ವೋಟಿಂಗ್ ಸ್ಟಾರ್

ನಿಜ ಹೇಳಬೇಕಂದ್ರೆ ನನಗೆ ರಾಜಕೀಯ ವಿಷಯಗಳ ಬಗ್ಗೆ ಆಸಕ್ತಿ ಕಮ್ಮಿ. ಆದರೆ ಅದರರ್ಥ ದೇಶದ ಬಗ್ಗೆ ಕಾಳಜಿ ಅಥವಾ ಜವಾಬ್ದಾರಿ ಇಲ್ಲ ಅಂತಲ್ಲ. ಇಲ್ಲಿನ ವೃತ್ತಿಪರತೆ ಇಲ್ಲದ ಸ್ವಾರ್ಥ ರಾಜಕಾರಣದ ಬಗ್ಗೆ ಬೇಸರವಿದೆ. ಸಿನಿಮಾ ರಂಗದ ವ್ಯಕ್ತಿಗಳೂ ರಾಜಕೀಯ ಪ್ರವೇಶಿಸಿರುವುದು ನನ್ನ ಮಟ್ಟಿಗೆ ಒಂದು ಕುತೂಹಲ ಹುಟ್ಟಿಸಿದೆ. ಅದು ಸೋಲುಗೆಲುವಿನ ಬಗೆಗೆ ಮಾತ್ರವಲ್ಲ. ಚುನಾವಣೆಯ ನಂತರ ಅವರ ನಡೆ ಹೇಗಿರುತ್ತದೆ ಎಂಬುದನ್ನು ಗಮನಿಸುವ ಆಸಕ್ತಿ. ನನಗೆ ವೈಯಕ್ತಿಕವಾಗಿ ಯಾವ ಮಹಾನ್ ಸಮಸ್ಯೆಗಳೂ ಇಲ್ಲದಿರಬಹುದು. ಆದರೆ ಸಾಮಾಜಿಕವಾಗಿ ಇಲ್ಲಿ ಬಹಳಷ್ಟು ಸಮಸ್ಯೆಗಳಿವೆ. ಅವುಗಳಿಗೂ ನನಗೂ ಸಂಬಂಧವಿದೆ. ಆ ಕಾರಣಕ್ಕಾಗಿ ನಾನು ಜನಪ್ರತಿನಿಧಿಗಳನ್ನು ಪ್ರಶ್ನಿಸಬೇಕಿದೆ. ಹಾಗೆ ಪ್ರಶ್ನಿಸಲು ನಾನು ನನ್ನ ಮತದಾನದ ಕರ್ತವ್ಯವನ್ನು ನಿಭಾಯಿಸಬೇಕಿದೆ. ಇದನ್ನು ಹಕ್ಕು ಅಂದುಕೊಳ್ಳೋದಕ್ಕಿಂತ ಕರ್ತವ್ಯ ಎಂದುಕೊಂಡು ಎಲ್ಲರೂ ಮತದಾನ ಮಾಡಬೇಕಿದೆ. ಯಾಕಂದ್ರೆ ಇಲ್ಲಿ ನಮ್ಮ ಹಕ್ಕುಗಳ ಬಗೆಗೆ ನಮಗೆ ನಿರ್ಲಕ್ಷ್ಯ ಹೆಚ್ಚು. ಕಡ್ಡಾಯವಾದಾಗಲೇ ಎಲ್ಲರೂ ತಮ್ಮ ಕೆಲಸವನ್ನು ಮಾಡುವುದು. ನನ್ನ ಪ್ರಕಾರ ರಕ್ತದಾನ, ಅನ್ನದಾನ, ನೇತ್ರದಾನ ಇವೆಲ್ಲವುಗಳಷ್ಟೇ ಶ್ರೇಷ್ಠತೆ ಮತದಾನಕ್ಕೂ ಇದೆ. ಆದರೆ ಇದರ ಪಾವಿತ್ರತೆಯನ್ನು ಮತದಾರರು ಮಾತ್ರ ಅರಿತರೆ ಸಾಲದು, ರಾಜಕಾರಣಿಗಳೂ ಅರಿಯಬೇಕು. ವಾರ್ತಾವಾಹಿನಿಗಳಲ್ಲಿ ಈ ನಾಯಕರ ಕಚ್ಚಾಟ ನೋಡಿದರೆ ಅಸಹ್ಯವಾಗುತ್ತದೆ. ತಮ್ಮ ಸಾಧನೆಗಳ ಬಗ್ಗೆ, ತಮ್ಮ ಮುಂದಿನ ಯೋಜನೆಗಳ ಬಗ್ಗೆ ಮಾತಾಡುವ ಬದಲು ಪರಸ್ಪರ ದೂಷಣೆಯಲ್ಲೇ ಇವರು ಕಾಲ ಕಳೆಯುತ್ತಿರೋದು ದುರದೃಷ್ಟಕರ. ಇಂಥವರಿಂದ ದೇಶದ ಅಭಿವೃದ್ಧಿ ನಿರೀಕ್ಷಿಸೋದಾದರೂ ಹೇಗೆ ಎಂಬ ಆತಂಕವಿದೆ. ಆದರೂ ನಾವು ಯುವಜನತೆ ಮತದಾನದಿಂದ ವಿಮುಖರಾಗಕೂಡದು. ನಾನು ಹದಿನೇಳಕ್ಕೆ ಊರಿಗೆ ಹೋಗೋದಿದೆ. ಆದರೆ ವೋಟ್ ಮಾಡಿದ ನಂತರವೇ ನನ್ನ ಪಯಣ.
-ಕಾವ್ಯಾ ಶಾ
ಚಲನಚಿತ್ರ ಹಾಗೂ ಕಿರುತೆರೆ ನಟಿ, ನೃತ್ಯಪಟು, ಕಂಠದಾನ ಕಲಾವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


