ಅಪಾಯದಲ್ಲೂ ಉಪಾಯ ತೋರಿ ಪಾರಾದ ಸ್ವಾಮೀಜಿ!
ಅಪಾಯ ಎದುರಾದಾಗ ಧೈರ್ಯ ಕಳೆದುಕೊಳ್ಳದ ದಿಟ್ಟತನ ಸ್ವಾಮಿ ವಿವೇಕಾನಂದರದು. ಅವರ ಮಾತಿನಲ್ಲಿ ಕಾಣುವ ಕೆಚ್ಚು, ಶೌರ್ಯ, ಶ್ರೀಮಂತಿಕೆ, ಸಂದರ್ಭೋಚಿತ ಕುಶಲತೆಗಳನ್ನು ಅವರು ವಾಸ್ತವ ಜೀವನವನ್ನು ಎದುರಿಸಿದ ರೀತಿಯಲ್ಲಿ ಕಾಣುತ್ತೇವೆ.
ಒಮ್ಮೆ ವಿವೇಕಾನಂದರು ಸಾಧು ಸಂತರು ವಾಸವಾಗಿರುವ ಕಾಠೇವಾಡದ ಲಿಂಬ್ಡಿಗೆ ಬಂದರು. ಈ ಸಾಧುಗಳು ಸ್ವಾಮೀಜಿಯನ್ನು ಆದರದಿಂದ ಸ್ವಾಗತಿಸಿ, ಉಳಿದುಕೊಳ್ಳಲು ವ್ಯವಸ್ಥೆ ಮಾಡಿದರು. ಆದರೆ ಒಂದೆರಡು ದಿನಗಳಲ್ಲೇ ಸ್ವಾಮೀಜಿಗೆ ಗೊತ್ತಾಯಿತು, ಈ ಸಾಧುಗಳೆಲ್ಲ ಕೀಳುಮಟ್ಟದ ವಾಮಾಚಾರಿಗಳು ಎಂದು. ತಕ್ಷಣ ಅಲ್ಲಿಂದ ಹೊರಡಲು ನಿರ್ಧರಿಸಿದರು. ಆದರೆ ಕೋಣೆಯ ಬಾಗಿಲಿಗೆ ಹೊರಗಿನಿಂದ ಬೀಗ ಹಾಕಲಾಗಿತ್ತು. ಸ್ವಾಮೀಜಿ ಅಲ್ಲಿಂದ ಪಾರಾಗುವ ಉಪಾಯವನ್ನು ಯೋಚಿಸುತ್ತಿರುವಾಗ, ಸಾಧುಗಳ ಮುಖಂಡನಿಂದ ಕರೆಬಂತು.
'ಏನಪ್ಪಾ, ನಿನ್ನ ಮುಖದ ಕಳೆಯನ್ನು ನೋಡಿದರೆ ಬಹಳ ಸಾಧನೆ ಮಾಡಿ, ಒಳ್ಳೆಯ ಶಕ್ತಿಯನ್ನು ಪಡೆದುಕೊಂಡಿರುವಂತೆ ಕಾಣುತ್ತೀ! ಈಗ ನಿನ್ನ ಆ ತಪಸ್ಸಿನ ಫಲವನ್ನೆಲ್ಲ ನಮಗೆ ಕೊಟ್ಟುಬಿಡಬೇಕು. ನಾವು ಸಾಧನೆ ಮಾಡಿ ಸಿದ್ಧಿ ಪಡೆದುಕೊಳ್ಳಲು ನಿನ್ನ ಬ್ರಹ್ಮಚರ್ಯವನ್ನು ಭಂಗ ಮಾಡಲಿದ್ದೇವೆ' ಎಂದ. ಸ್ವಾಮೀಜಿ ಧೃತಿಗೆಡದೆ, ಅಲ್ಲಿಂದ ತಪ್ಪಿಸಿಕೊಳ್ಳಲು ಉಪಾಯವನ್ನು ಸಿದ್ಧಪಡಿಸಿಕೊಂಡರು. ಪ್ರತಿದಿನ ತಮ್ಮ ಕೋಣೆಗೆ ಬರುತ್ತಿದ್ದ ಹುಡುಗನ ಸಹಾಯ ಪಡೆದು, ಮಡಕೆಯ ಚೂರಿನಲ್ಲಿ ಇದ್ದಿಲಿನಿಂದ ಬರೆದು, ಅಲ್ಲಿಯ ರಾಜನಿಗೆ ತಲುಪಿಸುವಂತೆ ಹೇಳಿದರು. ಸಂದೇಶ ಓದಿದ ರಾಜ, ತಕ್ಷಣ ಸೈನಿಕರನ್ನು ಕಳಿಸಿ ಸ್ವಾಮೀಜಿಯನ್ನು ಬಿಡಿಸಿದ.
-ಆನಂದ ಎಸ್.ಎನ್.
anandsn193@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

