ಪಾಂಚಾಲಿ ಚೆಲುವೆ

ನಮ್ಮ ಪುರಾಣಗಳಲ್ಲಿ, ಮಹಾಕಾವ್ಯಗಳಲ್ಲಿ ಚೆಲುವೆಯರ ವರ್ಣನೆಗಳಿಗೇನೂ ಕಡಿಮೆಯಿಲ್ಲ. ರಾಮಾಯಣದ ರಾಮನ ಪತ್ನಿ, ಮಹಾಸಾಧ್ವಿ ಸೀತೆ ಎಂಥ ಸುಂದರಿಯಾಗಿದ್ದಳು ಎಂದರೆ ಆಕೆಯನ್ನು ನೋಡಿದ ರಾವಣನೇ ಮಾರುಹೋಗುತ್ತಾನೆ. ದಮಯಂತಿ, ಶಕುಂತಳೆ, ಅಹಲ್ಯೆ ಎಲ್ಲರೂ ಸೊಬಗಿಯರೇ. ಇವರ ಸಾಲಿಗೇ ಸೇರುವವಳು ದ್ರೌಪದಿ. ಅಗ್ನಿಯಿಂದ ಹುಟ್ಟಿದ್ದರಿಂದಲೋ ಏನೋ, ಆಕೆಯದು ಉರಿಯುವ ಕಾಂತಿ.
ಪಾಂಚಾಲಿಯ ಸೌಂದರ್ಯವನ್ನು ವರ್ಣಿಸುತ್ತ ವ್ಯಾಸರು ಹೇಳುವುದು ಹೀಗೆ:
ಪಾಂಚಾಲ್ಯಾಃ ಪದ್ಮಪತ್ರ್ಯಾಕ್ಷ್ಯಾಃ ಸ್ನಾಯಂತ್ಯಾ ಜಘನಂ ಘನಮ್
ಯಾಃ ಸ್ತ್ರಿಯೋ ದೃಷ್ಟವತ್ಯಸ್ತಾಃ ಪುಂಭಾವಾಂ ಮನಸಾ ಯಯುಃ
ಒಂದು ದಿನ ದ್ರೌಪದಿ ಸ್ನಾನಕ್ಕೆಂದು ಬಾತ್‌ರೂಮಿಗೆ ಹೋದಳು. ಆಕೆಯನ್ನು ಮೀಯಿಸಲು ಸಖಿಯರೂ ಹೋಗಬೇಕಲ್ಲ! ಹೋದರು. ಪಾಂಚಾಲಿ ಉಡುಗೆ ಕಳಚಿದಳು. ಆಕೆಯ ಪದ್ಮಪತ್ರಗಳಂತೆ ದುಂಡಗಿನ ಕಣ್ಣುಗಳನ್ನೂ, ಘನವಾಗಿ ತುಂಬಿಕೊಂಡು ಹದವಾಗಿ ಅಲ್ಲಾಡುತ್ತಿದ್ದ ಜಘನಗಳನ್ನೂ ನೋಡಿ ಸಖಿಯರ ಮೈ ಬೆಚ್ಚಗಾಗಿ ಹೋಯಿತು! ಅವರ ಮನದಲ್ಲಿ ತಾವು ಸ್ತ್ರೀಯರಾಗಿ ಹುಟ್ಟಿದ್ದು ತಪ್ಪಾಯಿತು, ಪುರುಷರಾಗಿರಬೇಕಿತ್ತು ಎಂಬ ಭಾವ ಹೊಗೆಯಾಡಿತು!
ಪಾಂಚಾಲಿಯ ರತಿರೂಪ ನಾರಿಯರಲ್ಲೇ ಇಷ್ಟೊಂದು ಉದ್ರೇಕಿತ ಭಾವಗಳನ್ನು ಕೆರಳಿಸಿದರೆ, ಇನ್ನು ಲೆಕ್ಕಕ್ಕಿಂತ ಹೆಚ್ಚೇ ಉಪ್ಪು ಹುಳಿ ತಿಂದ ಪುರುಷರಾದ ಕೀಚಕ, ಜಯದ್ರಥ, ದುಶ್ಶಾಸನರ ಪಾಡೇನು! ಇದನ್ನು ಸವಿಯಲೋಸುಗವೇ ಕೌರವನ ಸಭೆಯಲ್ಲಿ ದುಶ್ಶಾಸನ ಆಕೆಯ ಸೀರೆ ಸೆಳೆಯುತ್ತಿದ್ದರೂ ಎಲ್ಲರೂ ಸುಮ್ಮನೆ ಕುಳಿತಿದ್ದರು ಎಂದು ಊಹಿಸಲೂ ಅವಕಾಶವಿದೆ!
- ಹರಿಹರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


