ಭಾವ ಬಂಧನ
ಸ್ವಾಮಿ ವಿವೇಕಾನಂದರು ಮುಂಬೈಯಿಂದ ಅಮೆರಿಕೆಗೆ ಹೋರಡುವ ಸಮಯ ಮರೆಯಲಾಗದ ಅಪೂರ್ವಕ್ಷಣಗಳಿಗೆ ಸಾಕ್ಷಿಯಾಗಿದೆ. ಸ್ವಾಮೀಜಿಯು ಈಗ ಮಾತೃಭಮಿಯನ್ನು ಬಿಟ್ಟು ಪರದೇಶಕ್ಕೆ ತೆರಳುತ್ತಿರುವಾಗ ಅವರ ಭಾವಕೋಶ ಪ್ರವಾಹದೋಪಾದಿಯಲ್ಲಿ ಮಹಾಪೂರವನ್ನೇ ಸೃಷ್ಟಿಸಿತು. ಶ್ರೀರಾಮಕೃಷ್ಣರನ್ನು, ಜಗನ್ಮಾತೆ ಶ್ರೀಶಾರದಾದೇವಿಯವರನ್ನು ಹಾಗೂ ಸೋದರ ಸಂನ್ಯಾಸಿಗಳನ್ನು ಅವರ ಮೈಮನಬದ್ಧಿ ತುಂಬಿಕೊಂಡಿತು. ಸನಾತನ ಋಷಿಪರಂಪರೆಯ ದಿವ್ಯಭವ್ಯ ಭಾರತ ಸಂಸ್ಕೃತಿ ಹೃದಯದಲ್ಲಿ ಅನಾವರಣಗೊಂಡಿತು. ಮಾತೃಭೂಮಿಯ ಮೇಲಿನ ಅಭಿಮಾನ ಉಕ್ಕಿ ಹರಿಯಿತು.
ಲೌಕಿಕ ಪರಿಕರಗಳ ಗೋಜಿಗೆ ಹೋಗದ ಸ್ವಾಮೀಜಿ ಅದರ ಜವಾಬ್ದಾರಿಯನ್ನು ಶಿಷ್ಯರಿಗೆ ಬಿಟ್ಟು ಮುಂಬೈನಲ್ಲಿದ್ದ ಕಡೆಯ ದಿನಗಳನ್ನು ಧ್ಯಾನ, ಪ್ರಾರ್ಥನೆಗಳಲ್ಲಿ ಕಳೆಯುತ್ತ, ತಮ್ಮ ಮುಂದಿರುವ ಮಹಾಕಾರ್ಯಕ್ಕೆ ಮೌನವಾಗಿಯೇ ಸಿದ್ಧರಾಗತೊಡಗಿದರು. 1893ರ ಮೇ 31, ಸ್ವಾಮೀಜಿ ಮುಂಬೈಯಿಂದ ಅಮೆರಿಕೆಗೆ ಹೊರಡುವ ದಿನವದು. ಬಂದರಿಗೆ ಬಂದ ಸ್ವಾಮೀಜಿ, ಇಬ್ಬರು ಶಿಷ್ಯರೊಡನೆ ಹಡಗನ್ನು ಪ್ರವೇಶಿಸಿದರು. ಅವರೊಡನೆ ಮಾತನಾಡುತ್ತಿದ್ದಾಗ ಹಡಗು ಹೊರಡುವ ಸೂಚನೆಯಾಗಿ ಗಾಂಗ್ ಬಾರಿಸಿತು. ಶಿಷ್ಯರು ಸ್ವಾಮೀಜಿಯ ಪಾದಗಳಿಗೆ ಸಾಷ್ಟಾಂಗ ಪ್ರಣಾಮ ಮಾಡಿದರು. ಇಬ್ಬರ ಕಣ್ಣುಗಳು ತುಂಬಿಕೊಂಡವು, ಕಾಲುಗಳು ಹಡಗಿನಿಂದ ಹೊರಸಾಗಿದವು. ಹಡಗು ಚಲಿಸುತ್ತಿದ್ದಂತೆಯೇ ಇವರ ಹೃದಯವೇ ಅದರೊಡನೆ ತೆರಳುತ್ತಿರುವಂತೆ ಅನುಭವವಾಗತೊಡಗಿತು. ಅವರು ಸ್ವಾಮೀಜಿಯನ್ನು ಕಣ್ಮರೆಯಾಗುವವರೆಗೂ ನೋಡುತ್ತಾ ಬಂದರಿನಲ್ಲಿ ನಿಂತಿರುವುದನ್ನೇ ಮರೆತಿದ್ದರು!
- ಆನಂದ ಎಸ್.ಎನ್.
anandsn193@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

