ದಾಸವ್ಹಾಳ
ದಾಸವಾಳದ ಗಿಡವೊಂದು ಎಷ್ಟು ಎತ್ತರ ಬೆಳೆದೀತು? ಕುತೂಹಲವಿರುವವರು ಅಂಕೋಲ ತಾಲೂಕಿನ ಬೆಳಂಬಾರು ಗ್ರಾಮದ ಮಹಾದೇವ ಗೌಡರ ಮನೆಯಂಗಳಕ್ಕೊಮ್ಮೆ ಹೋಗಬೇಕು. ಆಕಾಶಕ್ಕೆ ಮುತ್ತಿಡುತ್ತೇನೆ ಎಂದು ಮೇಲೇರುತ್ತಿರುವ ಗಿಡ 55 ಅಡಿ ಎತ್ತರವನ್ನು ದಾಟಿ. ದಾಖಲೆ ಸೇರಲು ಸಿದ್ಧವಾಗುತ್ತಿದೆ.
ದಾಸವಾಳದ ಮೃದು ಕಾಂಡ ಬಾಗದೆ ಮೇಲೇರುವಂತೆ ಅದಕ್ಕೆ ಬಲವಾದ ಆಧಾರ ಕೊಟ್ಟಿದ್ದಾರೆ. ಹತ್ತು ವರ್ಷ ಹಿಂದೆ ನಸು ಗುಲಾಬಿ ವರ್ಣದ ಹೂ ಬಿಡುವ ಈ ದಾಸವಾಳದ ಗಿಡವನ್ನು ಗೌಡರು ನೆಟ್ಟದ್ದು ಪೂಜೆಗೆ ಹೂ ಕೊಯ್ಯುವ ಉದ್ದೇಶದಿಂದ. ಅದರೊಂದಿಗೆ ಗಿಡದ ಎಲೆಗಳು ಔಷಧಯುಕ್ತ. ಬೇಸಗೆಯಲ್ಲಿ ಬೆವರುಗುಳ್ಳೆ ಕಿರಿಕಿರಿ ಮಾಡಿದರೆ ಅದರ ಎಲೆಗಳನ್ನು ನೀರಿನಲ್ಲಿ ಗಿವುಚಿ ಸ್ನಾನ ಮಾಡಿದರೆ ಮುಕ್ತಿ. ಎಲೆಗಳ ಸೇರಿಸಿ ತಯಾರಿಸಿದ ಇಡ್ಲಿ ರಕ್ತಶುದ್ಧಿಗೆ ಸಹಾಯಕ. ದನಗಳಿಗೆ ತಿನ್ನಿಸಿದರೆ ಅಧಿಕ ಹಾಲು. ಹೂಗಳಿಂದ ಸ್ವಾದಿಷ್ಟ ಗೊಜ್ಜು ತಯಾರಾಗುತ್ತದೆ.
ಹೀಗಾಗಿ ಗಿಡಕ್ಕೆ ಗೊಬ್ಬರ ಹಾಕಿ ನೀರೆರೆದು ಪ್ರೀತಿಯಿಂದ ಸಾಕಿದ್ದರ ಫಲವಾಗಿ ಎತ್ತರೆತ್ತರ ಬೆಳೆಯುತ್ತಲೇ ಹೋಗಿರುವ ಗಿಡ, ಮರವಾಗಿ ಬೇಸಗೆ ಮಳೆಗಾಲವೆಂದಿಲ್ಲದೆ ಪೂಜೆಗೆ ನಿತ್ಯ ಹೂ ಕೊಡುತ್ತಿದೆ. ಬೆಳಂಬಾರಿಗೆ ಹೋದವರು ಗೌಡರ ಮನೆಯ ಮುಂದೆ ಆಕಾಶಕ್ಕೆ ಏಣಿಯಿಟ್ಟ ದಾಸವಾಳದ ಗಿಡ ನೋಡದೆ ಮರಳಿ ಬರುವುದಿಲ್ಲ.
-ಪ.ರಾಮಕೃಷ್ಣ ಶಾಸ್ತ್ರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

