ಸಚಿನ್ನ
ಸಚಿನ್ನ
ಚಿನ್ನಗಳಲ್ಲಿ ಚಿನ್ನ ಸಚಿನ್ನ
ತೆಂಡೂಲ್ಕರನ ಸಾಧನೆ ಅವಿಚ್ಛಿನ್ನ
ಚೆಂಡು ದಾಂಡಿನಾಟದಿ ನಿರ್ವಾತ
ಮತ್ತಷ್ಟು ಬೇಕಿತ್ತು ಮೋಹಕ ಹೊಡೆತ
ಅತೀವ ಖುಷಿ ಕ್ರಿಕೆಟ್ ಬಾಲಿಗೆ
ಇನ್ನು ದಂಡಿಸುವರಿಲ್ಲ ಎನಗೆ!
ಭಾರತ ಟೀಂಗೆ ಆಧಾರ
ರನ್ಗಳ ಸರದಾರ
ಕ್ರಿಕೆಟ್ ತ್ರಿವಿಕ್ರಮನಿಗಿನ್ನು ವಿರಾಮ
ಅಭಿಮಾನಿ ಹೃದಯದಿ ಸದಾ ವಿರಾಜಮಾನ.
- ಕೆ.ಆದಿತ್ಯ, ಹರಪನಹಳ್ಳಿ
ಸ್ವಾಗತಾರ್ಹ ನಿರ್ಧಾರ
ಸಚಿನ್ ತೆಂಡೂಲ್ಕರ್ ಉತ್ಸಾಹದ ಬುಗ್ಗೆ. ಆದರೂ ಇವರ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಇನ್ನೂ ದೇಶವನ್ನು ಪ್ರತಿನಿಧಿಸಬೇಕೆಂಬ ಕ್ರಿಕೆಟ್ ಪ್ರೇಮದ ತುಡಿತ, ಉತ್ಸಾಹ ಇವೆಲ್ಲವೂ ಶುಭ್ರ ಬೆಳದಿಂಗಳು. ಅದೇ ಅವರ ಕ್ರಿಕೆಟ್ ಬದುಕಿನ ಶ್ರೇಷ್ಠತೆಗೆ ಸಾಕ್ಷಿ. 24 ವರುಷದ ಸುದೀರ್ಘ ಕ್ರಿಕೆಟ್ ಬದುಕಿಗೆ ನಿವೃತ್ತಿ ಘೋಷಿಸಿದ್ದು ಸ್ವಾಗತಾರ್ಹ. ಇಂದಲ್ಲ ನಾಳೆ ಆ ಕಹಿಸತ್ಯದ ನಿರೀಕ್ಷೆ ವಾಸ್ತವವಾಗುವಂತಹದ್ದೇ ಅಲ್ಲವೆ? ಅವರ ಕಟ್ಟಕಡೆಯ ಪಂದ್ಯದ ಕ್ಷಣಗಳನ್ನು ಹೃನ್ಮನ ತುಂಬಿಕೊಂಡು ಬೀಳ್ಕೊಡೋಣ.
- ಸವಿನಯ ಮಾಲ್ವೆ
ವಾಮನಮೂರ್ತಿ ದಾಖಲೆ!
ಸಚಿನ್ ಖಂಡಿತವಾಗಿಯೂ ಕ್ರಿಕೆಟ್ ಲೋಕದ ದೇವರು. ದಾಖಲೆಗಳ ಸರದಾರ ಸಚಿನ್ ಇಲ್ಲದ ಕ್ರಿಕೆಟ್ ಅನ್ನು ಊಹಿಸಲೂ ಅಸಾಧ್ಯ. ಈ ವಾಮನಮೂರ್ತಿ ದಾಖಲೆಗಳಿಗಾಗಿಯೇ ಆಡಿದವರಲ್ಲ, ತಂಡದ ಗೆಲುವಿಗೆ ಶ್ರಮಿಸಿದ್ದೇ ಹೆಚ್ಚು. ಆದರೂ ದಾಖಲೆಗಳು ಅವರ ಬೆನ್ನತ್ತಿ ಬಂದಿವೆ! ಸತತ 24 ವರ್ಷಗಳಿಂದ ಆಡುತ್ತಿರುವ ಸಚಿನ್ ಯಾವುದೇ ವಿವಾದಗಳಿಗೆ ವಸ್ತುವಾಗದೇ ಇರುವುದು ಇವರ ಘನತೆ.
- ಕಿರಣ್ಕುಮಾರ್ ರೆಖ್ಯ, ಉಜಿರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

