ಪ್ರತ್ಯಕ್ಷಾನುಭವದಿಂದ ಧರ್ಮಸಿದ್ಧಿ
ಹರಿಪದನು 'ಸ್ವಾಮೀಜಿ, ನನಗನ್ನಿಸುತ್ತದೆ, ಧರ್ಮವನ್ನು ಅರ್ಥಮಾಡಿಕೊಳ್ಳಬೇಕಾದರೆ ಬಹಳಷ್ಟು ವಿದ್ಯಾವಂತರಾಗಿರಬೇಕು' ಎಂದು. ಆಗ ಸ್ವಾಮೀಜಿ 'ಧರ್ಮವನ್ನು ಆಚರಣೆಗೆ ತರುವಷ್ಟರಮಟ್ಟಿಗೆ ಅರ್ಥಮಾಡಿಕೊಳ್ಳಲು ಉನ್ನತ ವಿದ್ಯಾಭ್ಯಾಸವೇನೂ ಬೇಕಿಲ್ಲ. ಆದರೆ ಇತರರಿಗೆ ವಿವರಿಸಿ ಹೇಳಬೇಕಾಗಿ ಬಂದಾಗ ಮಾತ್ರ ಬೇಕಾಗುತ್ತದೆ ಅಷ್ಟೆ. ರಾಮಕೃಷ್ಣ ಪರಮಹಂಸರು ತಮ್ಮ ಹೆಸರನ್ನು 'ರಾಮ್ಕೆಸ್ಟೊ' ಎಂದು ಬರೆಯುತ್ತಿದ್ದರು. ಆದರೆ ಧರ್ಮದ ಸಾರವನ್ನು ಅವರಿಗಿಂತ ಚೆನ್ನಾಗಿ ಅರಿತವರು ಯಾರಿದ್ದಾರೆ? ಧರ್ಮ ಸಿದ್ಧಿಸುವುದು ಪ್ರತ್ಯಕ್ಷಾನುಭವದಿಂದ. ಧರ್ಮವನ್ನು ಸಾಕ್ಷಾತ್ಕರಿಸಿಕೊಳ್ಳಲು ಪ್ರಯತ್ನಿಸು, ಇಲ್ಲದಿದ್ದರೆ ನಿನಗೆ ಅದು ಅರ್ಥವಾಗುವುದಿಲ್ಲ' ಎಂದರು.
ಒಂದು ದಿನ ಸ್ವಾಮೀಜಿ ಹರಿಪದ ಮಿತ್ರನ ಮುಂದೆ ತಾವು ಚಿಕಾಗೋದಲ್ಲಿ ನಡೆಯಲಿರುವ ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಲು ಅಮೆರಿಕ ದೇಶಕ್ಕೆ ಹೋಗಬೇಕೆಂದಿರುವುದಾಗಿ ಹೇಳಿದರು. ಇದರಿಂದ ಉತ್ಸಾಹಿತನಾದ ಹರಿಪದನು 'ಹಾಗಾದರೆ ಸ್ವಾಮೀಜಿ, ಈಗಲೇ ಹಣಸಂಗ್ರಹ ಕಾರ್ಯ ಪ್ರಾರಂಭಿಸುತ್ತೇನೆ' ಎಂದಾಗ ಸ್ವಾಮೀಜಿ ಅದಕ್ಕೆ ಒಪ್ಪದೆ 'ಈಗಲೇ ಬೇಡ, ನಾನೀಗ ರಾಮೇಶ್ವರಕ್ಕೆ ಹೋಗಬೇಕು' ಎಂದರು.
ಹರಿಪದನು ಸ್ವಾಮೀಜಿಯ ಮುಂದಿನ ಪ್ರಯಾಣಕ್ಕಾಗಿ ರೈಲ್ವೆ ಟಿಕೆಟನ್ನು ತೆಗೆದುಕೊಟ್ಟು, ಅವರಿಗೆ ಸಾಷ್ಟಾಂಗ ಪ್ರಣಾಮ ಮಾಡುತ್ತಾ ಹೇಳಿದ, 'ಸ್ವಾಮೀಜಿ, ನಾನು ನನ್ನ ಜೀವನದಲ್ಲೇ ಯಾರಿಗೂ ಹೃತ್ಪೂರ್ವಕವಾಗಿ ನಮಸ್ಕರಿಸಿದವನಲ್ಲ. ಈಗ ನಿಮಗೆ ಪ್ರಣಾಮ ಸಲ್ಲಿಸಿ ನಾನು ನಿಜಕ್ಕೂ ಧನ್ಯನಾದೆ.' ಸ್ವಾಮೀಜಿ ಶಿಷ್ಯನನ್ನು ಹೃದಯತುಂಬಿ ಹರಸಿ ಬೀಳ್ಕೊಟ್ಟರು.
- ಆನಂದ ಎಸ್.ಎನ್.
anandsn193@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

