ಬೈಟುಕಾಫಿ

ಉಸ್ಸಪ್ಪಾ!

ಉಸ್ಸಪ್ಪಾ!
Published On :

ಅಯ್ಯೋ ನಂಗೆ ಈಗಾಗಲೇ ಐವತ್ತು ವರ್ಷ. ನಮಗ್ಯಾಕೆ ಆ 'ಸುಖ' ಎಂದು ಹಲವರು ಗೊಣಗುತ್ತಾರೆ. ಇದಕ್ಕೆ ಕಾರಣ ಹಿಂದಿನಿಂದ ಸಂಪ್ರದಾಯ ಅಥವಾ ಕಟ್ಟುಪಾಡು ಕಾರಣವಿರಬಹುದು. 'ಹುಣಸೆ ಮುಪ್ಪಾದರೆ ಹುಳಿ ಮುಪ್ಪೇ' ಎಂಬುದು ಪ್ರಸಿದ್ಧ ಗಾದೆ. ಇದೇ ಮಾತನ್ನು ಆರೋಗ್ಯಕರ ಲೈಂಗಿಕತೆಗೂ ಅನ್ವಯಿಸಬಹುದು. ಮಿಲನ ಮಹೋತ್ಸವ ಆಚರಿಸುವುದಕ್ಕೆ ನಿವೃತ್ತಿ ಎಂಬುದೇ ಇಲ್ಲ! ಅದು ಸಾಧ್ಯವಾಗೋದು ಆರೋಗ್ಯಕರ ಲೈಂಗಿಕ ಜೀವನ ಅಳವಡಿಸಿಕೊಂಡಾಗ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ಇಷ್ಟಕ್ಕೂ ಲೈಂಗಿಕ ಕ್ರಿಯೆ ಅನ್ನೋದು ಕೇವಲ ದೈಹಿಕ ಸುಖಕ್ಕೆ ಮಾತ್ರ ಸೀಮಿತವಲ್ಲ ಅಥವಾ ಸಂತಾನಕ್ಕಾಗಿ ಮೀಸಲಲ್ಲ. ಅಷ್ಟೇ ಆಗಿದ್ದರೆ 'ಆ' ವಿಷಯಕ್ಕೆ ಅಷ್ಟೊಂದು ಮಹತ್ವ ಕೊಡುವ ಅಗತ್ಯವಿರಲಿಲ್ಲ. 'ಮಿಲನ' ಆರೋಗ್ಯಕರ ಎರಡು ಮನಸ್ಸುಗಳ ಮಧುರ ಸಮ್ಮಿಳಿತ. ಅದರಿಂದ 'ಸುಖ'ವಷ್ಟೇ ಅಲ್ಲದೆ, ದಾಂಪತ್ಯದ ಹಂದರವನ್ನು ಮತ್ತಷ್ಟು ಗಟ್ಟಿಗೊಳಿಸಲು ಸಾಕಷ್ಟು ಸಹಕಾರಿ ಅನ್ನೋದರಲ್ಲಿ ಎರಡು ಮಾತಿಲ್ಲ. ಅದಕ್ಕೂ ಮಿಗಿಲಾಗಿ ಅದು ಪ್ರಕೃತಿ ಕೊಡುಗೆ. ಹಾಗಾಗಿ ಐವತ್ತು ವರ್ಷವಾಯಿತು, ಇನ್ನು ಬೇಡ ಎಂಬಂಥ ಗಡಿರೇಖೆ ತರವಲ್ಲ.
ದೇಹಕ್ಕೆ ಐವತ್ತಾಗಲಿ, ಅದರ ಗಡಿ ದಾಟಲಿ. ಆದರೆ, ಆರೋಗ್ಯಕರ ಲೈಂಗಿಕ ಕ್ರಿಯೆಗೆ ಯಾವುದೇ ಸೀಮಾರೇಖೆಯಿಲ್ಲ. ಅದಕ್ಕೆ ಮೊದಲು ಪೂರ್ವಾಗ್ರಹವನ್ನು ಮನಸ್ಸಿನಿಂದ ಆಚೆ ಕಿತ್ತೆಸೆಯಬೇಕು.  ಈ ಕುರಿತು ಕೆಳಕಂಡ ಟಿಪ್ಸ್ ಸಹಕಾರಿಯಾದೀತು.
-   ಸಾಮಾನ್ಯವಾಗಿ ಮಹಿಳೆಯರಲ್ಲಿ 40ರಿಂದ 50ರ ವಯಸ್ಸಲ್ಲಿ ಮುಟ್ಟು ನಿಲ್ಲುವ ಸಾಧ್ಯತೆ ಅಧಿಕ. ಇದನ್ನೇ ಹಲವರು ತಪ್ಪಾಗಿ ಭಾವಿಸಿ ಮುಟ್ಟು ನಿಂತ ಬಳಿಕ ಲೈಂಗಿಕ ಕ್ರಿಯೆ ಅಪಥ್ಯ ಎನ್ನುತ್ತಾರೆ. ಈ ಪೂರ್ವಾಗ್ರಹ ಬಿಡಬೇಕು.
-    ಮಹಿಳೆಯರಿಗೆ ಐವತ್ತು ವರ್ಷವಾಯಿತೆಂದರೆ ಅವರು ಲೈಂಗಿಕವಾಗಿ ಅಸಮರ್ಥರು ಎಂಬುದು ಬಹಳಷ್ಟು ಪುರುಷರ ಲೆಕ್ಕಾಚಾರ. ಇದು ಕೂಡ ತಪ್ಪುಗ್ರಹಿಕೆ.
-    ಲೈಂಗಿಕ ಕ್ರಿಯೆ ಪ್ರಕೃತಿ ಕೊಡುಗೆ. ಐವತ್ತು ವರ್ಷವಾಯಿತೆಂದು ಅದನ್ನು ನಿಲ್ಲಿಸಿದರೆ ಪ್ರಕೃತಿ ಕೊಡುಗೆಗೆ ಕಲ್ಲು ಹಾಕಿದಂತೆ ಅಲ್ಲವೇ? ಆರೋಗ್ಯಕರ ಲೈಂಗಿಕ ಕ್ರಿಯೆಗೆ ಕಟ್ಟುಪಾಡು ವಿಧಿಸುವುದು ಸರಿಯಲ್ಲ.
-   ಲೈಂಗಿಕ ಕ್ರಿಯೆ ಎಷ್ಟು ಮುಖ್ಯವೋ ಅದು ಆರೋಗ್ಯಕರವಾಗಿರಬೇಕು ಎಂಬುದಕ್ಕೂ ಹೆಚ್ಚಿನ ಲಕ್ಷ್ಯ ಕೊಡಬೇಕು. ಅಷ್ಟೇ ಅಲ್ಲ, ಯಾವುದೇ ರೀತಿಯ ಲೈಂಗಿಕ ಸಮಸ್ಯೆ, ರೋಗ ಕಾಣಿಸಿಕೊಂಡಲ್ಲಿ ಕೂಡಲೇ ಲೈಂಗಿಕ ತಜ್ಞರನ್ನು ಭೇಟಿಯಾಗಬೇಕು.
-  ಎಲ್ಲಕ್ಕಿಂತ ಮುಖ್ಯ ಅಂಶವೆಂದರೆ ದಾಂಪತ್ಯ ಜೀವನ ಸುಖಕರವಾಗಿರಲು ಇಬ್ಬರ ಮಧ್ಯೆ ಹೊಂದಾಣಿಕೆ ತೀರಾ ಅವಶ್ಯಕ. ಹೊಂದಾಣಿಕೆಯಿದ್ದರೆ ಆರೋಗ್ಯಕರ ಲೈಂಗಿಕ ಜೀವನ ಸರಾಗ.

-  ಮಹೇಶ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.