ಬೈಟುಕಾಫಿ

ಬಾಲಕನ ಧ್ಯಾನ ಸಿದ್ಧಿ

Published On :

ನರೇಂದ್ರನಿಗೆ ಬಾಲ್ಯದಲ್ಲಿ ತುಂಬಾ ಇಷ್ಟವಾದ ಆಟವೆಂದರೆ ಧ್ಯಾನದಾಟ. ಸ್ನೇಹಿತರೊಡಗೂಡಿ ಧ್ಯಾನದಲ್ಲಿ ಕುಳಿದುಬಿಡುತ್ತಿದ್ದ.
ಒಮ್ಮೆ ಹುಡುಗರೆಲ್ಲ ಸೇರಿಕೊಂಡು ಧ್ಯಾನದಾಟದಲ್ಲಿ ನಿರತರಾಗಿದ್ದರು. ಕೆಲವು ಹುಡುಗರು ಮಧ್ಯೆ ಮಧ್ಯೆ ಕಣ್ಣು ತೆರೆದು ಇತರರ ಧ್ಯಾನವನ್ನು ನೋಡುತ್ತಿದ್ದರು. ಆ ಹೊತ್ತಿಗೆ ಅಲ್ಲೊಂದು ದೊಡ್ಡ ನಾಗರಹಾವು ಹರಿದಾಡಿ ಕೊಂಡು ಬಂತು. ಒಡನೆಯೇ ಹುಡುಗರೆಲ್ಲ ಎದ್ದು ಪರಾರಿಯಾದರು. ಆದರೆ ನರೇಂದ್ರ ಮಾತ್ರ ಗಾಢ ಧ್ಯಾನದಲ್ಲಿ ಕುಳಿತೇ ಇದ್ದ. ಹುಡುಗರೆಲ್ಲ ದೂರದಿಂದಲೇ ನರೇಂದ್ರನನ್ನು ಗಟ್ಟಿಯಾಗಿ ಕೂಗಿ ಕರೆದರು. ಆದರೆ ಅವನು ಏಳಲೇ ಇಲ್ಲ. ಸರಿ, ಹುಡುಗರು ನರೇಂದ್ರನ ತಂದೆ ತಾಯಿಗೆ ಸುದ್ದಿ ತಿಳಿಸಿದರು. ಅವರು ಗಾಬರಿಯಿಂದ ಓಡಿಬಂದು ನೋಡುತ್ತಾರೆ, ಸರ್ಪ ತನ್ನ ಹೆಡೆ ಬಿಟ್ಟಿಕೊಂಡು ನರೇಂದ್ರನನ್ನೇ ನೋಡುತ್ತಿದೆ! ಆದರೆ ನರೇಂದ್ರ ಬಾಹ್ಯಪ್ರಜ್ಞೆಯೇ ಇಲ್ಲದೆ ಧ್ಯಾನದಲ್ಲಿ ಮುಳುಗಿದ್ದಾನೆ! ಅದನ್ನು ಹೆದರಿಸಿ ಓಡಿಸೋಣವೆಂದರೆ ಇವರೇ ಭಯದಿಂದ ತಲ್ಲಣಗೊಂಡಿದ್ದಾರೆ. ಕ್ಷಣಕಾಲದಲ್ಲಿಯೇ ಆ ಸರ್ಪವು ತಾನಾಗಿಯೇ ಹೊರಟುಹೋಯಿತು. ಬಳಿಕ ನರೇಂದ್ರನನ್ನು ಅಲುಗಾಡಿಸಿ ಕೇಳಿದರು, 'ಅಲ್ಲವೋ, ಹಾವು ಬಂತು ಅಂತ ಹುಡುಗರೆಲ್ಲ ಅಷ್ಟು ಗಟ್ಟಿಯಾಗಿ ಕೂಗಿದರೂ ನೀನೇಕೆ ಎದ್ದು ಬರದೆ ಅಲ್ಲೇ ಕುಳಿತಿದ್ದೆ?' ಅದಕ್ಕೆ ನರೇಂದ್ರ, 'ಏನು, ಹಾವು ಬಂದಿತ್ತೆ? ನನಗೆ ಹಾವು ಬಂದಿದ್ದು ಗೊತ್ತೇ ಆಗಲಿಲ್ಲ, ನನ್ನಷ್ಟಕ್ಕೆ ನಾನು ಆನಂದದಲ್ಲಿದ್ದೆ' ಎಂದ.
ಸ್ವಾಮಿ ವಿವೇಕಾನಂದರು ಆ ಏಕಾಗ್ರತೆಯ ಶಕ್ತಿಯ ಬಲದಿಂದಲೇ ವಿಶ್ವವಿಜಯಿಯಾದರು. <
-ಆನಂದ ಎಸ್.ಎನ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.