ಬೈಟುಕಾಫಿ

ಧ್ಯೇಯ ಮೊದಲು

Published On :

ರಾಮಕೃಷ್ಣರು ನರೇಂದ್ರನನ್ನು ಪರಿಪರಿಯಾಗಿ ಪರೀಕ್ಷಿಸಿದರು. ಒಂದು ದಿನ ಅವರು ಅವನನ್ನು ಪಂಚವಟಿಯ ಏಕಾಂತಕ್ಕೆ ಕರೆತಂದು ಹೇಳಿದರು, 'ನೋಡು, ಆಧ್ಯಾತ್ಮಿಕ ಸಾಧನೆಗಳ ಫಲವಾಗಿ ನನಗೆ ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯ, ಈಶಿತ್ವ ಮತ್ತು ವಶಿತ್ವ ಎಂಬ ಅಷ್ಟಸಿದ್ಧಿಗಳು ಲಭ್ಯವಾಗಿವೆ. ಆದರೆ ನೀನೇ ನೋಡುತ್ತಿದ್ದೀಯಲ್ಲಿ, ಮೈಮೇಲಿನ ಬಟ್ಟೆಯನ್ನೂ ಸರಿಯಾಗಿ ಇಟ್ಟುಕೊಳ್ಳಲಾರದವನು ನಾನು. ನನ್ನಂಥವನಿಗೆ ಆ ಸಿದ್ಧಿಗಳನ್ನೆಲ್ಲ ಕಟ್ಟಿಕೊಂಡು ಏನಾಗಬೇಕು! ಆದ್ದರಿಂದ ಅವನ್ನೆಲ್ಲ ನಿನಗೆ ಕೊಟ್ಟುಬಿಡಲು ಜಗನ್ಮಾತೆಯನ್ನು ಕೇಳಿಕೊಳ್ಳೋಣವೆಂದಿದ್ದೇನೆ. ಹೇಗಿದ್ದರೂ ಮುಂದೆ ನೀನು ಮಾತೆಯ ಕಾರ್ಯಗಳನ್ನು ಬಹಳಷ್ಟು ಸಾಧಿಸುವುದಕ್ಕಿದೆ ಅಂತ ಮಾತೆಯೇ ಹೇಳಿದ್ದಾಳೆ. ಆಗ ನೀನು ಈ ಸಿದ್ಧಿಗಳನ್ನು ಯಥೇಚ್ಛವಾಗಿ ಬಳಸಬಹುದು, ಏನೆನ್ನುವೆ?'
ನರೇಂದ್ರ ಕ್ಷಣಕಾಲ ಯೋಚಿಸಿ, 'ಅನುಗಳಿಂದ ನನಗೆ ಭಗವತ್ಸಾಕ್ಷಾತ್ಕಾರಕ್ಕೆ ಅನುಕೂಲವಾಗುತ್ತದೆಯೆ?' ಎಂದು ಕೇಳಿದ. ರಾಮಕೃಷ್ಣರು 'ಇಲ್ಲ ಇಲ್ಲ, ಆ ದಿಸೆಯಲ್ಲಿ ಅವುಗಳಿಂದ ನಿನಗೇನೂ ಉಪಯೋಗವಾಗಲಾರದು. ಆದರೆ ನಾನು ಸಾಕ್ಷಾತ್ಕಾರ ಪಡೆದುಕೊಂಡಾದ ಮೇಲೆ, ಜಗನ್ಮಾತೆಯ ಕಾರ್ಯಗಳನ್ನು ಸಾಧಿಸಲು ಸಹಾಯವಾದೀತು.'
ನರೇಂದ್ರ ತಕ್ಷಣ 'ನನಗವೆಲ್ಲ ಬೇಡ, ಮೊದಲು ನನಗೆ ಭಗವತ್ಸಾಕ್ಷಾತ್ಕಾರವಾಗಬೇಕು. ಆ ಸಿದ್ಧಿಗಳೆಲ್ಲ ಪಡೆದುಕೊಳ್ಳುವುದೋ ಬಿಡುವುದೋ ಎಂದು ಆಮೇಲೆ ಆಲೋಚಿಸಬಹುದು. ಈಗಲೇ ಅವು ನನ್ನ ಕೈಸೇರಿದರೆ ನಾನು ಅಹಂಕಾರವಶವಾಗಿ ನನ್ನ ಧ್ಯೇಯವನ್ನು ಮರೆತು ಹಾಳಾಗಿಹೋದೇನು'.
ನರೇಂದ್ರ, ರಾಮಕೃಷ್ಣರು ಒಡ್ಡಿದ ಪರೀಕ್ಷೆಯಲ್ಲಿ ಮತ್ತೊಮ್ಮೆ ಉನ್ನತ ದರ್ಜೆಯಲ್ಲಿ ಉತ್ತೀರ್ಣನಾದ.

-ಆನಂದ ಎಸ್.ಎನ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.