ಬೈಟುಕಾಫಿ

ಕಾರಾಗೃಹಗಳ ಇಲಾಖೆ

Published On :

ಕಾರಾಗೃಹ ಇಲಾಖೆ ಗೃಹ ಇಲಾಖೆ ಅಡಿ ಕೆಲಸ ನಿರ್ವಹಿಸುತ್ತದೆ. ಆದರೆ, ಅದಕ್ಕೇ ಪ್ರತ್ಯೇಕ ಎಡಿಜಿಪಿ ಮತ್ತು ಐಜಿ (ಕಾರಾಗೃಹಗಳ ಮಹಾನಿರೀಕ್ಷಕ) ಇರುತ್ತಾರೆ. ಇವರ ನೇತೃತ್ವದಲ್ಲಿ ಕಾರಾಗೃಹ ಇಲಾಖೆ ಸಿಬ್ಬಂದಿ ಕೆಲಸ ನಿರ್ವಹಿಸುತ್ತಾರೆ. ಇವರ ನಂತರ ಡಿಐಜಿ ಹಿರಿಯ ಅಧಿಕಾರಿಗಳ ಪಟ್ಟಿಯಲ್ಲಿದ್ದಾರೆ.
ಪ್ರಮುಖವಾಗಿ ಕೈದಿಗಳ ಯೋಗಕ್ಷೇವು, ಕಾರಾಗೃಹಗಳ ಉಸ್ತುವಾರಿ, ಜೈಲಿನಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಎಚ್ಚರವಹಿಸುವುದು ಅಧಿಕಾರಿಗಳ ಜವಾಬ್ದಾರಿ.
ಅಧೀಕ್ಷಕರು ಪ್ರತಿ ಕಾರಾಗೃಹದ ಉಸ್ತುವಾರಿ ವಹಿಸುತ್ತಾರೆ. ಕೈದಿಗಳನ್ನು ನೋಡಿಕೊಳ್ಳಲು ಜೈಲರ್ ಹಾಗೂ ವಾರ್ಡರ್ಗಳು ಇರುತ್ತಾರೆ. ಜೈಲಿನಲ್ಲಿರುವ ಕೈದಿಗಳಲ್ಲಿ ಕೈದಿಗಳು ಹಾಗೂ ವಿಚಾರಣಾಧೀನ ಕೈದಿಗಳು ಎಂಬ ಎರಡು ವಿಧಗಳಿವೆ. ಕೈದಿಗಳೆಂದರೆ ಆರೋಪ ಸಾಬೀತಾದವರು. ವಿಚಾರಣಾಧೀನ ಕೈದಿಗಳೆಂದರೆ ಅವರ ವಿರುದ್ಧ ದಾಖಲಾಗಿರುವ ಆರೋಪ ಇನ್ನೂ ಸಾಬೀತಾಗಿಲ್ಲ ಎಂದರ್ಥ. ಈ ಕೈದಿಗಳು ಜೈಲಿನಲ್ಲಿ ಸುಮ್ಮನೆ ಕೂರುವಂತಿಲ್ಲ. ಅವರವರ ಉದ್ಯೋಗಕ್ಕನುಗುಣವಾಗಿ ಅಲ್ಲಿ ಕೆಲಸ ಇರುತ್ತದೆ. ನ್ಯಾಯಲಯ ಅವರಿಗೆ ವಿಧಿಸಿರುವ ಶಿಕ್ಷೆ ಮುಕ್ತಾಯವಾಗುವವರೆಗೂ ಅಲ್ಲಿ ದುಡಿಯಬೇಕು. ಬಿಡುಗಡೆ ವೇಳೆ ಆ ಸಂಬಳದ ಹಣವನ್ನು ನೀಡಲಾಗುತ್ತದೆ. ಆದರೆ, ವಿಚಾರಣಾಧೀನ ಕೈದಿಗಳಿಗೆ ಹಾಗಲ್ಲ. ಅವರು ಕೆಲಸ ಮಾಡದಿದ್ದರೂ ಒತ್ತಾಯಮಾಡುವಂತಿಲ್ಲ. ಇಷ್ಟಪಟ್ಟರೆ ಕೆಲಸ ಮಾಡಬಹುದು. ಅದಕ್ಕೆ ಕೂಲಿ ಸಿಗುತ್ತದೆ. ಜೈಲಿಗೆ ಹೋದ ನಂತರವೂ ಅಲ್ಲಿ ಗುಂಪುಗಳನ್ನು ಕಟ್ಟಿಕೊಂಡು ಜಗಳ ಮಾಡುವುದು, ಬೇರೆ ಕೈದಿಗಳ ಮೇಲೆ ಹಲ್ಲೆ ಮಾಡುವುದು, ಅಲ್ಲಿನ ಪರಿಸರ ಹಾಳುಮಾಡುವುದು ಮಾಡಿದಲ್ಲಿ ಅವರನ್ನು ಬೇರೆ ಜೈಲಿಗೆ ವರ್ಗಾಯಿಸಲು ಹಿರಿಯ ಅಧಿಕಾರಿಗಳಿಗೆ ಅವಕಾಶ ಇರುತ್ತದೆ. ಈ ಬಗ್ಗೆ ಸಂಬಂಧಪಟ್ಟ ಅಧೀಕ್ಷಕರು/ಜೈಲು ಅಧಿಕಾರಿಗಳು ಐಜಿಪಿ ಅವರ ಗಮನಕ್ಕೆ ತರಬೇಕು.

 -ಶಾಂತ ತಮ್ಮಯ್ಯ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.