ದಿನದ ಆರಂಭಕ್ಕೆ ಬೇಕೇಬೇಕು 'ಬೈಟು ಕಾಫಿ'
ಒಂದು ವರ್ಷ ಪೂರೈಸಿರುವ 'ಬೈಟು ಕಾಫಿ'ಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು. 'ಬೈಟು ಕಾಫಿ' ಆರಂಭವಾದಾಗಿನಿಂದ ಬೆಳಿಗ್ಗೆ ಎದ್ದ ತಕ್ಷಣ ಕನ್ನಡಪ್ರಭಕ್ಕೆ ಕಾತುರದಿಂದ ಕಾಯುತ್ತಿರುತ್ತೇನೆ. ಬೈಟು.... ಓದಿದ ಮೇಲೆ ಏನೋ ಒಂಥರ ನೆಮ್ಮದಿ. ಇದು ಮನರಂಜನೆಯ ಜೊತೆಗೆ ಅನೇಕ ವಿಷಯಗಳನ್ನು ನಮಗೆ ನೀಡಿ ಜ್ಞಾನಾರ್ಜನೆಗೆ ಅವಕಾಶ ಕಲ್ಪಿಸುತ್ತಿದೆ. 'ಬೈಟು ಕಾಫಿ'ಯ 2ನೇ ಪುಟ ನನಗೆ ಅಚ್ಚುಮೆಚ್ಚು. ಈ ಪುಟ ಹೆಸರಿಗೆ ತಕ್ಕಂತೆ 'ಅನೇಕ' ವಿಷಯಗಳನ್ನು, ನೆಮ್ಮದಿಯನ್ನು ಓದುಗರಿಗೆ ನೀಡುತ್ತದೆ.
ಮಯ್ಯ ಅವರ ಬೆಳ್ಳಿ ತಟ್ಟೆ ಅಂಕಣ ನಮಗೆ ರುಚಿಕರ ತಿನಿಸುಗಳ ಜೊತೆಗೆ ಆರೋಗ್ಯದ ಸಲಹೆಗಳನ್ನೂ ಸಹ ಕೊಡುತ್ತವೆ. ಮಾಹಿತಿ.ಕಾಂ ಮತ್ತು ಲೆಕ್ಕರಾಜರಾಣಿ ಇವುಗಳು ಚಿಕ್ಕ ಮತ್ತು ಚೊಕ್ಕವಾಗಿ ನಮಗೆ ಒಳ್ಳೊಳ್ಳೆ ಮಾಹಿತಿಗಳನ್ನು ಕೊಡುತ್ತವೆ. ಸಣ್ಣಕಥೆಗಳು ಮನಸ್ಸಿಗೆ ಮುದ ನೀಡಿ ದೊಡ್ಡನೀತಿಯನ್ನು ತಿಳಿಸುತ್ತವೆ.
ಜೋಕ್ಫಾಲ್ಟ್ ತಮಾಷೆಯ ಜೊತೆಗೆ ವರ್ತಮಾನದ ವ್ಯಂಗ್ಯವನ್ನು ಎತ್ತಿ ತೋರಿಸುತ್ತದೆ. ಪದಯಾತ್ರೆ ಕುತೂಹಲಕಾರಿಯಾಗಿರುತ್ತದೆ. ಹೀಗೆ ಪ್ರತೀ ಅಂಕಣವು ಮನಸ್ಸಿಗೆ ಮುದ ನೀಡಿ ಬಹಳ ವಿಷಯಗಳನ್ನು ನಮಗೆ ನೀಡುತ್ತಿವೆ.
ಕೊನೆಯ ಮಾತು: ಈ 'ಬೈಟು ಕಾಫಿ'ಯ ಯೋಚನೆಯ ಹಿಂದೆ ಇರುವ ವ್ಯಕ್ತಿ(ಗಳ) ಪರಿಚಯ ಕೊಡಿ. ಝಿಜ ಟಛ್ಞ್ಝಟ್ಜಿ ್ಟಜಿ 'ಬೈಟು ಕಾಫಿ' ಬಗ್ಗೆ ವಿವರಿಸಿ. ಹೊಸ 'ಬೈಟು ಕಾಫಿ' ಮಾಸ್ಟ್ಹೆಡ್ನ ಅಕ್ಷರಗಳು ದುಂಡಗೆ ಮುದ್ದಾಗಿದ್ದರೂ ಮೊದಲ ವಕ್ರ ಅಕ್ಷರಗಳೇ ಬಹಳ ಚೆನ್ನಾಗಿ ಕಾಣುತ್ತವೆ. ದಯವಿಟ್ಟು ಅದನ್ನು ಬದಲಿಸಿ ಹಳೆಯ ವಕ್ರ ಅಕ್ಷರಗಳನ್ನೇ ಉಳಿಸಿ. ಇದರಲ್ಲೇ ಹೊಸತನ ಬೇಕಾದರೆ ತರಬಹುದು.
= ನಾದೊಶ್ರೀ, ಬೆಂಗಳೂರು
ಬೈಟು ಅಲ್ಲ, ಫುಲ್ ಕಾಫಿ!
ಬೈಟು ಕಾಫಿಯಲ್ಲ ಅದು, ಫುಲ್ ಕಾಫಿಯದು. ಫುಲ್ ಇನ್ಫರ್ಮೇಷನ್ನಿಂದ ತುಂಬಿ ತುಳುಕುತ್ತಿರುತ್ತೆ. ಫುಲ್ ಖುಷಿ ವಿಷಯಗಳೇ ಇರುತ್ವೆ. ಯಾವುದೂ ಮುಚ್ಚುಮರೆಯೇ ಇಲ್ಲ. ಎಂಥ ಉಪಯೋಗಕಾರಿ ಎಂದರೆ
ಎಲ್ಲ ವಯೋವಾನದವರಿಗೂ ಬೇಕೇಬೇಕು 'ಬೈಟು ಕಾಫಿ', ಅಲ್ಲ...ಅಲ್ಲ... ಫುಲ್ ಕಾಫಿ. ಹೀಗೇ ಬರ್ತಾ ಇರಲಿ.
= ಎಂ.ಎಲ್. ನರಸಿಂಹಮೂರ್ತಿ, ಮೈಸೂರು
ಸ್ವರ್ಗ ಸುಖ ನೀಡುವ ಕಾಫಿ
ಬೆಳ್ಳಂಬೆಳಿಗ್ಗೆ ಫುಲ್ ಕ್ಪ್ ಕಾಫಿ ಹೀರುತ್ತಾ, 'ಫುಲ್ ಹಾಟ್ ಫುಲ್ ಸ್ವಾದ'ದ 'ಬೈಟು ಕಾಫಿ'ಯನ್ನೂ ಆಸ್ವಾದಿಸುತ್ತಿದ್ದರೆ....ವಾವ್....ಇನ್ನೆಲ್ಲಿಯ ಸ್ವರ್ಗ!
ರುಚಿ, ಬಣ್ಣ, ಘಮದಿಂದ ಎಲ್ಲರ ಚಿತ್ತವನ್ನು ತನ್ನತ್ತ ಸೆಳೆಯುವ ಕಾಫಿ ತುಂಭಾ ತುಂಬಾನೆ ಚೆನ್ನ. ಪುಟ್ಟಪುಟ್ಟದಾದ, ವೈವಿಧ್ಯಮಯ ವಿಚಾರಗಳಿಂದ ಮನಕೆ ಮುದ ನೀಡುವ, ಸಂಗ್ರಹಯೋಗ್ಯವಾದ 'ಬೈಟು ಕಾಫಿ' ಪುರವಣಿ.
ಹೀಗೇ ನೂರ್ಕಾಲ ಮುಂದುವರಿಯಲಿ ಎಂದು ಆಶಿಸುವೆ.
ಅಂಬಿಕಾ ತಿಮ್ಮಪ್ಪ ಎ.ಎಸ್., ಸಾಗರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

