ಬೈಟುಕಾಫಿ

ಹೊಣೆಯ ಸೂಕ್ಷ್ಮತೆ

ಹೊಣೆಯ ಸೂಕ್ಷ್ಮತೆ
Published On :

ಕೆಲವರನ್ನು ನೋಡಿ ಯಾವಾಗಲೂ 'ತಾನು ಹಾಗೆ, ಹೀಗೆ' ಎಂದು ಹೇಳಿಕೊಳ್ಳುತ್ತಲೇ ಇರುತ್ತಾರೆ. ಇಂಥವರು ತಮ್ಮನ್ನು ತಾವೇ ಹೊಗಳಿಕೊಳ್ಳುವವರಂತೆ ಕಾಣಬಹುದು. ಆದರೆ ಅವರು ಬೇರೆಯವರಿಂದಲೂ ಹೊಗಳಿಕೆಗೆ ಕಾಯುತ್ತಿದ್ದಾರೆ ಎಂಬುದರ ಸೂಚನೆಯೂ ಹೌದು. ಬೇಕಿದ್ದರೆ ಗಮನಿಸಿ, ಅಂಥವರು ತಮ್ಮನ್ನು ತುಂಬಾ ಸೂಕ್ಷ್ಮ, ಸಂಕೋಚದ ಸ್ವಭಾವದವರು ಎಂದುಕೊಂಡುಬಿಟ್ಟಿರುತ್ತಾರೆ. ಆದರೆ ಒಳಗೊಳಗೇ ಎಲ್ಲವನ್ನೂ ಅಪೇಕ್ಷಿಸುತ್ತಲೇ ಇರುತ್ತಾರೆ. ಜನ ತನ್ನನ್ನು ಆದರಿಸಿಲ್ಲ, ಹೊಗಳಲಿಲ್ಲ ಎಂಬುದಕ್ಕೇ ನೊಂದುಕೊಳ್ಳುತ್ತಾರೆ. ಹಾಗಿದ್ದ ಮಾತ್ರಕ್ಕೆ ಅವರದು ಸೂಕ್ಷ್ಮ ಮನಸ್ಸು ಎಂದೇನೂ ಅಲ್ಲ. ಅಸಲಿಗೆ ಸೂಕ್ಷ್ಮ ಮನಸ್ಸೆಂದರೆ ಎಲ್ಲದಕ್ಕೂ ಕೊರಗುತ್ತ, ಹೊಗಳಿಕೆ ಅಪೇಕ್ಷಿಸುತ್ತ, ಸಣ್ಣಪುಟ್ಟ ನಿಂದನೆಗೂ ನೋಯುತ್ತಾ ಕುಳಿತಿರುವುದು ಅಲ್ಲವೇ ಅಲ್ಲ. ಅಂಥವರು ಸೂಕ್ಷ್ಮಮತಿಗಳು ಹೇಗಾಗುತ್ತಾರೆ? ನಿಜವಾಗಿ ನೋಡಿದರೆ ಅವರಿಗೆ ಬದುಕನ್ನು ತುಂಬಾ ಜವಾಬ್ದಾರಿಯುತವಾಗಿ ಪರಿಗಣಿಸಲು ಬರುವುದಿಲ್ಲ. ನೆನಪಿಡಿ, ಜವಾಬ್ದಾರಿ ನಿಭಾಯಿಸಲು  ಘನಗಂಭೀರವಾಗಿಯೇ ಇರಬೇಕೆಂದಿಲ್ಲ. ತಾವೂ ಸಮಾಧಾನದಿಂದಿದ್ದು, ನಲಿನಲಿಯುತ,್ತ ಇತರರನ್ನೂ ನಲಿಸುವುದಿದೆಯಲ್ಲಾ ಅದು ನಿಜವಾದ ಸೂಕ್ಷ್ಮತೆ. ತಮ್ಮ ಜವಾಬ್ದಾರಿಯನ್ನು ಮುಲಾಜಿಲ್ಲದೆ ನಿಭಾಯಿಸಬಲ್ಲ, ಹೊಗಳಿಕೆಗೆ ಕಾಯದೆ ತಮ್ಮ ಕೆಲಸವನ್ನು ತಾವು ಅಚ್ಚುಕಟ್ಟಾಗಿ ಮಾಡುವವರು ಅಲ್ಲವೇ ನಿಜವಾದ ಸೂಕ್ಷ್ಮ ಮನಸ್ಸಿನವರು? ಅವರಿಗೆ ಬೇರೆಯವರಿಂದ ಕಾಂಪ್ಲಿಮೆಂಟ್ ಬೇಕಾಗಿರುವುದಿಲ್ಲ. ಅವರ ಮನಸ್ಸು ಯಾವಾಗಲೂ ಉಲ್ಲಸಿತವಾಗಿರುತ್ತದೆ. ತಾವು ಮಾಡುವ ಕೆಲಸದಿಂದಲೇ ಕ್ಷಣಕ್ಷಣವೂ ಉತ್ಸಾಹ ಪಡೆದುಕೊಳ್ಳುತ್ತಿರುತ್ತಾರೆ. ಅಂಥ ಉತ್ಸಾಹ ಎಲ್ಲರಲ್ಲೂ ಮೂಡಿದರೆ ಅದಕ್ಕಿಂತ ಇನ್ನೇನು ಬೇಕು?ಟಿ
ಕೆಲವರನ್ನು ನೋಡಿ ಯಾವಾಗಲೂ 'ತಾನು ಹಾಗೆ, ಹೀಗೆ' ಎಂದು ಹೇಳಿಕೊಳ್ಳುತ್ತಲೇ ಇರುತ್ತಾರೆ. ಇಂಥವರು ತಮ್ಮನ್ನು ತಾವೇ ಹೊಗಳಿಕೊಳ್ಳುವವರಂತೆ ಕಾಣಬಹುದು. ಆದರೆ ಅವರು ಬೇರೆಯವರಿಂದಲೂ ಹೊಗಳಿಕೆಗೆ ಕಾಯುತ್ತಿದ್ದಾರೆ ಎಂಬುದರ ಸೂಚನೆಯೂ ಹೌದು. ಬೇಕಿದ್ದರೆ ಗಮನಿಸಿ, ಅಂಥವರು ತಮ್ಮನ್ನು ತುಂಬಾ ಸೂಕ್ಷ್ಮ, ಸಂಕೋಚದ ಸ್ವಭಾವದವರು ಎಂದುಕೊಂಡುಬಿಟ್ಟಿರುತ್ತಾರೆ. ಆದರೆ ಒಳಗೊಳಗೇ ಎಲ್ಲವನ್ನೂ ಅಪೇಕ್ಷಿಸುತ್ತಲೇ ಇರುತ್ತಾರೆ. ಜನ ತನ್ನನ್ನು ಆದರಿಸಿಲ್ಲ, ಹೊಗಳಲಿಲ್ಲ ಎಂಬುದಕ್ಕೇ ನೊಂದುಕೊಳ್ಳುತ್ತಾರೆ. ಹಾಗಿದ್ದ ಮಾತ್ರಕ್ಕೆ ಅವರದು ಸೂಕ್ಷ್ಮ ಮನಸ್ಸು ಎಂದೇನೂ ಅಲ್ಲ. ಅಸಲಿಗೆ ಸೂಕ್ಷ್ಮ ಮನಸ್ಸೆಂದರೆ ಎಲ್ಲದಕ್ಕೂ ಕೊರಗುತ್ತ, ಹೊಗಳಿಕೆ ಅಪೇಕ್ಷಿಸುತ್ತ, ಸಣ್ಣಪುಟ್ಟ ನಿಂದನೆಗೂ ನೋಯುತ್ತಾ ಕುಳಿತಿರುವುದು ಅಲ್ಲವೇ ಅಲ್ಲ. ಅಂಥವರು ಸೂಕ್ಷ್ಮಮತಿಗಳು ಹೇಗಾಗುತ್ತಾರೆ? ನಿಜವಾಗಿ ನೋಡಿದರೆ ಅವರಿಗೆ ಬದುಕನ್ನು ತುಂಬಾ ಜವಾಬ್ದಾರಿಯುತವಾಗಿ ಪರಿಗಣಿಸಲು ಬರುವುದಿಲ್ಲ. ನೆನಪಿಡಿ, ಜವಾಬ್ದಾರಿ ನಿಭಾಯಿಸಲು  ಘನಗಂಭೀರವಾಗಿಯೇ ಇರಬೇಕೆಂದಿಲ್ಲ. ತಾವೂ ಸಮಾಧಾನದಿಂದಿದ್ದು, ನಲಿನಲಿಯುತ,್ತ ಇತರರನ್ನೂ ನಲಿಸುವುದಿದೆಯಲ್ಲಾ ಅದು ನಿಜವಾದ ಸೂಕ್ಷ್ಮತೆ. ತಮ್ಮ ಜವಾಬ್ದಾರಿಯನ್ನು ಮುಲಾಜಿಲ್ಲದೆ ನಿಭಾಯಿಸಬಲ್ಲ, ಹೊಗಳಿಕೆಗೆ ಕಾಯದೆ ತಮ್ಮ ಕೆಲಸವನ್ನು ತಾವು ಅಚ್ಚುಕಟ್ಟಾಗಿ ಮಾಡುವವರು ಅಲ್ಲವೇ ನಿಜವಾದ ಸೂಕ್ಷ್ಮ ಮನಸ್ಸಿನವರು? ಅವರಿಗೆ ಬೇರೆಯವರಿಂದ ಕಾಂಪ್ಲಿಮೆಂಟ್ ಬೇಕಾಗಿರುವುದಿಲ್ಲ. ಅವರ ಮನಸ್ಸು ಯಾವಾಗಲೂ ಉಲ್ಲಸಿತವಾಗಿರುತ್ತದೆ. ತಾವು ಮಾಡುವ ಕೆಲಸದಿಂದಲೇ ಕ್ಷಣಕ್ಷಣವೂ ಉತ್ಸಾಹ ಪಡೆದುಕೊಳ್ಳುತ್ತಿರುತ್ತಾರೆ. ಅಂಥ ಉತ್ಸಾಹ ಎಲ್ಲರಲ್ಲೂ ಮೂಡಿದರೆ ಅದಕ್ಕಿಂತ ಇನ್ನೇನು ಬೇಕು?

- ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.