ನ್ಯೂಯಾರ್ಕ್ನಲ್ಲಿ ಅಧ್ಯಾತ್ಮ ತರಗತಿಗಳು
1895ರ ಜನವರಿ ವೇಳೆಗೆ ಸ್ವಾಮಿ ವಿವೇಕಾನಂದರು ಅಮೆರಿಕಕ್ಕೆ ಬಂದು ಒಂದೂ ವರೆ ವರ್ಷವಾಗಿತ್ತು. ಸ್ವಾಮೀಜಿ ಸಾರ್ವ ಜನಿಕ ಭಾಷಣಗಳ ಮೂಲಕ ಜನಪ್ರಿಯತೆಯ ಉತ್ತುಂಗದಲ್ಲಿದ್ದರು. ಈಗ ಅವರು ಅಬ್ಬರದ ಪ್ರಚಾರಕ್ಕೆ, ಸಾರ್ವಜನಿಕ ಉಪನ್ಯಾಸಗಳಿಗೆ ವಿದಾಯ ಹೇಳಿ ತಮ್ಮ ಉದ್ದೇಶಿತ ಯೋಜನೆಯನ್ನು ಕಾರ್ಯಾನುಷ್ಠಾನಗೊಳಿಸಲು ನಿರ್ಧರಿಸಿದರು. ನ್ಯೂಯಾರ್ಕ್ನ ವಸತಿಗೃಹದಲ್ಲಿ ರೂಮೊಂದನ್ನು ಬಾಡಿಗೆ ಪಡೆದು ಕೆಲವು ಶ್ರದ್ಧಾವಂತ ವ್ಯಕ್ತಿಗಳಿಗೆ ತರಬೇತಿ ನೀಡುವ ಕಾರ್ಯಕ್ಕೆ ಚಾಲನೆ ನೀಡಿದರು. ಭವಿಷ್ಯದ ಸಂಘ ಸ್ಥಾಪನೆ ಯೋಜನೆಗೆ ಪ್ರಾಯೋಗಿಕವಾಗಿ ತರಗತಿಗಳು ಪ್ರಾರಂಭವಾದವು. ಇದು ನಾಡಿನಾದ್ಯಂತ ಹರಡಿ ಶಿಷ್ಯರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚತೊಡಗಿತು.
ಸ್ವಾಮೀಜಿ ಈ ತರಗತಿಗಳಲ್ಲಿ ಯೋಗ, ಧ್ಯಾನಗಳನ್ನು ಕಲಿಸುತ್ತಿದ್ದರು. ಅವರ ಆಧ್ಯಾತ್ಮಿಕ ಪರಿಧಿಯ ವ್ಯಾಪ್ತಿಗೆ ಯಾರೇ ಬಂದರೂ ಅವರು ತಮಗರಿವಿಲ್ಲದಂತೆ ತರಬೇತಿಗೆ ಒಳಪಡುತ್ತಿದ್ದರು. ತರಗತಿಗಳಲ್ಲಿ ರಾಜಯೋಗ, ಜ್ಞಾನಯೋಗಗಳನ್ನು ಬೋಧಿಸುತ್ತಿದ್ದರು. ಆ ಮೂಲಕ ಶಿಷ್ಯರಿಗೆ ಅನುಷ್ಠಾನ ಅಧ್ಯಾತ್ಮವನ್ನು ಅಂದರೆ ಇಂದ್ರಿಯ ನಿಗ್ರಹ ಹಾಗೂ ಮನಸ್ಸನ್ನು ಸ್ಥಿರಗೊಳಿಸುವ ಬಗೆಯನ್ನು ಕುರಿತು ನಿಯಮಿತವಾಗಿ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ಸ್ವಾಮೀಜಿಯ ಕ್ರಮಬದ್ಧ ಮಾರ್ಗದರ್ಶನದಲ್ಲಿ ಶಿಷ್ಯರು ದೇಹ ಹಾಗೂ ಮನಸ್ಸಿನ ಸಮತೋಲನವನ್ನು ತಂದುಕೊಡಬಲ್ಲಂತಹ ಶಾರೀರಿಕ ಹಾಗೂ ಆಧ್ಯಾತ್ಮಿಕ ಸಾಧನೆಗಳಲ್ಲಿ ನಿರತರಾದರು. 'ಧರ್ಮವು ಕೇವಲ ನಂಬುವುದರಲ್ಲಿಲ್ಲ, ಆಗುವುದರಲ್ಲಿದೆ; ಅಂದರೆ ಧರ್ಮವನ್ನು ಕೇವಲ ನಂಬಿದರೆ ಸಾಲದು, ಧರ್ಮಸ್ವರೂಪಿಗಳೇ ಆಗಬೇಕು. ಇದೇ ಮಾನವ ಧರ್ಮ' ಎಂಬುದನ್ನು ಶಿಷ್ಯರು ಅರಿತರು.
- ಆನಂದ ಎಸ್.ಎನ್.
anandsn193@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

