ಮನ್ಮಥ ಪುನರಾಗಮನ

ಸುರತಕ್ರೀಡೆಯನ್ನು ಕೆಲವೊಮ್ಮೆ ಯುದ್ಧಕ್ಕೆ ಹೋಲಿಸುವುದುಂಟು. ಯುದ್ಧದಲ್ಲಿರುವ ಪಕ್ಷ- ಪ್ರತಿಪಕ್ಷ, ಆಯುಧ, ಪ್ರಹಾರ, ನಖಕ್ಷತ, ದಂತಕ್ಷತ, ಚೀತ್ಕಾರ, ಬಳಲಿಕೆಗಳು ಇಲ್ಲೂ ಉಂಟು ಎಂಬುದು ಈ ಹೋಲಿಕೆಯ ಚಮತ್ಕಾರ. ವ್ಯತ್ಯಾಸ ಎಂದರೆ ಇಲ್ಲಿ ಇಬ್ಬರೂ ಗೆಲ್ಲುವವರೇ ಹೊರತು ಸೋಲುವವರಿಲ್ಲ!
ಇಲ್ಲೊಬ್ಬ ಕವಿಯಿದ್ದಾನೆ. ಈತ ಸುರತವನ್ನು ಕದನಕ್ಕೆ ಹೋಲಿಸುತ್ತಲೇ, ಈ ರೂಪಕವನ್ನು ಇನ್ನೂ ಕೊಂಚ ಮುಂದಕ್ಕೆ ಕೊಂಡೊಯ್ಯುತ್ತಾನೆ.
ಪ್ರಿಯಕೃತಪಟಸ್ತೇಯಕ್ರೀಡಾವಿಲಂಬನವಿಹ್ವಲಾಂ
ಕಿಮಪಿ ಕರುಣಾಲಾಪಂ ತನ್ವೀಮುದೀಕ್ಷ್ಯ ಸಸಂಭ್ರಮಮ್
ಅಪಿ ವಿಗಲಿತೇ ಸ್ಕಂಧಾವಾರೇ ಗತೇ ಸುರತಾವಹೇ
ತ್ರಿಭುವನಮಹಾಧನ್ವೀ ಸ್ಥಾನೇ ನ್ಯವರ್ತತಃ ಮನ್ಮಥಃ
ಮದನ ಕದನ ಮುಗಿದಿತ್ತು. ಅದಕ್ಕಾಗಿ ಹೂಡಿದ್ದ ಬಿಡಾರಗಳೂ ನಾಶವಾಗಿದ್ದವು. ಆದರೆ ಕ್ರೀಡೆ ಮುಗಿಸಿ ಏಳುತ್ತಿದ್ದ ನಲ್ಲೆಯ ಬಟ್ಟೆಯನ್ನು ನಲ್ಲನು ಅಪಹರಿಸಿ, ಕೊಡದೆ ಸತಾಯಿಸತೊಡಗಿದ. ಆಕೆ ಅತನಲ್ಲಿ ಬಟ್ಟೆಯನ್ನು ಕೊಡೆಂದು ಪರಿಪರಿಯಾಗಿ ಬೇಡಿಕೊಳ್ಳುತ್ತ, ತನ್ನ ಅಂಗಾಂಗಗಳನ್ನು ಹುಸಿನಾಚಿಕೆಯಿಂದ ಮುಚ್ಚಿಕೊಳ್ಳುತ್ತ, ಗೋಗರೆಯತೊಡಗಿದಳು. ಇತ್ತ ಕುಸುಮಶರಧರನಾದ ಮನ್ಮಥನು, ಯುದ್ಧ ಮುಗಿಯಿತೆಂದು ಭಾವಿಸಿ ಕದನಸ್ಥಳದಿಂದ ಹೊರಟುಹೋಗಿದ್ದವನು, ಈ ಕೇಳೀಕೋಲಾಹಲವನ್ನು ಕೇಳಿ ಆರ್ತನಾದ ಮಾಡುತ್ತಿದ್ದ ತರುಣಿಯನ್ನು ರಕ್ಷಿಸಲು ಸ್ಥಳಕ್ಕೆ ಹಿಂದಿರುಗಿದನು!
ಮತ್ತೆ ಯುದ್ಧವು ಆರಂಭವಾಯಿತೆಂದು ಪುನಃ ವಿವರಿಸಬೇಕೆ?
- ಹರಿಹರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


