ಅಭಿನಯ ತರಬೇತಿ
ಚಿತ್ರರಂಗಕ್ಕೆ ಅನೇಕ ಹೊಸ ಪ್ರತಿಭೆಗಳನ್ನು ಪರಿಚಯಿಸಿದ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಅವರ ಸಾರಥ್ಯದಲ್ಲಿ ಹೊಸ ಕಲಾವಿದರಿಗಾಗಿ ಅಭಿನಯ ತರಬೇತಿ ತರಗತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಿನಿಮಾ, ಟಿವಿ ಧಾರಾವಾಹಿಗಳಲ್ಲಿ ಅಭಿನಯಿಸಲು ಇಚ್ಛಿಸುವ 16 ವರ್ಷ ತುಂಬಿದವರಿಗೆ ಅನುಭವಿಗಳು ಮತ್ತು ಖ್ಯಾತನಾಮರಿಂದ ಉಪನ್ಯಾಸ ತರಗತಿಗಳು ನಡೆಯುತ್ತವೆ. ನವೆಂಬರ್ 6, 2013ರಿಂದ ಫೆಬ್ರವರಿ 5, 2014ರವರೆಗೆ 3 ತಿಂಗಳು ತರಬೇತಿ. ವಾರದ ತರಗತಿಗಳು ಸೋಮವಾರದಿಂದ ಗುರುವಾರ ಸಂಜೆ 6ರಿಂದ 8. ವಾರಾಂತ್ಯದ ತರಗತಿಗಳು: ಶನಿವಾರ ಸಂಜೆ 5ರಿಂದ 9, ಭಾನುವಾರ ಬೆಳಗ್ಗೆ 10ರಿಂದ 2. ಪೂರ್ಣಾವಧಿಯ ಇಂಟೆನ್ಸಿವ್ ಅಭಿನಯ ತರಗತಿಗಳೂ ನಡೆಯಲಿವೆ.
ಅರ್ಜಿಯನ್ನು www.tentcinema.com ನಿಂದ ಡೌನ್ಲೋಡ್ ಮಾಡಿ ಪ್ರವೇಶಶುಲ್ಕದೊಡನೆ ಅಕ್ಟೋಬರ್ 25, 2013ರೊಳಗೆ- 'ಟೆಂಟ್ ಸಿನಿಮಾ', ನಾಗತಿಹಳ್ಳಿ ಸಿನಿಮಾ ಶಾಲೆ, 'ಲಿರಿಕ್ಸ್', 3ನೇ ಮಹಡಿ, ನಂ. 184, 17ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು-70. ದೂರವಾಣಿ: 080-65695500/ 65695501, ಮೊಬೈಲ್: 9900555255, 9740092323. ಇ-ಮೇಲ್: contact@tentcinema.com, tentcinema.school@gmail.com ಇಲ್ಲಿ ತರಬೇತಿ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಂಸ್ಥೆಯು ನಿರ್ಮಿಸಲಿರುವ ಧಾರಾವಾಹಿ ಮತ್ತು ಚಲನಚಿತ್ರಗಳಲ್ಲಿ ಆದ್ಯತೆಗೆ ಅನುಗುಣವಾಗಿ ಅವಕಾಶ ನೀಡಲಾಗುವುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

