ಬೈಟುಕಾಫಿ

ಸಕಲ ಕಲೆ

ಬೆಳಕಿನ ಹಬ್ಬ ಇನ್ನೇನು ಬಂದೇ ಬಿಡ್ತು. ಈ ಸಡಗರದ ಸ್ವಾಗತಕ್ಕೆ ಬೆಂಗಳೂರಿನ ಶ್ರೀನಿಧಿ ಆರ್ಟ್ಸ್ ಆ್ಯಂಡ್ ಕ್ರಾಫ್ಟ್ಸ್ ಅದ್ಧೂರಿ ತಯಾರಿಯನ್ನೇ...

ಸಕಲ ಕಲೆ
Published On :

ಬೆಳಕಿನ ಹಬ್ಬ ಇನ್ನೇನು ಬಂದೇ ಬಿಡ್ತು. ಈ ಸಡಗರದ ಸ್ವಾಗತಕ್ಕೆ ಬೆಂಗಳೂರಿನ ಶ್ರೀನಿಧಿ ಆರ್ಟ್ಸ್ ಆ್ಯಂಡ್ ಕ್ರಾಫ್ಟ್ಸ್ ಅದ್ಧೂರಿ ತಯಾರಿಯನ್ನೇ ಮಾಡಿಕೊಂಡಿದೆ. ದೇಶದ ಮೂಲೆ ಮೂಲೆಗಳಿಂದ ಕಲಾವಿದರ ಕುಟುಂಬಗಳನ್ನು ಕರೆತರುತ್ತಿದೆ.
ಅ.25ರಿಂದ ನ.5ರ ವರೆಗೆ ನಡೆಯುವ ಶ್ರೀನಿಧಿ ಕರಕುಶಲ ಮೇಳಕ್ಕೆ ಬಂದರೆ ದೇಶದ ವಿವಿಧ ಮಾದರಿಯ ಕರಕುಶಲ ಉತ್ಪನ್ನಗಳನ್ನು ಒಂದೇ ಸೂರಿನಡಿ ಕಾಣಬಹುದು. ಕಿರುತೆರೆ ನಟಿ ಮಾಳವಿಕಾ ಅವಿನಾಶ್ ಮೇಳ ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿನ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಬೆಳಗ್ಗೆ 10ರಿಂದ ಸಂಜೆ 7ರ ವರೆಗೆ ಪ್ರದರ್ಶನವಿರುತ್ತದೆ.
ಕರಕುಶಲ ಕಲೆಯಲ್ಲಿ ಆಧುನಿಕತೆಯ ಅಭಿವ್ಯಕ್ತಿ ಮೂಡಿಸುವ ಪ್ರಯತ್ನ ಈ ಮೇಳದ ಹೈಲೈಟ್ಸ್. ಮಿನಿಯೇಚರ್ ಪೇಂಟಿಂಗ್ಸ್, ಬೊಂಬೆಗಳು, ತಾಂಜಾವೂರು ಪೇಂಟಿಂಗ್ಸ್, ಪಟ ಚಿತ್ರಗಳು, ಪಟ್ವಾ ಕ್ರಾಫ್ಟ್ಸ್, ಮೈಸೂರು ಚಿತ್ರಕಲೆಗಳು, ಆಭರಣಗಳು, ಮದುಬನಿ ಪೇಂಟಿಂಗ್ಸ್ ಅಲ್ಲದೆ ಇಳಕಲ್, ಕಲಂಕಾರಿ, ಚೆಟ್ಟಿನಾಡಿನ ಸೀರೆಗಳು, ಅಲಂಕಾರಿಕ ವಸ್ತುಗಳು, ಹ್ಯಾಂಡ್‌ಲೂಮ್ ವಸ್ತುಗಳು ಮತ್ತು ಉಡುಪುಗಳು ಮಹಿಳೆಯರ ಗಮನ ಸೆಳೆಯಲಿವೆ. 20 ರಾಜ್ಯಗಳ 100 ಕಲಾಕುಟುಂಬಗಳು ಪಾಲ್ಗೊಳ್ಳಲಿವೆ. ಹೆಚ್ಚಿನ ಮಾಹಿತಿಗೆ ಮೊ. 9886195494 ಸಂಪರ್ಕಿಸಿ.

ಮತ್ತೇನು ಆಕರ್ಷಣೆ?
ಲಾಂಡ್ರಿ ಬಾಸ್ಕೆಟ್ಸ್, ಕೊಯ್ಲ್ ಬಾಲ್ಸ್, ಬ್ಯಾಗ್‌ಗಳು, ಕುಷನ್ ಕವರ್‌ಗಳು ಮತ್ತು ಜ್ಯುವೆಲರಿ, ಗುಜರಾತಿನ 'ಭುಜ್ ಕಚ್ ಶಾಲ್ಸ್‌', ಪ. ಬಂಗಾಳದ 'ಕಾಂತಾ' ಬಟ್ಟೆಗಳು, ಧೋಕ್ರಾ ಕಾಸ್ಟ್ ಮೆಟಲ್ ಹಾಗೂ ಕಬ್ಬಿಣ ಸಾಮಗ್ರಿ, ಬೆಳ್ಳಿ ಮತ್ತು ಆಟಿಕೆಗಳು, ಚರ್ಮೋತ್ಪನ್ನಗಳು, ಕುಂಬಾರಿಕೆ ಉತ್ಪನ್ನಗಳ ಬೃಹತ್ ಸಂಗ್ರಹವಿರುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.