ಎಲ್ಲೆಡೆ ಸಿಸಿಟಿವಿ
ಸಂಚಾರ ನಿಯಮ ಉಲ್ಲಂಘಿಸುವವರ ಮೇಲೆ ಸಂಚಾರ ಪೊಲೀಸರು ನಿಗಾ ವಹಿಸುತ್ತಾರೆ. ಆದರೆ ಇಲಾಖೆಯಲ್ಲಿ ಪೊಲೀಸ್ ಸಿಬ್ಬಂದಿ ಕೊರತೆ ಇರುವುದರಿಂದ ಸಂಚಾರ ಪೊಲೀಸರು ನಿಯಮ ಉಲ್ಲಂಘಿಸುವ ವಾಹನ ಸಾವರರ ಮೇಲೆ ನಿಗಾ ವಹಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಎಲ್ಲಾ ಜಿಲ್ಲೆಗಳಲ್ಲೂ ಅಗತ್ಯ ಸ್ಥಳಗಳಲ್ಲಿ ಸಿಸಿಟಿವಿ(ಕ್ಲೋಸ್ ಸರ್ಕ್ಯೂಟ್ ಟಿವಿ) ಅಳವಡಿಸಲಾಗಿದೆ.
ಕೆಲವು ಸ್ಥಳಗಳಲ್ಲಿ ಒಂದು ಸಿಗ್ನಲ್ನಲ್ಲಿ ಒಂದರಿಂದ ಎರಡು ಸಿಸಿಟಿವಿ ಅಥವಾ ಅಗತ್ಯ ಸ್ಥಳಗಳಲ್ಲಿ ಮೂರು ಅಥವಾ ನಾಲ್ಕು ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಈ ಸಿಸಿಟಿವಿಯಲ್ಲಿ ಆ ರಸ್ತೆಯಲ್ಲಿ ಸಂಚರಿಸುವ ವಾಹನಗಳು, ನಿಯಮ ಉಲ್ಲಂಘಿಸುವ ವಾಹನಗಳ ಮಾಹಿತಿ ಸಂಗ್ರಹವಾಗುತ್ತದೆ.
ಆದರೆ, ಸಿಸಿಟಿವಿಗೆ ಇಂತಿಷ್ಟೇ ದೂರ ಎಂದಿರುತ್ತದೆ. ಅಷ್ಟು ದೂರುದಲ್ಲಿ ತಪ್ಪು ನಡೆದರೆ, ನಿಯಮ ಉಲ್ಲಂಘನೆಯಾದರೆ ಮಾತ್ರ ಸಿಸಿಟಿವಿಯಲ್ಲಿ ಸಂಗ್ರಹವಾಗುತ್ತದೆ. ಇಲ್ಲವಾದಲ್ಲಿ ಸಂಗ್ರಹವಾಗುವುದಿಲ್ಲ. ಸಿಗ್ನಲ್ನಲ್ಲಿ ನಿಯಮ ಉಲ್ಲಂಘಿಸುವವರನ್ನು ಪತ್ತೆ ಮಾಡುವ ಉದ್ದೇಶದಿಂದ ಸಿಸಿಟಿವಿಗಳನ್ನು ಹಾಕಲಾಗಿದ್ದು, ಬಹುತೇಕ ಮಂದಿ ಈ ಸಿಸಿಟಿವಿಯಿಂದ ಸಿಕ್ಕಿಬೀಳುತ್ತಾರೆ.
ಸಿಸಿಟಿವಿಯಲ್ಲಿ ಸಂಗ್ರಹವಾಗುವ ದೃಶ್ಯಗಳು, ತಪ್ಪುಗಳನ್ನು ವೀಕ್ಷಿಸಲು ಪ್ರತ್ಯೇಕ ಸಿಬ್ಬಂದಿ ಇರುತ್ತಾರೆ. ಅದನ್ನು ಟಿಎಂಸಿ(ಟ್ರಾಫಿಕ್ ಮ್ಯಾನೇಜ್ಮೆಂಟ್ ಕಂಟ್ರೋಲ್) ಎಂಬ ಪ್ರತ್ಯೇಕ ಕಚೇರಿ ಇದೆ. ಅಲ್ಲಿನ ಸಂಚಾರ ಪೊಲೀಸ್ ಸಿಬ್ಬಂದಿ ಸಿಸಿಟಿವಿಯಲ್ಲಿನ ದೃಶ್ಯಗಳನ್ನು ಗಮನಿಸುತ್ತಾರೆ.
ದಿನದ 24 ಗಂಟೆಯೂ ಸಿಸಿಟಿವಿಯಲ್ಲಿ ಎಲ್ಲಾ ದೃಶ್ಯಗಳು ಸಂಗ್ರಹವಾಗುತ್ತವೆ. ಆದರೆ, ರಾತ್ರಿ ವೇಳೆ ನಡೆಯುವ ಪ್ರಕರಣಗಳು ಮಾತ್ರ ಪತ್ತೆ ಮಾಡುವುದು ಕಷ್ಟ. ಕತ್ತಲೆ ಇರುವುದರಿಂದ ನಿಯಮ ಉಲ್ಲಂಘನೆ, ಅಪಘಾತ, ಆರೋಪಿ ಪರಾರಿಯಾಗುವ ಘಟನೆಗಳು ಸಿಸಿಟಿವಿಯಲ್ಲಿ ಸಂಗ್ರಹವಾಗಿದ್ದರೂ ಅದು ಕಾಣುವುದಿಲ್ಲ.
- ಶಾಂತ ತಮ್ಮಯ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

