ವೋಟಿಂಗ್ ಸ್ಟಾರ್

ಈಗೊಂದು ಹದಿನೈದು ದಿನಗಳ ಮುಂಚೆಯಷ್ಟೇ ನನ್ನ ವೋಟರ್ ಐಡಿ ಬಂದಿದೆ. ಈ ದೇಶದ ಪ್ರಜೆಯಾಗಿ ನನ್ನ ಪಾಲಿಗೆ ಮೂಲಭೂತ ಹಕ್ಕೊಂದು ಜಮೆಯಾದ ಖುಷಿ. ಹಾಗಾಗಿ ಮತದಾನದ ದಿನಕ್ಕೋಸ್ಕರ ಕಾಯ್ತಿದ್ದೇನೆ. ನನ್ನ ಎರಡು ಸಿನಿಮಾಗಳು ಬಿಡುಗಡೆ ಹಂತದಲ್ಲಿದೆ. ಟಿಪಿಕಲ್ ಕೈಲಾಸ್ ಚಿತ್ರ ಎಲೆಕ್ಷನ್ ಕಾರಣದಿಂದಲೇ ಮುಂದೂಡಲ್ಪಟ್ಟಿದೆ. ಆದರೆ ಚಿತ್ರತಂಡಕ್ಕಾಗಲೀ ನನಗಾಗಲೀ ಈ ಬಗ್ಗೆ ಬೇಸರ ಇಲ್ಲ. ದೇಶದ ಭವಿತವ್ಯ ಚೆನ್ನಾಗಿದ್ದರೆ ತಾನೇ ನಾವು .. ಸಿನಿಮಾ.. ಎಲ್ಲವೂ?
ನಾನು ಮಂಡ್ಯದ ಹುಡುಗಿ. ಮಂಡ್ಯದಲ್ಲಿ ರಾಜಕೀಯ ಆಸಕ್ತಿ, ಸಾಮಾಜಿಕ ಕಾಳಜಿ ಬೇರೆಲ್ಲಕ್ಕಿಂತ ಕೊಂಚ ಹೆಚ್ಚೇ ಎನ್ನಬಹುದು. ಇಲ್ಲಿನ ಜನ ನಾಡು-ನುಡಿಗಾಗಿ ಹೋರಾಡಲು ಸದಾ ಸಿದ್ಧರಿರುತ್ತಾರೆ. ಹಾಗಾಗಿ ಫಲಿತಾಂಶ ಕೂಡ ಹೆಚ್ಚೂಕಮ್ಮಿ ನಿಚ್ಚಳ. ನಾನು ಗಮನಿಸುತ್ತಾ ಬಂದಿರೋ ಹಾಗೆ ಚುನಾವಣಾ ನೀತಿ ಈಗ ತುಂಬಾ ಸುಧಾರಿಸಿದೆ. ನಮ್ಮಲ್ಲಿ ಈಗ ಮೊದಲಿನ ಚುನಾವಣಾ ಗದ್ದಲಗಳು, ಬ್ಯಾನರ್, ಪೋಸ್ಟರ್, ಗಲ್ಲಿಗಲ್ಲಿ ಭಾಷಣ, ಅಕ್ರಮ ಇವೆಲ್ಲಕ್ಕೂ ಸಾಕಷ್ಟು ಕಡಿವಾಣ ಬಿದ್ದಿದೆ. ದೇಶ ಕೂಡ ಹಂತಹಂತವಾಗಿ ಒಳ್ಳೆಯತನದತ್ತ ಹೋಗುತ್ತಿದೆ. ಈ ಎಲೆಕ್ಷನ್ ಖಂಡಿತ ಇನ್ನಷ್ಟು ಬದಲಾವಣೆ ತರಲಿದೆ. ಸಿನಿಮಾಕ್ಷೇತ್ರದಲ್ಲಿ ಮುಳುಗಿ ಹೋಗಿರುವ ನಮ್ಮಂಥವರಿಗೆ ಪೂರ್ತಿಯಾಗಿ ರಾಜಕೀಯದ ಅರಿವಿಲ್ಲದ ಹೊತ್ತಿನಲ್ಲಿ, ಮಾಧ್ಯಮಗಳು ನಿಜಕ್ಕೂ ಕ್ಷೇತ್ರದ ಬಗ್ಗೆ, ಅಭ್ಯರ್ಥಿಗಳ ಬಗ್ಗೆ, ರಾಜಕೀಯ ಟ್ರೆಂಡ್‌ಗಳ ಬಗ್ಗೆ, ತುಂಬಾ ವಿವರವಾಗಿ ಹಾಗೂ ನಿಷ್ಪಕ್ಷಪಾತಿಯಾಗಿ ತಿಳಿಸಿಕೊಡುತ್ತಿವೆ. ಇದು ಸೂಕ್ತ ಅಭ್ಯರ್ಥಿಯನ್ನು ನಿರ್ಧರಿಸೋದಕ್ಕೆ ಸಹಕಾರಿಯಾಗುತ್ತಿದೆ. ಕೊನೆಯ ಕ್ಷಣದ ಗೊಂದಲಗಳಿಗೆ , ಇನ್‌ಫ್ಲುಯೆನ್ಸ್‌ಗಳಿಗೆ, ಆಮಿಷಗಳಿಗೆ ಒಳಗಾಗದೆ ಪ್ರತಿಯೊಬ್ಬರೂ ಮತದಾನ ಮಾಡಬೇಕೆಂದು ಕೇಳಿಕೊಳ್ಳುತ್ತೇನೆ.
-ಪಾವನಾ(ಬೃಂದಾ), ಚಿತ್ರನಟಿ,
(ಗೊಂಬೆಗಳ ಲವ್, ಜಟ್ಟ, ಅದ್ವೈತ ಖ್ಯಾತಿ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


