ಬೈಟುಕಾಫಿ

ನಾಳೆ ಯಕ್ಷಮುಂಗಾರು

Published On :

ನಾಳೆ (ಜೂನ್ 30, ಭಾನುವಾರ) ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಯಕ್ಷಮುಂಗಾರು. ಶೃಂಗೇರಿಯ ಕ್ರಿಯಾಶೀಲ ಸಾಂಸ್ಕೃತಿಕ ಸಂಘಟಕ ರಮೇಶ್ ಬೇಗಾರ್ ಸಯೋಜನೆಯಲ್ಲಿ ಪ್ರತಿವರ್ಷ ರಾಜಧಾನಿಯಲ್ಲಿ ವಿಶಿಷ್ಟ ಪೌರಾಣಿಕ ಯಕ್ಷಗಾನೋತ್ಸವ 'ಯಕ್ಷಮುಂಗಾರು' ನಡೆಯುತ್ತಿದೆ. ಈ ವರ್ಷ ಜನಪ್ರಿಯ ಕಲಾವಿದರ ಮೇಳೈಸುವಿಕೆಯಲ್ಲಿ ಚಂಡೆ-ಮದ್ದಲೆ ಅಬ್ಬರದೊಂದಿಗೆ ಮೊರೆಯಲಿದೆ.
ಪ್ರಸಿದ್ಧ ವೃತ್ತಿ ಮೇಳ ಸಾಲಿಗ್ರಾಮ ಮೇಳ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಹಲಸಿನಹಳ್ಳಿ ನರಸಿಂಹಶಾಸ್ತ್ರಿ ವಿರಚಿತ ಚಂದ್ರಹಾಸ, ಭೀಷ್ಮ ಪರ್ವ ಹಾಗೂ ಹಟ್ಟಿಯಂಗಡಿ ರಾಮಭಟ್ಟ ವಿರಚಿತ ಸುಭದ್ರಾ ಕಲ್ಯಾಣ ಅಖ್ಯಾನಗಳು ಪ್ರದರ್ಶನಗೊಳ್ಳಲಿವೆ. ಕಾರ್ಯಕ್ರಮಕ್ಕೆ ಭಾರತೀತಿರ್ಥ ಕಲ್ಚರಲ್ ಟ್ರಸ್ಟ್ ಮತ್ತು ಸರೋಜ ವಿಠಲ ಶೆಟ್ಟಿ ಸ್ಮಾರಕ ಪ್ರತಿಷ್ಠಾನಗಳ ಸಹಯೋಗವಿದೆ.
ಚಿಟ್ಟಾಣಿ ರಾಮಚಂದ್ರ ಹೆಗಡೆ (ದುಷ್ಟಬುದ್ಧಿ), ಬಳ್ಕೂರು ಕೃಷ್ಣಯಾಜಿ (ಬಲರಾಮ), ತೋಟಿಮನೆ ಗಣಪತಿ ಹೆಗಡೆ (ಕೃಷ್ಣ), ಸುಬ್ರಹ್ಮಣ್ಯ ಚಿಟ್ಟಾಣಿ (ಮದನ), ಶಶಿಕಾಂತ ಶೆಟ್ಟಿ (ವಿಶಯೆ) ಮುಂತಾದ ಪ್ರಸಿದ್ಧ ಕಲಾವಿದರ ಪಾತ್ರ ಪೋಷಣೆಯ ಜತೆಗೆ ಯಕ್ಷರಂಗದ ಮೌಖಿಕ ಪರಂಪರೆಯ ಶ್ರೇಷ್ಠ ಕಲಾವಿದ ಮಲ್ಪೆ ವಾಸುದೇವ ಸಾಮಗ ಇವರ ಭೀಷ್ಮನ ಪಾತ್ರ ಈ ಪ್ರದರ್ಶನದ ಹೈಲೈಟ್ಸ್. ಸುಬ್ರಹ್ಮಣ್ಯ ಧಾರೇಶ್ವರ, ರಾಘವೇಂದ್ರ ಮಯ್ಯ ಹಾಗೂ ಯುವ ಪ್ರತಿಭೆ ರಾಮಕೃಷ್ಣ ಹೆಗಡೆ ಇವರ ಯಕ್ಷಗಾಯನ; ಕೋಟ ಶಿವಾನಂದ, ಪರಮೇಶ್ವರ ಭಂಡಾರಿ ಇವರ ಚಂಡೆ - ಮದ್ದಲೆಗಳ ಸದ್ದು ಪ್ರದರ್ಶನಕ್ಕೆ ಕಳೆಗಟ್ಟಲಿವೆ. ಯಕ್ಷರಂಗದ ಹೆಸರಾಂತ ಹಾಸ್ಯ ಜೋಡಿ ಹಳ್ಳಾಡಿ ಜಯರಾಮಶೆಟ್ಟಿ ಹಾಗೂ ರಮೇಶ್ ಭಂಡಾರಿ ಇವರು ಪ್ರದರ್ಶನದುದ್ದಕ್ಕೂ ಹಾಸ್ಯದ ಕೋಲ್ಮಿಂಚು ಹರಿಸಲಿದ್ದಾರೆ.
ಪ್ರವೇಶಪತ್ರ ಇತ್ಯಾದಿ ವಿವರಗಳಿಗೆ ಸಂಯೋಜಕ ರಮೇಶ್ ಬೇಗಾರ್ (9448101708) ಇವರನ್ನು ಸಂಪರ್ಕಿಸಬಹುದು.
ಎಂದು?
ಜೂನ್ 30, ಭಾನುವಾರ; ಮಧ್ಯಾಹ್ನ 2ರಿಂದ ರಾತ್ರಿ 8.
ಎಲ್ಲಿ?
ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಬೆಂಗಳೂರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.