ಮಿನಿ ಗುಮ್ಮಟ

ರಾಜ್ಯೋತ್ಸವದ ಅಂಗವಾಗಿ ಬಿಜಾಪುರ ನಗರದಲ್ಲಿ ನಡೆಯಲಿರುವ ಸ್ತಬ್ಧ ಚಿತ್ರದ ಮೆರವಣಿಗೆಯಲ್ಲಿ ಬೃಹತ್ ಗಾತ್ರದ ಗೋಳಗುಮ್ಮಟ ಕಲಾಕೃತಿ ಜನರ ಮನ ರಂಜಿಸಲಿದೆ. ನಗರದ ಕಸ್ತೂರಿ ಕಾಲನಿಯ ಅಲ್ಲಾಪುರ ಅಗಸಿ ಬಡಾವಣೆಯ ಕಲಾವಿದ ಅಸ್ಪಾಕ ಪಟೇಲ್ ಚಟ್ಟರಕಿ ಗೋಳಗುಮ್ಮಟದ ತದ್ರೂಪವನ್ನೇ ಸಾಗವಾನಿ ಮರದಲ್ಲಿ ಕೆತ್ತಿದ್ದಾರೆ. 5್ಢ5 ಅಡಿ ಉದ್ದಗಲದ ಗೋಳಗುಮ್ಮಟ ಕಲಾಕೃತಿ ರಚನೆಗೆ ತಗಲಿದ ಸಮಯ 1 ವರ್ಷ. ಮೆಟ್ಟಿಲುಗಳು, ಕಿಡಕಿಯ ಕಿಂಡಿಗಳು, ಕಮಾನುಗಳು ಹೀಗೆ ಎಲ್ಲವೂ ಯಥಾವತ್ತಾಗಿದೆ. ರು. 30 ಸಾವಿರ ವೆಚ್ಚವಾಗಿದ್ದು, ರು. 1 ಲಕ್ಷ ಬೆಲೆ ಬಾಳುತ್ತದಂತೆ. ಇವರ ಇಟಲಿ ಟವರ್ ಕಲಾಕೃತಿ ಛತ್ತೀಸಗಢ, ಬೆಂಗಳೂರು ಹಾಗೂ ಗುಲ್ಬರ್ಗದ ವಸ್ತು ಪ್ರದರ್ಶನದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. 10್ಢ10 ಅಡಿ ಅಳತೆಯ ಗೋಳಗುಮ್ಮಟ ರಚಿಸುವುದು ಇವರ ಗುರಿ.
- ರುದ್ರಪ್ಪ ಆಸಂಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


