ಬೈಟುಕಾಫಿ

ಸ್ವಾಮೀಜಿ ಮತ್ತು ಅಜಿತ್‌ಸಿಂಗ್ ಸ್ನೇಹ

Published On :

ವಿವೇಕಾನಂದರು ಪರಿವ್ರಾಜಕಾಗಿ ಸಂಚರಿಸುತ್ತಿದ್ದ ಕಾಲದಲ್ಲಿ ಅವರನ್ನು ಅನೇಕ ರಾಜಮಹಾರಾಜರು, ಉನ್ನತಾಧಿಕಾರಿಗಳು, ಪಂಡಿತೋತ್ತಮರು... ಹೀಗೆ ಅನೇಕ ರೀತಿಯ ವ್ಯಕ್ತಿಗಳನ್ನು ಭೇಟಿ ಮಾಡಿದ್ದರು. ಅವರು ಕೇಳುತ್ತಿದ್ದ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸುತ್ತಿದ್ದರು. ಸ್ವಾಮೀಜಿಯ ಪ್ರಭಾವಕ್ಕೊಳಪಟ್ಟ, ಅವರ ಮೆಚ್ಚುಗೆಗೆ ಪಾತ್ರರಾದ ವಿರಳ ವ್ಯಕ್ತಿಗಳಲ್ಲಿ ಖೇತ್ರಿಯ ಮಹಾರಾಜ ಅಜಿತ್‌ಸಿಂಗ್ ಪ್ರಮುಖರು.
ಸ್ವಾಮೀಜಿಯ ಜೀವನದ ಬಗೆಗಿನ, ಶಿಕ್ಷಣದ ಬಗೆಗಿನ ವ್ಯಾಖ್ಯಾನದಿಂದ ರಾಜಾ ಅಜಿತ್‌ಸಿಂಗ್ ತುಂಬಾ ಪ್ರಭಾವಿತನಾದ. ಅದರಲ್ಲೂ ಜೀವನವೆಂದರೆ ಅದೊಂದು ಅವಿರತ ಹೋರಾಟ. ಪರಿಸರ-ಪರಿಸ್ಥಿತಿಗಳು ಮನುಷ್ಯನನ್ನು ಕೆಳಕ್ಕೆ ಒತ್ತುತ್ತಲೇ ಇರುತ್ತವೆ. ಇವುಗಳನ್ನು ಎದುರಿಸಿ ನಿಂತು ಹೋರಾಡುವುದೇ ಜೀವನ; ಇವುಗಳಿಗೆ ಶರಣಾಗಿ ಸೋಲೊಪ್ಪಿಕೊಳ್ಳುವುದು ಮರಣಕ್ಕೆ ಸಮಾನ ಎಂಬ ಸ್ವಾಮೀಜಿಯ ಧೀರನುಡಿ ಮಹಾರಾಜನ ಮನಸ್ಸನ್ನು ಆವರಿಸಿಬಿಟ್ಟವು. ಅದೇ ರೀತಿ ಸ್ವಾಮೀಜಿ, ಅಜಿತ್‌ಸಿಂಗ್‌ರ ಪ್ರಾಮಾಣಿಕತೆ, ಸರಳತೆ, ಜಿಜ್ಞಾಸೆಗಳನ್ನು ಮೆಚ್ಚಿಕೊಂಡರು. ಈರ್ವರ ಸ್ನೇಹ, ಸಂಭಾಷಣೆ, ಒಡನಾಟ ಹಾಗೂ ಇತರ ಚಟುವಟಿಕೆಗಳು ಕೊನೆಯವರೆಗೂ ಉಳಿದುಕೊಂಡವು. ಒಮ್ಮೆ ಸ್ವಾಮೀಜಿ ಬರೆಯುತ್ತಾರೆ, 'ಭಾರತದಲ್ಲಿ ಖೇತ್ರಿಯ ಮಹಾರಾಜ ಅಜಿತ್‌ಸಿಂಗ್, ನಾನು ಸದಾ ನೆಚ್ಚಿಕೊಳ್ಳಬಹುದಾದ ವ್ಯಕ್ತಿ. ಪ್ರಪಂಚದಲ್ಲಿ ನನಗಿರುವ ಸ್ನೇಹಿತರಲ್ಲಿ ಅಜಿತ್‌ಸಿಂಗ್ ಒಬ್ಬರು. ಅವರ ಕಾರ್ಯೋದ್ದೇಶ, ಶ್ರದ್ಧೆ, ಶಾಂತ ಸ್ವಭಾವಗಳು ಅತ್ಯದ್ಭುತವಾದವು.' ಅಜಿತ್‌ಸಿಂಗ್ ಸ್ವಾಮೀಜಿಗೆ ಸ್ನೇಹಿತರಷ್ಟೇ ಅಲ್ಲ ಅಂತರಂಗದ ಶಿಷ್ಯರೂ ಆಗಿದ್ದರು.


-ಆನಂದ ಎಸ್.ಎನ್.
anandsn193@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.