ಆತ್ಮಶಕ್ತಿಯ ಮೂಲ ಅಖಂಡ ಬ್ರಹ್ಮಚರ್ಯ!
ವಿವೇಕಾನಂದರು ಅನಾರೋಗ್ಯದ ಕಾರಣ ಕಟ್ಟುನಿಟ್ಟಿನ ಪಥ್ಯದಿಂದ ಅವರ ಶರೀರ ಜರ್ಝರಿತವಾಗಿದ್ದರೂ ಅವರ ಮುಖಮಂಡಲದ ತೇಜಸ್ಸು, ಸ್ಮರಣಶಕ್ತಿ ಒಂದಿನಿತೂ ಕುಂದಿರಲಿಲ್ಲ.
ಒಂದು ದಿನ ಸ್ವಾಮೀಜಿ ಶಿಷ್ಯ ಶರಶ್ಚಂದ್ರನೊಂದಿಗೆ ಮಠದ ಗ್ರಂಥಾಲಯದಲ್ಲಿ ಅಡ್ಡಾಡುತ್ತಿದ್ದರು. ಆಗ ಅಲ್ಲಿದ್ದ ಪ್ರಸಿದ್ಧ ವಿಶ್ವಕೋಶ 'ಎನ್ಸೈಕ್ಲೋಪೀಡಿಯಾ ಬ್ರಿಟಾನಿಕಾ'ದ ಹೃಹತ್ ಸಂಪುಟಗಳನ್ನು ಕಂಡು ಶರಶ್ಚಂದ್ರ, 'ಇವುಗಳನ್ನು ಓದಿ ಮುಗಿಸಲು ಒಂದು ಜನ್ಮ ಸಾಲದು!' ಎಂದು ಉದ್ಗರಿಸಿದ. ತಕ್ಷಣ ಸ್ವಾಮೀಜಿ, 'ಏಕೆ ಸಾಧ್ಯವಿಲ್ಲ? ನಾನು ಅದಾಗಲೇ ಹತ್ತು ಸಂಪುಟಗಳನ್ನು ಓದಿ ಮುಗಿಸಿ ಈಗ ಹನ್ನೊಂದನೆಯದನ್ನು ಓದುತ್ತಿದ್ದೇನೆ. ಮೊದಲ ಹತ್ತು ಸಂಪುಟಗಳಲ್ಲಿ ಯಾವ ವಿಷಯದ ಮೇಲಾದರೂ ಪ್ರಶ್ನೆ ಕೇಳು' ಎಂದು ಸವಾಲೊಡ್ಡಿದರು. ಶರಶ್ಚಂದ್ರ ಕುತೂಹಲ ಸಮಾಧಾನಕ್ಕಾಗಿ ಹತ್ತು ಸಂಪುಟಗಳಲ್ಲಿ ಅತ್ಯಂತ ಕಠಿಣ ವಿಷಯಗಳಿಗೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳನ್ನು ಕೇಳಿದ. ಸ್ವಾಮೀಜಿ ಅವುಗಳಿಗೆಲ್ಲ ಕರಾರುವಾಕ್ಕಾಗಿ ಉತ್ತರಿಸಿದರಲ್ಲದೆ ಕೆಲವೊಮ್ಮೆ ಪಂಕ್ತಿಪಂಕ್ತಿಗಳನ್ನೇ, ಪುಟಪುಟಗಳನ್ನೇ ಬಾಯಿಪಾಠ ಮಾಡಿದಂತೆ ಒಪ್ಪಿಸಿಬಿಟ್ಟರು. ತನ್ನ ಗುರುವಿನ ಈ ವಿಸ್ಮಯಾದ್ಭುತ ಗ್ರಹಣಶಕ್ತಿಯನ್ನು ಕಂಡು ದಿಗ್ಭ್ರಾಂತನಾದ ಶಿಷ್ಯ, 'ಇದು ಮನುಷ್ಯಶಕ್ತಿಗೆ ಮೀರಿದ್ದು' ಎಂದ.
ಆಗ ಸ್ವಾಮೀಜಿ, 'ಇದರಲ್ಲಿ ಅಂತಹ ಪವಾಡವಾದದ್ದೇನೂ ಇಲ್ಲ. ಬ್ರಹ್ಮಚರ್ಯವನ್ನು ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ ಒಮ್ಮೆ ಕೇಳಿದ್ದನ್ನು ಅಥವಾ ಓದಿದ್ದನ್ನು ನೆನಪಿಟ್ಟುಕೊಂಡು ವರ್ಷಾಂತರಗಳ ಮೇಲೆಯೂ ಹಾಗೆಯೇ ಹೇಳಲು ಸಾಧ್ಯವಾಗುತ್ತದೆ. ಬ್ರಹ್ಮಚರ್ಯದ ಅಭಾವದಿಂದ ನಮ್ಮ ಇಡೀ ರಾಷ್ಟ್ರವೇ ಶಕ್ತಿ, ಬುದ್ಧಿಮತ್ತೆಯಲ್ಲಿ ಬಡವಾಗುತ್ತಿದೆ' ಎಂದರು.
-ಆನಂದ ಎಸ್.ಎನ್.
anandsn193@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

