ಬೈಟುಕಾಫಿ

ವ್ಯತ್ಯಾಸ ಇರುವುದು...

Published On :

ಇಬ್ಬರು ಮಹಿಳೆಯರು ಬಹಳ ವರ್ಷಗಳ ನಂತರ ಭೇಟಿಯಾದರು.
ಅವರಲ್ಲೊಬ್ಬಳು, 'ಹಾಂ, ಮತ್ತೆ ನಿನ್ನ ಮಗ ಹೇಗಿದ್ದಾನೆ?'
'ನನ್ನ ಮಗನಾ? ಅವನ ಅವಸ್ಥೆ ಹೇಳುವುದೇ ಬೇಡ' ಎಂದು ಇನ್ನೊಬ್ಬಳು ನಿಡುಸುಯ್ದಳು. 'ಎಂತಹ ಒಂದು ದುರದೃಷ್ಟಕರವಾದ ವಿವಾಹದಲ್ಲಿ ಸಿಕ್ಕಿಹಾಕಿಕೊಂಡ! ಆ ಹುಡುಗಿ ಮನೆಯ ಒಂದೇ ಒಂದು ಕೆಲಸವನ್ನೂ ಮಾಡುವುದಿಲ್ಲ. ಅಡುಗೆ ಮಾಡುವುದಿಲ್ಲ, ಪಾತ್ರೆ ತೊಳೆಯುವುದಿಲ್ಲ, ಬಟ್ಟೆ ಒಗೆಯುವುದಿಲ್ಲ, ಹೊಲಿಯುವುದಿಲ್ಲ. ದಿನವಿಡೀ ಮಲಗಿಕೊಂಡಿರುತ್ತಾಳೆ ಮತ್ತು ಸೋಮಾರಿಯಾಗಿ ಹಾಸಿಗೆಯಲ್ಲಿಯೇ ಬಿದ್ದುಕೊಂಡು ಓದುತ್ತ ಕಾಲಹರಣ ಮಾಡುತ್ತಾಳೆ. ಅವನ ಸ್ಥಿತಿ ನೋಡಿದರೆ ಅಯ್ಯೋ! ಅನಿಸುತ್ತಿದೆ. ಅವಳಿಗೆ ಮಲಗಿದಲ್ಲಿಯೇ ಅವನು ಬೆಳಗ್ಗಿನ ಉಪಾಹಾರ ತೆಗೆದುಕೊಂಡು ಹೋಗಬೇಕು. ನೀನೆಲ್ಲಿಯಾದರೂ ಇಂಥದ್ದನ್ನು ಕೇಳಿರುವೆಯಾ?' ಎಂದಳು.
'ಭಯಂಕರವಪ್ಪಾ! ಇನ್ನು ನಿನ್ನ ಮಗಳು ಹೇಗಿದ್ದಾಳೆ?'
'ಆಹಾ! ಅವಳಾದರೆ ಅದೃಷ್ಟವಂತೆ. ಅವಳು ಸಾಕ್ಷಾತ್ ದೇವರನ್ನೇ ಮದುವೆಯಾಗಿದ್ದಾಳೆ. ಅವನು ಅವಳಿಗೆ ಒಂದೇ ಒಂದು ಕೆಲಸವನ್ನೂ ಮಾಡಲು ಬಿಡುವುದಿಲ್ಲ. ಅಡುಗೆ ಮಾಡಲು, ಪಾತ್ರೆ ತೊಳೆಯಲು, ಬಟ್ಟೆ ಒಗೆಯಲು, ಹೊಲಿಯಲು ಎಲ್ಲದಕ್ಕೆ ಆಳುಕಾಳುಗಳಿದ್ದಾರೆ ಮತ್ತು ಪ್ರತಿದಿನ ಅವಳಿಗೆ ಬೆಳಗ್ಗಿನ ಉಪಾಹಾರವನ್ನು ಅವಳ ಹಾಸಿಗೆಗೇ ಅವನು ತಂದುಕೊಡುತ್ತಾನೆ, ಗೊತ್ತಾ? ಅವಳು ತನಗೆ ಬೇಕಾದಷ್ಟು ಹೊತ್ತು ನಿದ್ದೆ ಮಾಡುತ್ತಾಳೆ ಮತ್ತು ಉಳಿದ ಸಮಯವನ್ನು ಹಾಸಿಗೆಯಲ್ಲಿಯೇ ಓದಿಕೊಂಡಿರುತ್ತ ಆರಾಮವಾಗಿ ಕಳೆಯುತ್ತಾಳೆ.'
-ನಂದಿನಿ ಡಿ. ಕಾಮತ್
ಮೂಲ: ಅಂತೋನಿ ಡಿಮೆಲ್ಲೊ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.