ಬೈಟುಕಾಫಿ

ಅವು ನಿತ್ಯ ಶುದ್ಧ!

ಅವು ನಿತ್ಯ ಶುದ್ಧ!
Published On :

ಆ  ಊರಲ್ಲೊಬ್ಬ ಜ್ಯೋತಿಷಿ. ಈತ ಸ್ವಲ್ಪ ಚಪಲ ಚೆನ್ನಿಗರಾಯ. ಪತ್ನಿ ಇರಲಿಲ್ಲ. ಆದರೆ ಈತನಿಗೆ ರಸಿಕತೆ ಉಕ್ಕಿದರೆ, ಯಾವ ಜಾತಿಯ ಹೆಂಗಳಾದರೂ ನಡೆಯುತ್ತಿತ್ತು. ತರುಣಿಯರನ್ನು ಮರುಳು ಮಾಡಿ ಬಳಿಗೆ ಕರೆಯುವುದರಲ್ಲೂ ನಿಷ್ಣಾತ.
ಆತನ ಮನೆಗೆ ಕೆಲಸಕ್ಕೆ ಶೂದ್ರ ಹೆಂಗಸೊಬ್ಬಳು ಬರುತ್ತಿದ್ದಳು. ಆಕೆಯನ್ನೂ ಬುಟ್ಟಿಗೆ ಹಾಕಿಕೊಂಡ. ಒಮ್ಮೆ ಈತನದೂ ಆ ಹೆಂಗಸಿನದೂ ಮನೆಯ ಪಡಸಾಲೆಯಲ್ಲೇ ಸರಸ ನಡೆಯುತ್ತಿತ್ತು. ಅವರ ತುಟಿಗಳು ಪರಸ್ಪರ 'ಸಂಭಾಷಣೆ'ಯಲ್ಲಿ ನಿರತವಾಗಿದ್ದವು. ದುರದೃಷ್ಟವಶಾತ್, ಬ್ರಾಹ್ಮಣನಲ್ಲಿಗೆ ಜ್ಯೋತಿಷ್ಯ ಕೇಳಲು ಬಂದ ಆ ಊರಿನ ಗೌಡ ಇದನ್ನು ನೋಡಿಬಿಟ್ಟ! ಜ್ಯೋತಿಷಿ ಸಾವರಿಸಿಕೊಂಡು ತನ್ನ ಕೆಲಸಕ್ಕೆ ಮರಳಿದ. ಗೌಡನೂ ತಾನು ಏನೂ ನೋಡಿಯೇ ಇಲ್ಲದವನಂತೆ ವರ್ತಿಸಿದ. ಆದರೆ, ಊರಿನಲ್ಲಿ ಈ ಸುದ್ದಿಯನ್ನು ಹಬ್ಬಿಸಿದ.
ತನಗೆ ಬಂದ ಕಳಂಕವನ್ನು ತೊಡೆದುಕೊಳ್ಳಲು ಜ್ಯೋತಿಷಿ ಕಾಲ ಕಾಯುತ್ತಿದ್ದ. ಆ ಕಾಲ ಬಂದೇ ಬಂತು. ಒಮ್ಮೆ ಗೌಡ ಮತ್ತಿತರರು ಸೇರಿಕೊಂಡು ಬೇಟೆಗೆ ಹೋದರು. ಗೌಡನ ನಾಯಿ ಮೊಲವೊಂದನ್ನು ಹಿಡಿಯಿತು. ಹಿಡಿದ ರಭಸಕ್ಕೆ, ತುಸು ಮಾಂಸವನ್ನು ಕಿತ್ತು ತಿಂದೂ ಬಿಟ್ಟಿತು. ಇದನ್ನು ನೋಡಿ, ಎಂದೂ ಬಾಧಿಸದ ಪ್ರಶ್ನೆಯೊಂದು ಗೌಡನನ್ನು ಕಾಡತೊಡಗಿತು. ನಾಯಿ ತಿಂದುಬಿಟ್ಟ ಮಾಂಸವನ್ನು ನಾವು ತಿನ್ನಬಹುದೆ? ಪ್ರಶ್ನೆ ಹೊತ್ತು ಊರವರು ಜ್ಯೋತಿಷಿ ಬಳಿ ಬಂದರು. ಜ್ಯೋತಿಷಿ ಹೇಳಿದ:

ನಿತ್ಯಮಾಸ್ಯಂ ಶುಚಿಃ ಸ್ತ್ರೀಣಾಂ ಶಕುನಿಃ ಫಲಪಾತನೇ
ವತ್ಸೋಪಿ ಸ್ತನಪಾನೇ ಸ್ಯಾತ್ ಶ್ವಾ ಮೃಗಗ್ರಹಮೇ ಶುಚಿಃ


ಹಣ್ಣು ಕುಕ್ಕಿ ತಿನ್ನುವ ಹಕ್ಕಿಯ ಕೊಕ್ಕು, ಹಸುವಿನ ಮೊಲೆಯುಣ್ಣುವ ಕರುವಿನ ಮುಖ, ಬೇಟೆಯನ್ನು ಹಿಡಿಯುವ ನಾಯಿಯ ಬಾಯಿ, ಸ್ತ್ರೀಯರ ತುಟಿಗಳು- ಇವು ನಾಲ್ಕೂ ನಿತ್ಯ ಶುದ್ಧ. ಇಲ್ಲಿ ಅಶುಚಿಯ ಪ್ರಶ್ನೆ ಇಲ್ಲ!
ಗೌಡನ ಸಮಸ್ಯೆಯೂ ಪರಿಹಾರವಾಯ್ತು. ಜ್ಯೋತಿಷಿಯ ಚಿಂತೆಯೂ ಇಳಿಯಿತು! <

- ಹರಿಹರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.