ಕ್ರಿಕೆಟ್ ಜಗತ್ತೆ ಮರೆಯದ ವ್ಯಕ್ತಿ
ಸಚಿನ್ ಕ್ರೀಡಾ ಲೋಕವೇ ಮರೆಯಲಾರದ ವ್ಯಕ್ತಿ. ಕ್ರಿಕೆಟ್ ಜಗತ್ತೇ ಮರೆಯಲಾಗದ ಮಾಣಿಕ್ಯ. ಅವರ ಪ್ರತಿಭೆ ಎಂದೆಂದಿಗೂ ಶ್ಲಾಘನೀಯ ಮತ್ತು ಎಂದೆಂದಿಗೂ ಅಜರಾಮರ. ಅವರ ನಿವೃತ್ತಿ ಭಾರತಕ್ಕೆ ಹಾಗೂ ಕ್ರೀಡಾ ಅಭಿಮಾನಿಗಳಿಗೆ ಆಘಾತಕಾರಿ ವಿಷಯವಾಗಿದೆ. ಅವರ ಸೌಮ್ಯ ಸ್ವಭಾವ, ಅವರ ಸಾಧನೆ, ಕ್ರಿಕೆಟ್ಗೆ ಅವರು ನೀಡಿದ ಗೌರವವೇ ಅವರನ್ನು ಉನ್ನತ ಶಿಖರಕ್ಕೇರಿಸಿತು. ಈಗಿನ ಕ್ರಿಕೆಟಿಗರು ಅವರ ಆದರ್ಶಗಳನ್ನು ಪಾಲಿಸಿ ದೇಶಕ್ಕೆ ಕೀರ್ತಿ ತರಲು ಶ್ರಮಿಸಬೇಕಾಗಿದೆ. ಹಾಗೆಯೇ ಅವರ ಮಾರ್ಗದರ್ಶನ ಕಿರಿಯ ಆಟಗಾರರಿಗೆ ದೊರೆಯುವಂತಾಗಲಿ.
-ಮನುಪ್ರಸಾದ್, ಏಳಿಗೆಹುಂಡಿ
ಸಚಿನ್ ವಿಭೂತಿ ರೂಪ!
ಕ್ರಿಕೆಟ್ ಕ್ಷೇತ್ರದಲ್ಲಿ ಅಪಾರ ಯಶಸ್ಸಿಗೆ ಪಾತ್ರರಾಗಿರುವ ಸಚಿನ್ ಅವರಲ್ಲಿ ಭಗವಂತನ ವಿಭೂತಿ ರೂಪವಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಕೋಟ್ಯಂತರ ಅಭಿಮಾನಿಗಳು ಸಚಿನ್ ಅವರ ಆಟವನ್ನು ಸಂಭ್ರಮದಿಂದ ಮಂತ್ರ ಮುಗ್ಧರಾಗಿ ತದೇಕಚಿತ್ತದಿಂದ ನೋಡಿರುವರೆಂದರೆ ಮತ್ತು ಮುಕ್ತ ಕಂಠದಿಂದ ಪ್ರಶಂಸೆ ಮಾಡಿರುವರೆಂದರೆ ಅದು ಅವರ ಅತಿ ಮಾನುಷ ಶಕ್ತಿಯೇ ಸರಿ. ಆ ಶಕ್ತಿಗೆ ಅಭಿಮಾನಪೂರ್ವಕ ನಮನಗಳು. ಸುಮಾರು ವರ್ಷಗಳ ಹಿಂದೆ ಸಚಿನ್ರ ಆಟ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ.
- ಡಾ.ಎನ್.ಜಿ.ವಿಜಯಲಕ್ಷ್ಮಿ ರಾಘವೇಂದ್ರಾಚಾರ್ಯ, ಬೆಂಗಳೂರು
ಸಾಧನೆಗೆ ಸಿಕ್ಕ ಕಿರೀಟ
ಇಡೀ ಕ್ರಿಕೆಟ್ ಜಗತ್ತಿನ ಇತಿಹಾಸದಲ್ಲಿ ಅತ್ಯಂತ ಶ್ರೇಷ್ಠ, ದಿಗ್ಗಜ ಆಟಗಾರನಾಗಿ ಸಚಿನ್ ನೀಡಿದ ಕೊಡುಗೆ ಅಪಾರ. ಡಾನ್ ಬ್ರಾಡ್ಮನ್ರ ನಂತರದ ಸ್ಥಾನದಲ್ಲಿ ಬ್ಯಾಟಿಂಗ್ ಕ್ಷೇತ್ರದಲ್ಲಿ ಹಿರಿಯ ಸಾಧನೆ ತೋರಿದ್ದಾರೆ. ತಮ್ಮ ಕ್ರಿಕೆಟ್ ಇತಿಹಾಸದಲ್ಲಿ ಯುವ ಆಟಗಾರರಿಗೆ ಮಾರ್ಗದರ್ಶನ ನೀಡುತ್ತಾ ಬಂದಿದ್ದರು. ವಿಶ್ವಕಪ್ ಆದಿಯಾಗಿ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡು ವಿಶೇಷ ಮೈಲುಗಲ್ಲುಗಳ ಸಾಧಕರಾಗಿದ್ದರು ಎನ್ನುವುದೇ ಹೆಮ್ಮೆಯ ಸಂಗತಿ. ಇಂತಹ ವ್ಯಕ್ತಿಗೆ ಭಾರತದ ಸರ್ವ ಶ್ರೇಷ್ಠ 'ಭಾರತರತ್ನ' ಮುಡಿಗೇರಿಸಿರುವುದು ಅವರ ಸಾಧನೆ ಸಿಕ್ಕ ಕಿರೀಟವಾಗಿದೆ.
-ಮಲ್ಲು.ಸಿ, ಖೊದಾಪೂರ
'ಜಗುಲಿ'ಯಲ್ಲಿ ಈ ಸಲದ ವಿಷಯ 'ಖಾಸಗಿ ಬಸ್ ಪ್ರಯಾಣ ಸುರಕ್ಷಿತವೇ?'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

