ನಡೆಯುತ್ತದೆ. ಅದು ಕೇವಲ ಸ್ವತಂತ್ರವಾಗಿ ಬೆಳೆಯುವ ಸಸ್ಯ ಸಮೂಹಕ್ಕೆ ಮಾತ್ರ ಸೀಮಿತವಲ್ಲ. ಮತ್ತೊಂದು ಸಸ್ಯವನ್ನು ಅವಲಂಬಿಸಿ ಬೆಳೆಯುವ ಸಸ್ಯ ಸಂಕುಲಗಳಲ್ಲಿಯೂ ಆ ಕ್ರಿಯೆ ಸಹಜವಾಗಿಯೇ ನಡೆಯುತ್ತದೆ.
ಮಳೆ ಬೀಳುತ್ತಿದ್ದಂತೆ ಹಸಿರಾಗುವ ಈ ಸಸ್ಯಗಳು ಕೆಲವೇ ದಿನದಲ್ಲಿ ಹೂ ಬಿಟ್ಟು ನಳನಳಿಸುತ್ತವೆ. ಹಾಗೆಯೇ ವಂಶಾಭಿವೃದ್ಧಿಯನ್ನೂ ಮಾಡುತ್ತದೆ. ಮತ್ತೊಬ್ಬರನ್ನು ಅವಲಂಬಿಸಿ ಬೆಳೆಯುವ ಗಿಡಗಳಲ್ಲಿ ಸೀತೆದಂಡೆಯೂ ಒಂದು. ಆಕರ್ಷಕ ಹೂ ಬೀಡುವ, ಸೀತೆದಂಡೆ ಎಂದು ಕರೆಸಿಕೊಳ್ಳುವ ಈ ಪುಷ್ಪವು ಆರ್ಕಿಡ್ ಪ್ರಭೇಧಕ್ಕೆ ಸೇರಿದೆ. ಮಳೆಗಾಲದ ಆರಂಭದಲ್ಲಿ ಕಂಗೊಳಿಸುವ ಈ ಗಿಡದ ಹೂ ಸುಮಾರು 10-15 ದಿನಗಳವರೆಗೂ ತಾಜಾತನದಿಂದ ತನ್ನ ಸೌಂದರ್ಯವನ್ನು ಪ್ರದರ್ಶಿಸುತ್ತದೆ. ಸಾಮಾನ್ಯವಾಗಿ ಮಲೆನಾಡಿನಲ್ಲಿ ಕಂಡು ಬರುವ ಈ ಸೀತೆದಂಡೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಅಧಿಕವಾಗಿ ಕಂಡುಬರುತ್ತದೆ. ಇದು ಶಮೆಪತ್ರೆಯ ಗಿಡದಲ್ಲಿ ಅರಳಿದ ಹೂ.
ಚಿತ್ರ, ಬರಹ: ಗಣಪತಿ ಹಾಸ್ಪುರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


