ಬೈಟುಕಾಫಿ

ಹಾಟ್ ಅಟ್ಯಾಕ್

ಬೇಸಿಗೆ ಬಾಯಾರಿಕೆಯ ಕಾಲ. ತಂಪಾಗಿದ್ದದ್ದನ್ನೇ ಬಯಸುತ್ತದೆ ದೇಹ.

ಹಾಟ್ ಅಟ್ಯಾಕ್
Published On :

ಬೇಸಿಗೆ ಬಾಯಾರಿಕೆಯ ಕಾಲ. ತಂಪಾಗಿದ್ದದ್ದನ್ನೇ ಬಯಸುತ್ತದೆ ದೇಹ. ಯಾವುದು ಆರೋಗ್ಯಕರ, ಯಾವುದು ರೋಗಕಾರಕ ಎಂಬುದನ್ನು ಅರಿಯದ ಮನಸು ಬಿಸಿಲಿನ ಹೊಡೆತದಿಂದ ವಿಚಿತ್ರವಾಗಿ ವರ್ತಿಸುತ್ತದೆ. ಬಳಲಿಕೆ ಕಾಡುತ್ತದೆ. ಅದೆಲ್ಲಿರುತ್ತವೋ ಸಾಂಕ್ರಾಮಿಕ ರೋಗಗಳು, ಇದೇ ಸಮಯದಲ್ಲೇ ಬಂದು ಲಬಕ್ಕಂತ ಹಿಡಿದುಕೊಂಡುಬಿಡುತ್ತವೆ.
ಆರೋಗ್ಯಕರ ಆಹಾರ, ಪಾನೀಯ, ಅಭ್ಯಾಸಗಳಿಂದ ಬೇಸಿಗೆಯ ಗಂಡಾಂತರಗಳನ್ನು ಪಾರಾಗಲು ಸಾಧ್ಯ. ಅದು ಹೇಗೆ?

  • ಬೇಸಿಗೆ ಕಾಲದಲ್ಲಿ ಬರುವ ರೋಗಗಳಿಂದ ರಕ್ಷಣೆ ಪಡೆಯಲು ಹೆಚ್ಚಿನ ಪ್ರಮಾಣದಲ್ಲಿ ದಿನವೆಲ್ಲಾ ಮಧ್ಯೆ ಮಧ್ಯೆ, ಸ್ವಚ್ಛ ತಣ್ಣೀರನ್ನು ಕುಡಿಯುತ್ತಿರಬೇಕಾಗುತ್ತದೆ.
  • ಸಡಿಲ ಹಾಗೂ ಹಗುರ ವಾಗಿರುವ ಹತ್ತಿ ಬಟ್ಟೆಗಳನ್ನು ತೊಡಬೇಕು.
  • ದಿನದಲ್ಲಿ ಹೆಚ್ಚು ಬಾರಿ ತಣ್ಣೀರು ಸ್ನಾನ ಮಾಡಿಕೊಳ್ಳಬೇಕು, ಕೊನೆಯ ಪಕ್ಷ ಬೆಳಿಗ್ಗೆ ಸಂಜೆಯಾದರೂ ಮಾಡಬೇಕು.
  • ಬಿಸಿ ವಾತಾವರಣದಲ್ಲಿ ಅಗತ್ಯಕ್ಕಿಂತ ಹೆಚ್ಚು ಶ್ರಮದ ಕೆಲಸ ಮತ್ತು ವ್ಯಾಯಾಮಗಳನ್ನು ಮಾಡಬಾರದು.
  • ಷರಬತ್ತು, ಹಣ್ಣಿನ ರಸಗಳು, ಮಜ್ಜಿಗೆ, ಲಸ್ಸಿ, ನಿಂಬೆಹಣ್ಣಿನ ರಸದಿಂದ ತಯಾರಿಸಿದ ಪಾನೀಯಗಳು, ಓಆರ್‌ಎಸ್ (ಓರಲ್ ಡಿಹೈಡ್ರೇಷನ್ ಸೊಲ್ಯೂಷನ್: ಬೇಧಿಯಾಗುವವರಿಗೆ ನೀಡುವ ದ್ರಾವಣ) ಲವಣವನ್ನು ನೀರಿನಲ್ಲಿ ಕರಗಿಸಿ ಆಗಾಗ್ಗೆ ಕುಡಿಯುತ್ತಿರಬೇಕು.
  • ಸೌತೆಕಾಯಿಯಲ್ಲಿ ನೀರಿನಂಶ ಜಾಸ್ತಿಯಿದ್ದು ಬೇಸಿಗೆಯಲ್ಲಿ ಇದು ತಿನ್ನಲು ಯೋಗ್ಯ.
  • ಮನೆಯಿಂದ ಹೊರಹೋಗುವಾಗ ಸ್ವಚ್ಛ ತಣ್ಣೀರನ್ನು ಕುಡಿದು ಹೋಗಿ. ಹೊರಗಿನಿಂದ ಮನೆಗೆ ಬಂದ ನಂತರ ಬೆವರು ಬಸಿಯುವುದು ನಿಂತು ಅದು ಒಣಗಿದ ನಂತರವೇ ನೀರು ಕುಡಿಯಬೇಕು.
  • ಬಿಸಿಲಹವೆ, ಮತ್ತು ಬಿಸಿಲು ಎರಡರಿಂದಲೂ ರಕ್ಷಣೆ ಪಡೆಯಬೇಕು. ಏಕೆಂದರೆ ತೀಕ್ಷ್ಣ ಬಿಸಿಲ ಹವೆ ಕಿವಿಯೊಳಗೆ ಹೊಕ್ಕಾಗ ತಲೆನೋವು, ಕಿವಿನೋವು ಬರುತ್ತವೆ.
  •  ಟೀ, ಕಾಫಿ ಕುಡಿಯುವವರು ಅವನ್ನು ಅಲ್ಪ ಪ್ರಮಾಣದಲ್ಲಿ ಸೇವಿಸಬೇಕು; ಅಥವಾ ಸಾಧ್ಯವಾದರೆ ಬಿಟ್ಟೇ ಬಿಡಬೇಕು, ಏಕೆಂದರೆ ಇವು ಉ್ಝ್ಡ್ಠಜಡ್ಝ್ಛಿಜ, ಅಂದರೆ ಮೂತ್ರವರ್ಧಕಗಳು. ಮೂತ್ರ ಹೆಚ್ಚಿಸುತ್ತವೆ. ಹಾಗಾಗಿ ಮೈಯಲ್ಲಿನ ನೀರು ಹೊರದೂಡಲ್ಪಡುತ್ತಿರುತ್ತದೆ. ಹಾಗೂ ಒಂದು ಪಕ್ಷ ಇವನ್ನು ಸೇವಿಸುವುದಾದರೆ ಏನನ್ನಾದರೂ ತಿಂದೇ ಸೇವಿಸಬೇಕು; ಖಾಲಿ ಹೊಟ್ಟೆಯಲ್ಲಿ ಇವನ್ನು ಸೇವಿಸಬಾರದು.
  •  ಅತ್ಯಂತ ಬಿಸಿಲಿನಲ್ಲಿ ಹೆಚ್ಚು ಕಾಲ ಇರಬಾರದು. ಬಿಸಿಲಿನಲ್ಲಿ ಹೊರಗೆ ಹೋಗುವಾಗ ತಲೆಗೆ ಕ್ಯಾಪ್ ಧರಿಸಬೇಕು, ಮಹಿಳೆಯರು ಸ್ಕಾರ್ಫ್ ಕಟ್ಟಿಕೊಳ್ಳಬೇಕು, ಕಣ್ಣುಗಳಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಳ್ಳಬೇಕು. ಛತ್ರಿ ಬಳಸಿ ಬಿಸಿಲಿನಲ್ಲಿ ಸಾಧ್ಯವಾದಷ್ಟು, ಶ್ರಮದ ಕೆಲಸ ಮಾಡಬಾರದು. ಒಂದು ಪಕ್ಷ ತಲೆನೋವು, ತಲೆ ತಿರುಗಿ ವಾಂತಿಯಾದರೆ ತಕ್ಷಣ ನೆರಳಿನಲ್ಲಿ ಅಥವಾ ಕಟ್ಟಡಗಳ ಒಳಗೆ ತೆರೆದ ಗಾಳಿ ಬೀಸುವ ಸ್ಥಳದಲ್ಲಿ ನಿಂತು ವಿಶ್ರಾಂತಿ ಪಡೆಯಬೇಕು. ಫ್ಯಾನ್, ಏರ್‌ಕೂಲರ್, ಏರ್ ಕಂಡೀಶನರ್‌ಗಳನ್ನು ಬಳಸಬಹುದು.
ಸೂರ್ಯಾಘಾತ
ವರ್ಜ್ಯ ಆಹಾರ
- ಎಸ್. ವಿಶ್ವನಾಥ, ಮಂಡ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.