ವಯಸ್ಸಿನ ಮಿತಿ ಇಲ್ಲ
ವಿವಿಐಪಿ ಭದ್ರತಾ ವಿಭಾಗದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ವಯಸ್ಸಿನ ಮಿತಿ ಇಲ್ಲ. ಅವರು ನಿವೃತ್ತರಾಗುವವರೆಗೂ ಇದೇ ವಿಭಾಗದಲ್ಲಿ ಸೇವೆ ಸಲ್ಲಿಸಬಹುದು.
ಅಂದರೆ ಸಿಎಆರ್ ಹಾಗೂ ಡಿಎಆರ್ನಲ್ಲಿ ಕೆಲಸ ಮಾಡುವ ಪೊಲೀಸ್ ಸಿಬ್ಬಂದಿಯನ್ನು ಗಣ್ಯ ವ್ಯಕ್ತಿಗಳ ಭದ್ರತೆಗೆಂದೇ ನೇಮಿಸಿಕೊಂಡಿರುತ್ತಾರೆ. ಅವರು ಭದ್ರತೆಯ ಕೆಲಸಕ್ಕೆ ಮಾತ್ರ ಸೀಮಿತ.
ಬೇರೆ ಪೊಲೀಸರಂತೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು, ಸಂಚಾರ ದಟ್ಟಣೆ ನಿಯಂತ್ರಿಸುವ ಕೆಲಸ ಮಾಡುವಂತಿಲ್ಲ. ಸಹಾಯಕ ಪೊಲೀಸ್ ಆಯುಕ್ತರ ಆದೇಶದಂತೆ ಅವರ ಹೇಳಿದ ಕಡೆ/ಗಣ್ಯರ ಭದ್ರತೆ ಕೆಲಸಕ್ಕೆ ಹಾಜರಾಗಬೇಕು. ನಿವೃತ್ತಿ ಪಡೆಯುವವರೆಗೂ ಇದೇ ಸೇವೆಯಲ್ಲಿ ಇರಬೇಕು.
ಅಧಿಕಾರಿಗಳಿಗೆ, ಗಣ್ಯರಿಗೆ ಇಂತಹ ಸಿಬ್ಬಂದಿಯನ್ನೇ ನೇಮಕ ಮಾಡಬೇಕೆಂಬ ಕಾನೂನಿಲ್ಲ. ಹಿರಿಯ ಅಧಿಕಾರಿಗಳು ಸೂಚಿಸಿದವರು ಸಂಬಂಧಪಟ್ಟವರಿಗೆ ಭದ್ರತೆ ಒದಗಿಸಬೇಕು. ಆದರೆ, ಕೆಲವೊಮ್ಮೆ ಭದ್ರತೆ ಪಡೆಯುವವರು ತಮಗೆ ಇಂತಹ ಸಿಬ್ಬಂದಿಯೇ ಬೇಕು ಎಂದು ಕೋರಿಕೆ ಇಟ್ಟಾಗ ಆ ಸಿಬ್ಬಂದಿಯನ್ನೇ ನೀಡಬೇಕು.
ರಾಜ್ಯದ ವಿವಿಐಪಿ ಭದ್ರತಾ ವಿಭಾಗದಲ್ಲಿ ಇರುವ ಸಾಕಷ್ಟು ಪೊಲೀಸ್ ಸಿಬ್ಬಂದಿಗೆ ವಯಸ್ಸಾಗಿದೆ. ಇಂತಹ ಕೆಲಸಗಳಿಗೆ ಯುವಕರಿಗೆ ಆದ್ಯತೆ ನೀಡಬೇಕು ಎಂಬ ಕೂಗು ಕೇಳಿಬರುತ್ತಿದೆ. ಆದರೂ ಸಹ ವಯಸ್ಸಾದ ಸಿಬ್ಬಂದಿಯೇ ಇಂತಹ ಕೆಲಸ ನಿರ್ವಹಿಸುತ್ತಿದ್ದಾರೆ. ಅವರನ್ನು ಬದಲಿಸುವ ಗೋಜಿಗೆ ಮಾತ್ರ ಇಲಾಖೆ ಮುಂದಾಗಿಲ್ಲ. ಹಾಗಾಗಿ ಅವರಿಗೆ ವಯಸ್ಸಿನ ಮಿತಿ ಇಲ್ಲ. ಅವರು ನಿವೃತ್ತರಾಗುವವರೆಗೂ ಮುಂದುವರೆಯುತ್ತಾರೆ. ಕಾಲಕ್ಕೆ ಸರಿಯಾಗಿ ತರಬೇತಿ ಪಡೆಯುತ್ತಾರೆ.
- ಶಾಂತ ತಮ್ಮಯ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

