ಬೈಟುಕಾಫಿ

ಚೆಲುವಿನ ನಿಲುವು

Published On :

ಟಿವಿ ಸೀರಿಯಲ್‌ನಲ್ಲಿ ಕಾಣಿಸುವ ಸ್ತ್ರೀಯರು ಸುಂದರವಾಗಿರಬೇಕು. ಮನೆಯಲ್ಲಿ ಚಿಕ್ಕ ಮಗುವಿದ್ದರೂ ಸೈ, ಕಸ ಚೆಲ್ಲಿರಬಾರದು. ಪುಸ್ತಕಗಳು ಇನ್ನೂ ಯಾರೂ ಮುಟ್ಟಿಲ್ಲ ಎಂಬಂತೆ ನೀಟಾಗಿರಬೇಕು. ಕಚೇರಿಗೆ ತಲುಪಿದಾಗ ಬಾಚಿದ ಒಂದು ಕೂದಲೂ ಕೊಂಕಿರಬಾರದು. ಇದು ನಮ್ಮಲ್ಲಿ ಅನೇಕರ ಸೌಂದರ್ಯಪ್ರಜ್ಞೆ. ಫೋಟೋಗೆ ಪೋಸ್ ಕೊಡುತ್ತಾರಲ್ಲ, ಇವರ ಪಾಲಿಗೆ ಹಾಗಿರಬೇಕು ಎಲ್ಲವೂ. ಪ್ರಕೃತಿ ಕೂಡ ಹಾಗೇ ಇರಲೆಂದು ಬಯಸುವವರಿವರು.
ಆದರೆ ಇದು ಸಾಧ್ಯವೆ? ಯೋಚಿಸಿ ನೋಡಿ. ಸೃಷ್ಟಿ ಎಂದ ಮೇಲೆ ಎಲ್ಲಾದರೊಂದು ಕಡೆ ಅರೆ ಕೊರೆ ಇದ್ದೇ ಇರುತ್ತದೆ. ತಿಲಮಾತ್ರವೂ ಕಲೆಯಿಲ್ಲದ ಸುಂದರಿ ಕನಸಿನಲ್ಲಿ ಮಾತ್ರ ಇರಲು ಸಾಧ್ಯ. ನಳ- ಭೀಮರ ಅಡುಗೆಯಲ್ಲೂ ಉಪ್ಪು ಕಡಿಮೆಯಾಗಿರಲು ಸಾಧ್ಯ. ನರಮನುಷ್ಯನಲ್ಲಿರುವ ಕುಂದುಕೊರತೆಗಳನ್ನು ಸಹಿಸಿಕೊಳ್ಳುವುದನ್ನು ನಾವು ಕಲಿಯಬೇಕು. ಹುಟ್ಟಿದ ಮಗು ಕುರೂಪಿಯಾಗಿದೆ ಎಂದು ತೊಟ್ಟಿಗೆ ಬಿಸಾಡುವವರಿದ್ದಾರೆಯೆ? ಸೃಷ್ಟಿಯೆಲ್ಲವನ್ನೂ ತನ್ನ ಮಗುವೆಂದು ಪರಿಗ್ರಹಿಸುವ ಸರ್ವಶಕ್ತ, ತನಗೇ ಕುರೂಪಿಯೆಂದು ಕಂಡದ್ದನ್ನು ಸೃಷ್ಟಿಸಿರಲು ಸಾಧ್ಯವೆ? ಸೌಂದರ್ಯವನ್ನು ನೋಡುವ ನಮ್ಮ ಕಣ್ಣುಗಳಲ್ಲಿಯೇ ದೋಷವಿದೆ. ಆತ್ಮವಿಶ್ವಾಸ, ಮುಗುಳ್ನಗು, ದೃಢತೆ, ಪಾಂಡಿತ್ಯ, ವಿನಯಗಳು ಒಂದು ಮುಖಕ್ಕೆ ಚೆಲುವನ್ನು ತಂದುಕೊಡುತ್ತವೆಯೇ ಹೊರತು ಕೃತಕ ಪ್ರಸಾಧನಗಳಲ್ಲ. ನಮ್ಮ ದೃಷ್ಟಿಗಳನ್ನೇ ನಾವು ಬದಲಿಸಿಕೊಂಡರೆ ಆಗ ನೈಜ ಚೆಲುವು ಕಾಣಿಸುತ್ತದೆ.  

-  ಸಹನೆ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.